ಕಲಬುರಗಿ/ಜೇವರ್ಗಿ ಯಡ್ರಾಮಿ ತಾಲೂಕ ಅಬಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಅಕ್ರಮ ಮಧ್ಯ ಮಾರಾಟ ಮಾಡುವವರನ್ನು ಹಿಡಿದುಕೊಂಡು ಹೋಗಿ ಸರಿಯಾದ ವಿಚಾರಣೆ ಮಾಡದೆ ಬಿಟ್ಟು ಕಳಿಸುತ್ತಿದ್ದಾರೆ ಇದರಿಂದ ಅಕ್ರಮ ಮಧ್ಯ ಮಾರಾಟ ದಂದೆ ನಿಲ್ಲುವುದಿಲ್ಲ ಈ ಅಕ್ರಮ ಮದ್ಯ ಯಾವ ವೈನ್ ಶಾಪ್ ನವರು ತಂದು ಮಾರಾಟ ಮಾಡಲು ಕೊಟ್ಟಿದೆ ಎಂದು ವಿಚಾರಣೆ ಮಾಡಿ ಆ ವೈನ್ ಶಾಪ್ ನವರ ತಪ್ಪು ಸಾಬೀತಾದಾಗ ಅವರ ವೈನ್ ಶಾಪ್ ಅನುಮತಿ ರದ್ದು ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳದೆ ಬಿಟ್ಟು ಕಳಿಸಿದ್ದಾರೆ ಇದು ದೊಡ್ಡ ತಪ್ಪು,
ಇದೆ ರೀತಿ ಜೇವರ್ಗಿ ಯಡ್ರಾಮಿ ತಾಲೂಕಿನ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದ ಎಲ್ಲಾ ವೈನ್ ಶಾಪ್ ಮಾಲೀಕರು ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಕೌಂಟರ್ ಸೇಲ್ ಅಲ್ಲದೆ ಅಕ್ರಮ ಮಾರಾಟ ಮಾಡಲು ಖರೀದಿಸುವವರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಕಿರಾಣಾ ಅಂಗಡಿ,ಪಾನ್ ಶಾಪ್, ಜನರಲ್ ಸ್ಟೋರ್,ಕೊಲ್ಡ್ ಡ್ರಿಂಕ್ಸ್ ಅಂಗಡಿ, ಮತ್ತಿತರ ಅಂಗಡಿ ಮತ್ತು ಕೆಲವು ಮನೆಗಳಿಗೆ ಹೋಗಿ ಎಷ್ಟೋ ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಎಗ್ಗಿಲ್ಲದೆ ಸಾಗಿದೆ,ಸಂಬಂಧ ಪಟ್ಟ ವೈನ್ ಶಾಪ್ ನವರಿಗೆ ಎಲ್ಲಾ ಗ್ರಾಮಗಳ ಮಹಿಳೆಯರು ಇದರ ಬಗ್ಗೆ ಎಷ್ಟೋ ಸಲ ವಿಚಾರ ಮಾಡಿದಾಗ ಮಹಿಳೆಯರ ಮೇಲೆ ದಬ್ಬಾಳಿಕೆಯಿಂದ ಗದರಿಸಿ ಕಳಿಸಿದ್ದಾರೆ ಇದು ನೋಡಿದರೆ ಮೇಲ್ನೋಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ವೈನ್ ಶಾಪ್ ಮಾಲೀಕರ ಜೊತೆ ಸೇರಿ ಈ ಅಕ್ರಮ ದಂಧೆ ನಡೆಸುತ್ತಿದ್ದಾರೆ ಎಂದು ಜನ ದೂರುತ್ತಿದ್ದಾರೆ ಇದರಿಂದ ವಿಶೇಷವಾಗಿ ನಮ್ಮ ಅವಳಿ ತಾಲೂಕಿನ ಹಳ್ಳಿಗಳಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳ ಸೌಂಸಾರ ಬೀದಿಗೆ ಬೀಳುತ್ತಿದೆ ಕುಡುಕ ಗಂಡನ ಕಾಟಕ್ಕೆ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇವರ ಗೋಳು ಯಾವ ಜನ ಪ್ರತಿನಿಧಿಯಾಗಲೀ ಪೊಲೀಸ್ ಇಲಾಖೆಯವರಾಗಲೀ ಅಬಕಾರಿ ಇಲಾಖೆಯ ಅಧಿಕಾರಿಗಳಾಗಲೀ ಯಾರಿಗೂ ಕೇಳದಂತಾಗಿದೆ ಇದು ಇದೇ ರೀತಿ ಮುಂದುವರೆದರೆ ಮುಂದಿನಗಳಲ್ಲಿ ಅವಳಿ ತಾಲೂಕಿನ ಇದರಿಂದ ನೊಂದ ಸಾವಿರಾರು ಹೆಣ್ಣು ಮಕ್ಕಳು ಸಮೇತ ನಮ್ಮ ರಾಜ್ಯ ರೈತರ ಸೇವಾ ಸಂಘಟನೆ ಮತ್ತು ಇನ್ನಿತರ ಜನ ಸೇವಾ ಸಂಘಟನೆಗಳು ಜಿಲ್ಲಾ ಅಬಕಾರಿ ಇಲಾಖೆ ಮತ್ತು ಜಿಲ್ಲಾ ಅಧಿಕಾರಿಗಳ ಕಛೇರಿ ಮುಂದೆ ಉಗ್ರ ಹೋರಾಟ ಮಾಡಲು ಅನುವು ಮಾಡಿಕೊಡದೆ ಎಲ್ಲಾ ವೈನ್ ಶಾಪ್ ಗಳ ಮೇಲೆ ಶೀಘ್ರವೆ ಸೂಕ್ತ ಕ್ರಮ ಕೈಗೊಂಡು ಅಕ್ರಮ ಮಧ್ಯ ಮಾರಾಟ ದಂಧೆ ತಡೆಯಬೇಕೆಂದು ಅವಳಿ ತಾಲೂಕಿನ ನೊಂದ ಬಡ ಕುಟುಂಬ ಮಹಿಳೆ ಮತ್ತು ಮಕ್ಕಳ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ರಾಜ್ಯ ರೈತರ ಸೇವಾ ಸಂಘ (ರಿ.)ದ ರಾಜ್ಯಾಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಎಸ್ ಉಮ್ಮರ್ಗಿ (ಕುಮ್ಮನಸಿರಸಗಿ) ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಕರುನಾಡ ಕಂದ ಪತ್ರಿಕೆಗೆ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.