ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೌಲಾನ್ ಆಜಾದ್ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ “ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು” ಈ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮೊಹ್ಮದ್ ಉಸ್ಮಾನ ಸಾಗರ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದರು ಹಾಗೂ ಮೌಲಾನಾ ಅಜಾದ್ ಮಾದರಿ ಶಾಲೆಯ ಮುಖ್ಯ ಗುರುಗಳಾದ ಲಕ್ಷ್ಮಿ ಮೇಡಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಡಾ. ತ್ರಿವೇಣಿ ಮೇಡಂ RBSK ವೈದ್ಯಾಧಿಕಾರಿಗಳು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡರು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ RKSK ಆಪ್ತ ಸಮಾಲೋಚಕರಾದ ಶ್ರೀ ರೇವಪ್ಪ ಪಿ.ಕೆ. ಅವರು ವಿಧ್ಯಾರ್ಥಿಗಳಿಗೆ ಹದಿ ಹರೆಯದವರ ಆರೋಗ್ಯ ಸಮಸ್ಯೆಗಳ ಕುರಿತು ಮನ ಮುಟ್ಟುವ ಹಾಗೆ ಮಾಹಿತಿ ನೀಡಿದರು ಆರೋಗ್ಯ,ಶುಚಿತ್ವ,ಸ್ವಚ್ಚತೆ,ಮಾನಸಿಕತೆ ಹಾಗೂ ಇತರೆ ವಿಷಯಗಳ ಬಗ್ಗೆ ವಿಧ್ಯಾರ್ಥಿಗಳ ಜೊತೆ ಸುಧೀರ್ಘ ಸಮಾಲೋಚನೆಯ ಚರ್ಚೆ ನಡೆಸಿದರು ಹಾಗೂ ವಿಧ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನು ಆಪ್ತ ಸಮಾಲೋಚಕರಿಗೆ ಮತ್ತು ವೈದ್ಯರಿಗೆ ಕೇಳಿ ಉತ್ತರ ಪಡೆದುಕೊಂಡರು WIFS ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಯಿತು ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಈ ಕಾರ್ಯಕ್ರಮದ ಕುರಿತು ಬಹಳ ಹರ್ಷ ವ್ಯಕ್ತ ಪಡಿಸಿದರು ಹಾಗೇಯೇ ಮುಖ್ಯ ಗುರುಗಳು ಪ್ರತಿ ವರ್ಷಕೊಮ್ಮೆ ನಮ್ಮ ಶಾಲೆಯಲ್ಲಿ ಆರೋಗ್ಯ ಸಮಲೋಚನಾ ಕಾರ್ಯಕ್ರಮದ ಕುರಿತು ಪ್ರತಿ ವರ್ಷ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅಂತ ಈ ಸಂದರ್ಭದಲ್ಲಿ ಎಲ್ಲಾ ಆಪ್ತ ಸಮಾಲೋಚಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಈ ಸಂದರ್ಭದಲ್ಲಿ ಶ್ರೀ ಪರಶುರಾಮ (ಸಹ ಶಿಕ್ಷಕರು),ನಾಗೇಂದ್ರಪ್ಪ ಗಡ್ಡಿ ಹಾಗೂ ಶ್ರೀ ದೇವಪ್ಪ ಸಹ ಶಿಕ್ಷಕರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.