ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರು ಜಿಲ್ಲಾಕೇಂದ್ರ ಮಾಡುವಂತೆ ಅಮರೇಗೌಡ ಮಲ್ಲಾಪೂರ ಒತ್ತಾಯ

ಸಿಂಧನೂರು ಜಿಲ್ಲೆಯನ್ನಾಗಿ ಘೋಷಿಸಲು ಸಿಂಧನೂರಿನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಮತ್ತು ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರುವಿಹಾಳ ಇವರುಗಳು ಮುಂದಿನ ತಿಂಗಳಲ್ಲಿ ನಡೆಯುವ ವಿಧಾನಸೌಧ ಕಲಾಪದಲ್ಲಿ ಸಿಂಧನೂರು ಜಿಲ್ಲೆ ಮಾಡಬೇಕೆಂದು ಧ್ವನಿ ಎತ್ತಬೇಕು ಎಂದು ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಒತ್ತಾಯಿಸಿದರು.

ಸಿಂಧನೂರು ಜಿಲ್ಲಾ ಕೇಂದ್ರವಾಗಬೇಕು ಎನ್ನುವುದು ಸಿಂಧನೂರು ಮತ್ತು ಮಸ್ಕಿ ಕ್ಷೇತ್ರಕ್ಕೆ ಬರುವ ಸಿಂಧನೂರು ತಾಲೂಕಿನ ಹಳ್ಳಿಗಳ ಜನರ ಧ್ವನಿಯಾಗಿದೆ. ಸಿಂಧನೂರು ತಾಲೂಕಿನ ಹಾಗೂ ಪಕ್ಕದಲ್ಲಿರುವ ಹಲವು ತಾಲೂಕಿನ ಜನತೆಗೆ ಆಡಳಿತಾತ್ಮಕ ಹಾಗೂ ಜಿಲ್ಲಾಡಳಿತದ ವಿವಿಧ ಸರಕಾರಿ ಸೌಲಭ್ಯಗಳು ಸೇರಿದಂತೆ ಇನ್ನಿತರ ಸರಕಾರಿ ಕೆಲಸಗಳಿಗಾಗಿ ತಾಲೂಕಿನ ಕೊನೆಯ ಭಾಗದ ಗ್ರಾಮಸ್ಥರು ರಾಯಚೂರು ಜಿಲ್ಲೆಗೆ ತೆರಳಲು ಸುಮಾರು 100 ಕಿಲೋಮೀಟರ್ ಕ್ರಮಿಸಬೇಕಾಗಿದೆ ಇದರಿಂದ ಸಾರ್ವಜನಿಕರಿಗೆ ಸಮಯ ವ್ಯರ್ಥ ಆರ್ಥಿಕವರೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಲು ಹಾಗೂ ಹಿಂದುಳಿದ ಪ್ರದೇಶವಾಗಲು ಮೂಲ ಕಾರಣವಾಗಿದೆ.

ಭತ್ತದ ಖನಿಜ ಎಂದು ಖ್ಯಾತಿ ಪಡೆದು ಅಭಿವೃದ್ಧಿಯತ್ತ ಸಾಗುತ್ತಿರುವ ಸಿಂಧನೂರು ತಾಲೂಕಿನ ಸರಿಸುಮಾರು 87,497 ಹೆಕ್ಟರ್ ನೀರಾವರಿ ಭೂಮಿ ಹೊಂದಿದ್ದು, ಸರಿ ಸುಮಾರು 29,804 ಒಣ ಬೇಸಾಯ ಹೊಂದಿರುವ ಮೂಲಕ ಅಂದಾಜು ಒಂದು ಲಕ್ಷಕ್ಕೂ ಅಧಿಕ ಎತ್ತರ ಫಲವತ್ತಾದ ಭೂಮಿಯನ್ನು ಹೊಂದಿರುವ ಸಿಂಧನೂರು ತಾಲೂಕಿನಲ್ಲಿ ತುಂಗಭದ್ರ ನದಿ ಎಡದಂಡೆ ಕಾಲುವೆಯ ಈ ಭಾಗದಲ್ಲಿ ಹಾದು ಹೋಗುವುದರಿಂದ ಉತ್ತಮ ಕೃಷಿ, ವಾಣಿಜ್ಯ ,ವ್ಯಾಪಾರ, ಕೈಗಾರಿಕೆ ,ಉತ್ತಮ ಸಾರಿಗೆ ವ್ಯವಸ್ಥೆ ಇರುತ್ತದೆ. ಸರ್ಕಾರಕ್ಕೆ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡುವ ಉದಾಹರಣೆಗೆ ಸಿಂಧನೂರು ತಾಲೂಕಿನ ಉಪ ನೊಂದಣಿ ಇಲಾಖೆ ಒಂದರಿಂದಲೇ ವಾರ್ಷಿಕವಾಗಿ ಸರ್ಕಾರಕ್ಕೆ ಸರಿ ಸುಮಾರು 19 ಕೋಟಿ ಮತ್ತು ಸಾರಿಗೆ ಇಲಾಖೆಯಿಂದ ವಾರ್ಷಿಕವಾಗಿ ಸುಮಾರು 20 ಕೋಟಿ ಕೃಷಿ ಮಾರುಕಟ್ಟೆಯಿಂದ ವಾರ್ಷಿಕವಾಗಿ ಸುಮಾರು 10 ಕೋಟಿ ರೂಪಾಯಿ ಆದಾಯ ಒದಗಿಸಿರುತ್ತಿರುವ ದೊಡ್ಡ ತಾಲೂಕು ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಟ್ರಾಕ್ಟರ್ ಮಾರಾಟ ಮಾಡುವ ಮೂಲಕ ಹೆಸರುವಾಸಿಯಾಗಿದೆ, ಅತಿ ದೊಡ್ಡ ಎಪಿಎಂಸಿ ಕೃಷಿ ಮಾರುಕಟ್ಟೆ ಹೊಂದಿದ್ದು ಬೃಹಪ್ರಮಾಣದ ಅತಿ ಹೆಚ್ಚು ಸೋನಾ ಮಸೂರಿ ಭತ್ತ ಬೆಳೆಯುವ ತಾಲೂಕು ಆಗಿದ್ದು ಕೇಂದ್ರ ಸರ್ಕಾರದ ಸಿ ಎಸ್ ಎಫ್ ನಲ್ಲಿ ಸುಮಾರು 7500 ಎಕ್ಕರೆಗಳಷ್ಟು ಭೂಮಿಯನ್ನು ಹೊಂದಿದ ರಾಷ್ಟ್ರೀಯ ಬೀಜ ನಿಗಮದಿಂದ ವಾರ್ಷಿಕವಾಗಿ ಸಾವಿರಾರು ಕೋಟಿ ಟನ್ ಗಳು ಅಷ್ಟು ಭತ್ತ ಜೋಳ ಮೆಕ್ಕೆಜೋಳ ಕಡಲೇ ಸೇರಿದಂತೆ ಇನ್ನಿತರ ಬೀಜಗಳನ್ನು ಉತ್ಪಾದನೆಯ ಬೃಹತ್ ನಿಗಮವನ್ನು ಸಿಂಧನೂರು ತಾಲೂಕು ಹೊಂದಿದೆ.

ರಾಯಚೂರು ತಾಲೂಕಿನ ನಗರಸಭೆ ಒಂದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿಯೇ ನಗರಸಭೆ ಹೊಂದಿದ ಹಾಗೂ 31 ದೊಡ್ಡ ವಾರ್ಡ್ಗಳನ್ನು ಹೊಂದಿರುವ ಸುಮಾರು 1.5 ಲಕ್ಷ ಜನಸಂಖ್ಯೆ ಹೊಂದಿರುವ ನಗರವಾಗಿ ನಗರವಾಗಿದ್ದು ಸುಮಾರು ಒಂದು 172 ಹಳ್ಳಿಗಳು ಹಾಗೂ 30 ಪಂಚಾಯಿತಿ ಗಳನ್ನು ಹೊಂದಿದ ಬೃಹತ್ ತಾಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ವಿಸ್ತೀರ್ಣ ಆಸ್ತಿ ಮತ್ತು ದೊಡ್ಡ ಹಳ್ಳಿಯಾದ ಗಾಂಧಿನಗರ ಸಿಂಧನೂರು ತಾಲೂಕಿನಲ್ಲಿರುವ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಮೈಬೂಬ್ ನಗರದಿಂದ ಗಿಣಿಗೇರಾ ರೈಲ್ವೆ ಕಾಮಗಾರಿ ಸಿಂಧನೂರು ನಗರದಲ್ಲಿ ಪ್ರಗತಿಯಲ್ಲಿದ್ದು ಮುಂದಿನ ವರ್ಷ ರೈಲ್ವೆ ಸ್ಟೇಷನ್ ಆರಂಭವಾಗುವ ಮೂಲಕ ಜನತೆಗೆ ರೈಲು ಪ್ರಯಾಣದ ಸೌಕರ್ಯವನ್ನು ವ್ಯಾಪಾರ ವಹಿವಾಟು ಸರಕು ಸಾಗಣಿಯ ಕೇಂದ್ರ ಬಿಂದುವಾಗಲಿದೆ, ಸಿಂಧನೂರು ಜಿಲ್ಲೆಯಾಗಿಸಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಸಿಂಧನೂರು ತಾಲೂಕು ಹೊಂದಿರುತ್ತದೆ.ಕಲ್ಯಾಣ ಕರ್ನಾಟಕದ ಹೃದಯ ಭಾಗವಾಗಿರುವ ಸಿಂಧನೂರು ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಸುತ್ತಮುತ್ತಲಿನ ಜನರ ಕೂಗಾಗಿದೆ ಸಿಂಧನೂರು ಮಸ್ಕಿ ಲಿಂಗಸ್ಗೂರು ಕಾರಟಗಿ ತಾವರಗೇರಾ ಸಿರಗುಂಪ್ಪ ಜನರ ಆಶಯದಂತೆ ಸಿಂಧನೂರು ಜಿಲ್ಲೆಯನ್ನಾಗಿ ಮಾಡಬೇಕು.
ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಲವು ಸಾಧಿಸಿದ್ದು ಕರ್ನಾಟಕ ಸರಕಾರನು ಕಾಂಗ್ರೆಸ್ ಸರ್ಕಾರ ಆಗಿದ್ದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಿಂಧನೂರು ಜಿಲ್ಲೆಯನ್ನಾಗಿ ಮಾಡಬೇಕೆಂದು ಈ ಮೂಲಕ ಕ್ಷೇತ್ರದ ಸಮಸ್ತ ಜನತೆಯ ಹಿತದೃಷ್ಟಿಯಿಂದ ಸಿಂಧನೂರು ಜಿಲ್ಲೆ ಆಗಬೇಕೆಂದು ತಾಲೂಕಿನ ಎಲ್ಲಾ ಸಂಘಗಳು ಮತ್ತು ಸಿಂಧನೂರು ಜಿಲ್ಲಾ ಕೇಂದ್ರವಾಗಲು ಹಲವಾರು ವರ್ಷಗಳಿಂದ ಸಭೆ ಹೋರಾಟಗಳನ್ನು ಮಾಡುತ್ತಾ ಬಂದರೂ ಏನೂ ಪ್ರಯೋಜನವಾಗಲಿಲ್ಲ ಈ ಬಾರಿ ತಮ್ಮದೇ ಸರ್ಕಾರದ ಅಧಿಕಾರಕ್ಕೆ ಬಂದಿದೆ ಮತ್ತು ತಾವುಗಳು ಕೂಡಾ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಿಂಧನೂರು ಜಿಲ್ಲಾಕೇಂದ್ರದ ಬಗ್ಗೆ ತಿಳಿಸಿದ್ದೀರಿ ಮತ್ತು ತಾವುಗಳು ಗೆದ್ದನಂತರವು ಸಿಂಧನೂರು ಜಿಲ್ಲಾಕೇಂದ್ರವಾಗಿಸಲು ಮೊದಲ ಬಾರಿಗೆ ಮಾತನಾಡಿದ್ದೀರಿ ಅದ್ದರಿಂದ ತಾವುಗಳು ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸಿಂಧನೂರು ಜಿಲ್ಲಾಕೇಂದ್ರವಾಗಿಸಲು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಬೇಕೆಂದು ಮನವಿ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿಯವರಿಗೆ ಈ ಮೂಲಕ ಮನವಿ ಮಾಡುತ್ತೇವೆ ಎಂದು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಶಾಸಕರಿಗೆ ಮನವಿ ಮಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ