ಲಿಂಗಸುಗೂರು ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ
(ವಾಲ್ಮೀಕಿ ನಾಯಕ) ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು,ಅದರಂತೆ ತಾಲೂಕಿನ
ಸುತ್ತಮುತ್ತ ಹಳ್ಳಿಗಳಿಂದ ಲಿಂಗಸುಗೂರು ಪಟ್ಟಣಕ್ಕೆ ಪ್ರತಿನಿತ್ಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು
ಹೆಚ್ಚಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಸ್ಸುಗಳಲ್ಲಿ ಅಲೆದಾಡುತ್ತಿದ್ದಾರೆ ಪ್ರತಿನಿತ್ಯ ಪಟ್ಟಣಕ್ಕೆ ಆಗಮಿಸಿ
ಮರಳಿ ಹಳ್ಳಿಗಳಿಗೆ ಹೋಗಿ ವ್ಯಾಸಾಂಗ ಮಾಡಲು ಬಹಳಷ್ಟು ತೊಂದರೆಯಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಸರ್ಕಾರಿ ನೌಕರಿ ಹಿಡಿಯುವಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಗರಿಷ್ಠ ಮಟ್ಟದ ಅಂಕ ಗಳಿಸುವಲ್ಲಿ ವಿಫಲರಾಗುತ್ತಿದ್ದು,ಕಾರಣ ಸರ್ಕಾರಿ ನೌಕರಿ ಪಡಿಯಬೇಕು ಎಂದರೆ ಹೆಚ್ಚಿನ ವಿದ್ಯಾಭ್ಯಾಸ ಬೇಕೇ ಬೇಕು ಆದರೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಬದಲು ಬಸ್ ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತುಂಬ ಪರಿಣಾಮ ಬಿರುತ್ತಿದ್ದು ವಸತಿ ನಿಲಯ ತುಂಬ ಅವಶ್ಯಕವಾಗಿದೆ,
ಇಲ್ಲಿಯವರೆಗೂ ಪರಿಶಿಷ್ಟ ಪಂಗಡದ ಬಾಲಕಿಯರಿಗೆ ತಾಲೂಕಿನಲ್ಲಿ ಯಾವುದೇ ತರಹದ
“ವಸತಿ ನಿಲಯ”ಗಳು ಇಲ್ಲದೇ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಆದ್ದರಿಂದ
ತಾವುಗಳು ಆದಷ್ಟು ಬೇಗನೆ ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ (ವಾಲ್ಮೀಕಿ ನಾಯಕ)
ಬಾಲಕಿಯರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳು
ಮತ್ತು ಸರಕಾರದ ಗಮನಕ್ಕೆ ತಂದು ಮಾಡಿಸಬೇಕೆಂದು ಈ ಮೂಲಕ
1) ಪರಿಶಿಷ್ಟ ಪಂಗಡದ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ “ವಸತಿ ನಿಲಯ”
2) ಪರಿಶಿಷ್ಟ ಪಂಗಡದ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ “ವಸತಿ ನಿಲಯ”
ನಮ್ಮ ಲಿಂಗಸುಗೂರು ತಾಲೂಕಿನಲ್ಲಿ
ವಸತಿ ನಿಲಯಗಳನ್ನು ಮಂಜೂರ ಮಾಡಬೇಕೆಂದು
ಮಾನ್ಯ ಶಾಸಕರು ಲಿಂಗಸೂಗೂರ ವಿಧಾನಸಭಾ ಕ್ಷೇತ್ರ ಲಿಂಗಸಗೂರು,
ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರ,
ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಲಿಂಗಸೂಗೂರ
ಇವರಿಗೆ ವಸತಿ ನಿಲಯ ಮಂಜೂರಿ ಮಾಡಬೇಕೆಂದು ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಾಜೇಶ ನಾಯಕ,ತಾಲೂಕಾಧ್ಯಕ್ಷ ಬಾಬು ನಾಯಕ, ಅಶೋಕ ನಾಯಕ ದಿದ್ದಗಿ,ಅಜಯ ಕುಮಾರ ಶಿವಂಗಿ,ಜೀವಾ ನಾಯಕ,ನಲ್ಲರೆಡ್ಡಿ ನಾಯಕ,ತಿಪ್ಪಣ್ಣ ನಾಯಕ,ಅರವಿಂದ ನಾಯಕ,ಪಟೇಲ ನಾಯಕ,ಬಸವರಾಜ ನಾಯಕ,ಯಲ್ಲನಗೌಡ,ಗಂಗಾಧರ ನಾಯಕ ಮತ್ತು ಇತರ ಸಹೋದರರು ಉಪಸ್ಥಿತಿ ಇದ್ದರು.ಸಮಾಜಕ್ಕೆ ಆಗುತ್ತಿರುವ ತೊಂದರೆಗೆ ಸ್ಪಂದಿಸಿ ಇಂದು ಆಗಮಿಸಿದ ಎಲ್ಲಾ ಆತ್ಮಿಯರಿಗೆ ಧನ್ಯವಾದಗಳನ್ನು ಅಧ್ಯಕ್ಷರು ತಿಳಿಸಿದರು
ವರದಿ:ಪುನೀತಕುಮಾರ