ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿಯಲ್ಲಿ ಮಳೆರಾಯನ ಆಗಮನಕ್ಕಾಗಿ ಕತ್ತೆಗಳ ಮದುವೆ ನೆರವೇರಿತು.ಮಳೆಗಾಗಿ ನಾನಾ ವಿಧದ ಪೂಜೆ ಹಾಗೂ ಧಾರ್ಮಿಕ ಸಂಪ್ರದಾಯಗಳ ಆಚರಣೆಗಳನ್ನು ನಾವು ನೋಡಿದ್ದೇವೆ, ಊರಿನ ಗ್ರಾಮಸ್ತರೆಲ್ಲಾ ಕೂಡಿಕೊಂಡು 8000 ರೂಪಾಯಿಗೆ ಕತ್ತೆಗಳನ್ನು ಖರೀದಿಸಿ ಅದೇ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಾಜಾ,ಭಜಂತ್ರಿಯೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ಆ ಬಳಿಕ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿಸಲಾಯಿತು.ಕಾಕತಾಳೀಯವೆಂಬಂತೆ ಮದುವೆ ಮಾಡಿಸಿದ ಕೆಲವೇ ಅವಧಿ ಒಳಗೆ ಮಳೆರಾಯನ ಆಗಮನವಾಗಿದೆ ಇದರಿಂದ ಗ್ರಾಮದ ಎಲ್ಲಾ ರೈತಾಪಿ ವರ್ಗದವರು, ಗ್ರಾಮಸ್ಥರು ಮಳೆರಾಯನ ಆಗಮನದಿಂದ ಎಲ್ಲರೂ ಸಂತಸಗೊಂಡಿದ್ದಾರೆ.
ವರದಿ:ಮಹಾದೇವ ವಿಶ್ವಕರ್ಮ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.