ತುಮಕೂರು/ಕುಣಿಗಲ್:ಇಂದಿರಾ ಕ್ಯಾಂಟೀನ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದು,ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ಸ್ವಚ್ಛವಾಗಿಡಬೇಕು, ಸ್ವಚ್ಛವಾಗಿಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುರಸಭಾ ಎಂಜಿನಿಯರ್ ಚಂದ್ರಶೇಖರ್‌ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ಗ್ರಾ.ಪಂ.ಮೀಸಲಾತಿ ನಿಗಧಿ ಪಡಿಸುವ ಸಭೆ ಮುಗಿದ ಬಳಿಕ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲಿಸಿ,ಕುಡಿಯುವ ನೀರಿನ ಫಿಲ್ಟರ್,ಫ್ರಿಡ್ಜ್,ಗ್ರೈಂಡರ್ ಕಾರ್ಯನಿರ್ವಹಿಸದೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತೀವ್ರ ಅಸಮಧಾನಗೊಂಡ ಅವರು ಕೂಡಲೇ ರಿಪೇರಿ ಮಾಡಿಸಿ ಸ್ಪಚ್ಛತೆ ಕಾಪಾಡಿಕೊಳ್ಳಿ ಎಂದರು ನಂತರ ಶೌಚಾಲಯ ಪರಿಶೀಲನೆ ನೆಡೆಸಿ ಅವ್ಯವಸ್ಥೆ,
ಅನೈರ್ಮಲ್ಯ ಕಂಡು ಇಂದಿರಾ ಕ್ಯಾಂಟಿನ್‌ಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ಸ್ಪಚ್ಚತೆಯಿಂದಿರಲಿ,ಅನೈರ್ಮಲ್ಯಕ್ಕೆ ದಾರಿ ಮಾಡಿಕೊಡಬೇಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಸೀಲ್ದಾರ್ ಮಹಬಲೇಶ್ಟರ್,ಇನ್ಸ್‌ಪೆಕ್ಟರ್ ಗುರುಪ್ರಸಾದ್,ಪುರಸಭಾ ಮುಖ್ಯಾಧಿಕಾರಿ ಶಿವಪ್ರಸಾದ್ ಇದ್ದರು.
ವರದಿ-ಮನುಕುಮಾರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.