ಉ.ಕ/ಮುಂಡಗೋಡ:ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಅನೇಕ ಅಧಿಕಾರಿಗಳ ನಡುವೆ ಅಪವಾದದಂತಿರುವ ಮುಂಡಗೋಡ ಗ್ರಾಮ ಚಾವಡಿಯಲ್ಲಿ ಶಾನುಭೋಗರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಪಾಲ್ ಸಾಹೇಬರು ಜನ ಹಣ ನೀಡದಿದ್ದರೆ ಅವರ ಕಡತಗಳನ್ನು ಬಿಸಾಕುವ ಹಾಗೂ ಹಣ ನೀಡಿದರೆ ಮಾತ್ರ ಅವರ ಕಡತಗಳಿಗೆ ಸಹಿ ಹಾಕುವ ಛಾತಿ ಬೆಳೆಸಿಕೊಂಡಿದ್ದು,ಇದು ಪ್ರತಿ ನಿತ್ಯ ಕಚೇರಿಗೆ ಬರುವ ಜನ ಸಾಮಾನ್ಯರಿಗೆ ಇದು ನಿಜಕ್ಕೂ ಕಿರಿಕಿರಿ ಆಗಿದೆ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಗ್ರಾಮ ಚಾವಡಿಗೆ ಪ್ರತಿನಿತ್ಯ ನೂರಾರು ನಾಗರಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಬರುತ್ತಾರೆ. ಬಂದವರಿಂದ ತಲಾ ಕನಿಷ್ಠ 100 ಗರಿಷ್ಠ 400 ರೂಪಾಯಿ ವರೆಗೂ ಹಣ ಪೀಕುವ ಶಾನುಭೋಗ ಗೋಪಾಲ್ ಅವರ ಆಟಕ್ಕೆ ಅಂಕುಶ ಹಾಕಬೇಕಿದೆ ಒಬ್ಬರಿಂದ ಕನಿಷ್ಠ 100 ಪಡೆದರೂ,ಕಚೇರಿಗೆ ಬರುವ 20 ಮಂದಿಗೆ 2000 ಹಣ ಆಗುತ್ತದೆ ಅಲ್ಲಿಗೆ ತಿಂಗಳಿಗೆ ಸರ್ಕಾರ ನೀಡುವ ಸಂಬಳ ಬಿಟ್ಟು 50,000 ಸಾವಿರ ರೂಪಾಯಿ ಜನ ನೀಡುವ ಲಂಚದ ಹಣವೇ ಜಾಸ್ತಿ ಆಗುತ್ತದೆ ಬಡ ಜನರಿಗೆ ಅನುಕೂಲವಾಗಲು ಸರ್ಕಾರ ಗ್ರಾಮ ಚಾವಡಿ,ಅಟಲ್ ಜೀ ಜನಸ್ನೇಹಿ ಕೇಂದ್ರ ಗಳಂತಹ ಕಚೇರಿಗಳನ್ನು ತೆರೆದರೂ ಅಧಿಕಾರಿಗಳು
ಮಾಡುವ ಬ್ರಷ್ಟಾಚಾರ ಸರ್ಕಾರಗಳಿಗೆ ಕೆಟ್ಟ ಹೆಸರನ್ನು ತರುತ್ತದೆ ಶಾನುಭೋಗರ ಗೋಪಾಲ್ ಅವರು ಜನ ಹಣ ನೀಡದಿದ್ದರೆ ಅವರನ್ನು ಕಚೇರಿಯಿಂದ ಹೊರಗೆ ಕಳುಹಿಸುತ್ತಾರೆ ಹಾಗೂ ಅವರ ಕಡತಗಳಿಗೆ ಸಹಿ ಹಾಕದೇ ನಿಮ್ಮ ಫೈಲ್ ಸರಿ ಇಲ್ಲ ಹಾಗೆ ಹೀಗೆ ಎಂದು ಹೇಳಿ ಜನರನ್ನು ಯಾಮಾರಿಸುತ್ತಾರೆ ಎಂದು ಸಾರ್ವಜನಿಕರು ಪತ್ರಿಕೆಗೆ ಮಾಹಿತಿ ಕೊಟ್ಟಾಗ ನೈಜತೆ ಪರೀಕ್ಷಿಸಲು ತೆರಳಿದ ಕರುನಾಡ ಕಂದ ಸುದ್ದಿ ಪತ್ರಿಕೆಗೆ ಕಂಡದ್ದು ನೈಜ ಚಿತ್ರಣ ಸರ್ಕಾರ ಕಾಲಕಾಲಕ್ಕೆ ಸರಿಯಾಗಿ ಸಂಬಳ ನೀಡಿದರೂ ಲಂಚಕ್ಕೆ ಕೈ ಒಡ್ಡುವ ಇಂತವರಿಗೆ ಜನ ಹಣ ನೀಡದೆ ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದರೆ,ಇಂತಹ ಸಮಸ್ಯೆಗಳು ಪರಿಹಾರವಾಗುತ್ತವೆ.
ತಹಶೀಲ್ದಾರರ ಪ್ರತಿಕ್ರಿಯೆ ಏನು?
ಗ್ರಾಮ ಚಾವಡಿಯಲ್ಲಿ ಜನರಿಂದ ಹಣ ಕೀಳುವ ಶಾನುಭೋಗ ಗೋಪಾಲರ ಬಗ್ಗೆ ವಿವರಿಸಿದಾಗ ತಹಶೀಲ್ದಾರರು ಜನರಿಗೆ ಕಚೇರಿಗಳಲ್ಲಿ ಹಣ ನೀಡಬೇಡಿ ಎಂದು ಈ ಹಿಂದೆ ಅನೇಕ ಬಾರಿ ಹೇಳಿದರೂ ಜನ ಜಾಗೃತ ರಾಗುತ್ತಿಲ್ಲ ಈ ಕುರಿತು ಅಧಿಕಾರಿಗೆ ಬುದ್ದಿ ಹೇಳುತ್ತೇನೆ ಎಂದು ವಿವರಣೆ ನೀಡಿದರು.
ಏನೇ ಆಗಲಿ ದುಡ್ಡಿಲ್ಲ ಎಂದರೆ ಜನಸಾಮಾನ್ಯನ ಕಷ್ಟಕ್ಕೆ ಆಗದ ಇಂತಹ ಜನ ವಿರೋಧಿ ಅಧಿಕಾರಿಗಳಿಗೆ ಖಡಕ್ ತಹಶೀಲ್ದಾರ್ ಎನಿಸಿಕೊಂಡಿರುವ ಶಂಕರ್ ಗೌಡಿ ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.