ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆ
ರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆ
ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ವರದಿ ಮಾಡಿದ ಪತ್ರಕರ್ತರಿಗೆ ಬೆದರಿಕೆ ಕರೆಗಳು ಹೋಗುತ್ತವೆ ಕೆಲವೊಂದು ಸಲ ನಿಮ್ಮ ಆಪ್ತ ಸಹಾಯಕರು ಪತ್ರಿಕೆಯನ್ನೇ ಮಾರಾಟ ಮಾಡದ ಹಾಗೆ ಮಾಡಿಬಿಡುತ್ತಾರೆ ಇದೆಲ್ಲವೂ ಏನು ಸೂಚಿಸುತ್ತದೆ ಎಂದರೆ ತಾಲೂಕ ಆಡಳಿತದ ಮೇಲೆ ನಿಮ್ಮ ಹಿಡಿತವಿಲ್ಲ ಇಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಿಮಗೆ ಗೊತ್ತಿಲ್ಲ ಕೇಳಲು ಹೋದ ಮಾಹಿತಿ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರು ನಿಮಗೆ ಶತ್ರುಗಳ ತರ ಕಾಣಿಸುತ್ತಾರೆ ಸಂವಿಧಾನ ಬದ್ಧವಾಗಿ ನಾವು ಎಲ್ಲವೂ ಕೂಡಾ ಮಾಡುತ್ತಿದ್ದೇವೆ ನಿಮಗೆ ಸಂವಿಧಾನದ ಆಶಯಗಳ ಬಗ್ಗೆ ಗೊತ್ತಿದ್ದರೆ ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪೋಲಿಸ್ ಇಲಾಖೆಯನ್ನು ಬಳಸಿಕೊಂಡು ಮಾಹಿತಿ ಹಕ್ಕು ಹೋರಾಟಗಾರರು ಮತ್ತು ನಿಮ್ಮ ವಿರುದ್ಧ ಮಾತನಾಡುವರನ್ನು ಧ್ವನಿ ಎತ್ತದಂತೆ ಮಾಡುತ್ತಿರುವ ನಿಮ್ಮ ಪ್ರಯತ್ನ ಖಂಡನೀಯವಾದದ್ದು ನಿಮ್ಮ ಸರ್ವಾಧಿಕಾರದ ಧೋರಣೆ ಬಿಟ್ಟುಬಿಡಿ ನಾವು ಮಾಹಿತಿ ಹಕ್ಕು ಕಾರ್ಯಕರ್ತರು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತೇವೆ ನಮಗೆ ಯಾರ ಹಂಗಿಲ್ಲ ಸಂವಿಧಾನ ವಿರೋಧಿ ಕೆಲಸ ಮಾಡಿದವರು ಮಾಡಿದವರು ನೀವು ಆದರೂ ಸರಿ ಅಥವಾ ಸರ್ಕಾರಿ ಅಧಿಕಾರಿಗಳಾದರೂ ಸರಿಯೇ ಖಂಡಿಸುವ ಹಕ್ಕು ನನಗೆ ಸಂವಿಧಾನ ಕೊಟ್ಟಿದೆ ನಾವು ಖಂಡಿಸುತ್ತೇವೆ. ಎಂದು ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ವಸ್ತ್ರದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.