ಸಿಂಧನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಅದ್ಯಕ್ಷೆ ಜೋಗತಿ ಮಂಜಮ್ಮನವರು ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಜೋಗತಿ ಮಂಜಮ್ಮನವರು ಸಿಂಧನೂರಿನ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರು ಕಡಿದು ಹಾಕಿದ ಆಲದ ಮರಕ್ಕೆ ಅಮರ ಶ್ರೀ ಎಂದು ನಾಮಕರಣ ಮಾಡಿರುವುದು ತುಂಬಾ ಶ್ಲಾಘನೀಯ.ಇಲ್ಲಿನ ನಾಮಫಲಕ ನೋಡಿ ನನಗೆ ದುಃಖವೆನಿಸುತ್ತದೆ ಯಾಕೆಂದರೆ ನಾವು ಯಾಕೆ ಇಷ್ಟು ಜೀವನದಲ್ಲಿ ನಿಗೂಡರಾಗಿದ್ದೇವೆ,ಮರಗಳನ್ನು ಕಡಿದು ಹಿಂಸೆ ನೀಡುತ್ತಿದ್ದೇವೆ,ಅವು ನಮ್ಮಂಥನೇ ಜೀವಿಸುತ್ತವೆ, ನಾವು ಯಾವರೀತಿ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ ಅದೇರೀತಿ ನಮಗೆ ನೆರಳನ್ನು ಕೊಡುತ್ತವೆ,ಬೇಸಿಗೆಯಲ್ಲಿ ಮರಕಡಿಯುವ ಮನುಷ್ಯ ಕೂಡಾ ನೆರಳನ್ನು ಹುಡುಕುತ್ತಾನೆ ಆದರೆ ಅಂತಹ ಮನುಷ್ಯರೇ ಒಂದು ಗಿಡವನ್ನು ನೆಟ್ಟು ಅದನ್ನು ಬೆಳಸಲಿಕ್ಕೆ ಅವಕಾಶ ಕೊಡುವುದಿಲ್ಲ ಇದರಿಂದ ಮನುಷ್ಯ ಎಷ್ಟು ಕ್ರೂರಿ ಎಂಬುದು ಸತ್ಯವಾಗುತ್ತದೆ.ಪ್ರತಿಯೊಬ್ಬರೂ ಇದನ್ನು ತಿಳಿದು ಸಸಿಗಳನ್ನು ಬೆಳೆಸಿ ಉಳಿಸಿದಾಗ ಮಾತ್ರ ನಾವು ಪರಿಸರಕ್ಕೆ ಒಂದು ಸಣ್ಣ ಕೊಡುಗೆ ನೀಡಬಹುದಾಗಿದೆ ಅದನ್ನು ಸಿಂಧನೂರಿನ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಮಾಡುತ್ತಿದ್ದಾರೆ ನಾವು ಅವರಿಗೆ ಸಹಕಾರ ಸಹಾಯ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ,ಉಮೇಶಗೌಡ, ವೆಂಕಟರಡ್ಡಿ ಹೆಡಗಿನಾಳ,ರಂಜಾನ್ ಸಾಬ್, ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ,ಗಿರಿಸ್ವಾಮಿ ಹೆಡಗಿನಾಳ,ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ಚನ್ನಪ್ಪ ಕೆ. ಹೊಸಹಳ್ಳಿ ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್ ಇತರರು ಹಾಜರಿದ್ದರು .