ಪವಿತ್ರ ರಂಜಾನ್ ತಿಂಗಳ ಮುಗಿದ ನಂತರ ಬರುವ ಹಬ್ಬವೆ “ಬಕ್ರೀದ್” ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮುಸ್ಲಿಂ ಪ್ರವಾದಿ ಇಬ್ರಾಹಿಂರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು
ಒಂದು ಸಲ ಪ್ರವಾದಿ ಇಬ್ರಾಹಿಂರಿಗೆ ಅಲ್ಲಾಹನು ಕನಸಿನಲ್ಲಿ ಬಂದು ನಿನ್ನ ಏಕೈಕ ಪುತ್ರ ಇಸ್ಮಾಯಿಲರನ್ನು ನನಗೆ ಬಲಿ ಕೊಡಬೇಕೆಂದು ಕೇಳಿದನೆಂದು,ಪ್ರವಾದಿ ಇಬ್ರಾಹಿಂರು ಒಂದು ಕತ್ತಿಯನ್ನುತೆಗೆದುಕೊಂಡು ಮಗನನ್ನು ಕೊಲ್ಲಲು ಹೋದಾಗ ಅಲ್ಲಾಹನು ಪ್ರತ್ಯಕ್ಷನಾಗಿ,ನನ್ನ ಮಾತಿಗೆ ತಕ್ಕನಾಗಿ ನಡೆದಿರುವೆ,ಅದಕ್ಕೆ ನಿನ್ನ ಮಗನ ಬಲಿ ಕೊಡುವುದು ಬೇಡ,ಬದಲಾಗಿ ಒಂದು ಕುರಿಯನ್ನು ಬಲಿಕೊಡು ಎಂದು ಹೇಳಿರುವ ಹಬ್ಬ ವೇ ಬಕ್ರೀದ್ ಹಬ್ಬವಾಗಿದೆ.ಇನ್ನೊಂದು ರೀತಿಯಲ್ಲಿ ಇದು ಚಂದ್ರನ ದರ್ಶನ ಪಡೆದು ಹತ್ತು ದಿವಸದ ನಂತರ ಆಚರಿಸುವ ಹಬ್ಬವೆಂದು ಇತಿಹಾಸ ಹೇಳುತ್ತದೆ.ಈ ಹಬ್ಬವನ್ನು ಜೇರಟಗಿ ಗ್ರಾಮದಲ್ಲಿ ಇಂದು ಮುಸ್ಲಿಂ ಬಂಧುಗಳು ಭೇದ ಭಾವ ಇಲ್ಲದೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿದೆ ಜೇವರ್ಗಿ ತಾಲೂಕು ಹಸಿರು ಸೇನೆ ಕಾರ್ಯದರ್ಶಿಯಾದ ಮೈಹಿಬೂಬ ನದಾಫ್,ಇಬ್ರಾಹಿಂ,ಮಶಾಖ ಸಾಬ್, ದಸ್ತಗಿರ ಸಾಬ್ ಸೈಯದ್,ರಫೀಕ್ ನದಾಫ್ ಇನ್ನು ಅನೇಕ ಮುಸ್ಲಿಂ ಒಂದು ಬಳಗದವರ ಜೊತೆ ಸೇರಿಕೊಂಡು ಬಕ್ರೀದ್ ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಮುಸ್ಲಿಂ ಬಾಂಧವರಿಗೆ ಒಳ್ಳೆಯ ಮನಸ್ಸು,ತ್ಯಾಗ,ಭಾವೈಕ್ಯತೆಯನು ಆ ಅಲ್ಲಾಹನು ಕರುಣಿಸಲಿ ಎಂದು ರಾಹುಲ್ ಸರ್ ಶಿಕ್ಷಕರು,ತಾಲೂಕ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜೇವರ್ಗಿ ತಾಲೂಕ ಸಹ ಕಾರ್ಯದರ್ಶಿಯಾದ ಮಹಾಂತೇಶ ಖೈನೂರ ಅವರು ಸೇರಿದಂತೆ ಹಲವರು ಶುಭಾಶಯಗಳನ್ನು ಕೋರಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.