ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದಲ್ಲಿ ನೂರಾರು ಸಮಸ್ಯೆಗಳಿವೆ” : ಶಾಸಕ ರಂಗನಾಥ್

ತುಮಕೂರು/ ಕುಣಿಗಲ್‌: ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವದರ ಸಂಖ್ಯೆ ದಿನೇ ದಿನೇ
ಕಡಿಮೆಯಾಗುತ್ತಿದ್ದು, ಜನರಲ್ಲಿ ಧರ್ಮಗಳನ್ನ
ಬಿತ್ತಿದಾಗ ಅಧರ್ಮ ಕಣ್ಮರೆಯಾಗುತ್ತದೆ ಎಂದು ನೆಲಮಂಗಲದ ಪವಾಡ ಶ್ರೀ ಬಸವಣ್ಣನವರ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳು ತಿಳಿಸಿದ್ದಾರೆ.

ಪಟ್ಟಣದ ನಕ್ಷತ್ರ ಪ್ಯಾಲೇಸ್‌ನಲ್ಲಿ ಗುರುವಾರ
ವೀರಶೈವ ಲಿಂಗಾಯಿತ ಸಮಾಜ ಹಾಗೂ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ
ವತಿಯಿಂದ ವೀರಶೈವ ಲಿಂಗಾಯಿತ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಜನರೂ ಪುಕ್ಕಟ್ಟೆ ಭಾಗ್ಯಗಳಿಗೆ ಮರುಳಾಗಿ ಭಗವಂತನಲ್ಲಿ ಬೇಡುವುದು ಕಡಿಮೆಯಾಗಿದೆ, ಲಿಂಗಾಯಿತ ಜನಾಂಗ ಬೇಡುವ ಜನಾಂಗವಲ್ಲ ಕೊಡುವ ಜನಾಂಗ, ಸಮಾಜ ಜಾಗೃತಗೊಂಡು ವಿದ್ಯಾವಂತರಾಗಬೇಕು‌. ವಿದ್ಯೆಗೆ ಬಡವ ಶ್ರೀಮಂತನೆಂಬ ಭೇದವಿಲ್ಲ ಎಂದರು.ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಲಿಂಗಾಯಿತ ಧರ್ಮ ಅಸ್ಪೃಶ್ಯತೆ, ಅಸಮಾನತೆ, ಜಾತಿಭೇದದ ವಿರುದ್ಧ ಹೋರಾಡಿದ ಧರ್ಮ. ಲಿಂಗಧಾರಣೆ
ಮಾಡಿದವರೆಲ್ಲಾ ಶಿವಯೋಗಿಗಳಾಗುವುದಿಲ್ಲ.
ಸಮಾಜವನ್ನ ಜಾಗೃತಗೊಳಿಸಿ ಸಮಾದದ ಅಭಿವೃದ್ಧಿಗೆ ಶ್ರಮಿಸಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಮುದಾಯ
ಹಣ ಸಹಕಾರ ಮಾಡಬೇಕು.ಸಿದ್ಧಗಂಗಾ ಮಠದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳು ಯಡಿಯೂರು ಮತ್ತು ಕಗ್ಗೆರೆಯ ಸಿದ್ಧಲಿಂಗೇಶ್ವರರೊಂದಿಗೆ ಅವಿನಾಭಾವ ಸಂಬಂಧ
ಹೊಂದಿದ್ದರು ಎಂದರು.

ಶಾಸಕ ಡಾ|| ರಂಗನಾಥ್‌ ಮಾತನಾಡಿ ಆಧುನಿಕ ಸಮಾಜದಲ್ಲಿ ಮನುಷ್ಯ ನಾನಾ ಸಮಸ್ಯೆಗಳಿಂದ ಜಳಲುತ್ತಿದ್ದಾನೆ,ಅಂತಹವರಿಗೆ ಆದ್ಯಾತ್ಮ ಅವಶ್ಯಕ.ಮಠಗಳು ಆನಿಟ್ಟನಲ್ಲಿ ಸಾಗುತ್ತಿರುವುದು ಸಂತೋಷ
ತಂದಿದೆ.ಜಾತಿ ಧರ್ಮ ಸಂಕೋಲೆಗಳಿಂದ
ಹೊರಬಂದು ಬಡವರ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು ಒಕ್ಕಲಿಗ ಹಾಗೂ ಲಿಂಗಾಯತ ಸಮಾಜ ಮುಂದುವರಿದ ಸಮಾಜ ಎಂದು ಹೇಳುತ್ತಾರೆ ಆದರೆ ಒಳಹೊಕ್ಕು ನೋಡಿದರೆ ನೂರೆಂಟು ಸಮಸ್ಯೆಗಳನ್ನು ಕಾಣಬಹುದು ಎಂದರು.ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳಿಗೆ ಉಚಿತ ನೋಟ್‌ಪುಸ್ತಕ ವಿತರಿಸಲಾಯಿತು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರನ್ನು ಸಸ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಿರೇ ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕೆ.ಎಲ್‌.ಡಿ.ಬಿ. ಮಾಜಿ ಅಧ್ಯಕ್ಷ ರುದ್ರೇಶ್‌, ತಾಲ್ಲೂಕು ಅಧ್ಯಕ್ಷ ವಸಂತ್‌ ಕುಮಾರ್‌, ಆರ್‌.ಎಸ್‌.ಮಹೇಶ್‌, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವನಂಜಯ್ಯ, ಕಾರ್ಯದರ್ಶಿ ಲೋಕೇಶ್ ವಿ,ಗೌರವ ಅಧ್ಯಕ್ಷ ಬಸವರಾಜಪ್ಪ. ಕಾರ್ಯದರ್ಶಿ ಪರಮಶಿವಯ್ಯ ಐ.ಆರ್‌,ನಿರ್ದೇಶಕರಾದ ಎನ್‌ ಶಿವಣ್ಣ,ಅಡವೀರಪ್ವ,ಶಿವಣ್ಣ, ವೈ.ಎಸ್‌.ನಾಗರಾಜು,ಶಿವಲಿಂಗಯ್ಯ,
ಜಗದಾಂಭ,ಶಿವಕುಮಾರ್‌ ಮತ್ತು ತಗಡೂರು ವೀರಭದ್ರಪ್ಪ ಇದ್ದರು.

ವರದಿ-ಮನು ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ