ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವದಂತೆ ಕಾರುಣ್ಯಾಶ್ರಮದ ಸೇವೆ ಜರುಗುತ್ತಿದೆ-ಗುರುರಾಜ ಮುಕ್ಕುಂದಾ

ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಭೀಮಮಾರ್ಗ ಮತ್ತು ಭೀಮವಾದ ಹಾಗೂ ಡಾ.ಅಂಬೇಡ್ಕರ್ ಮಹಾಸಭಾ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಹಾಗೂ ಸಂಘರ್ಷದ ರೂವಾರಿ ಬಹುಜನ ನಾಯಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ ಕೃಷ್ಣಪ್ಪನವರ 85ನೇ ಜನ್ಮದಿನಾಚರಣೆ ಪ್ರಯುಕ್ತ ಎಸ್.ಎಸ್. ಎಲ್.ಸಿ.ಮತ್ತು ಪಿ.ಯು.ಸಿ.2022-23 ನೇ ಸಾಲಿನಲ್ಲಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ನೋಟ್ ಬುಕ್ ಪೆನ್ನು ವಿತರಣೆ ಕಾರ್ಯಕ್ರಮ ಹಾಗೂ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾ.ಬಿ ಆರ್ ಅಂಬೇಡ್ಕರ್ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ ಮುಕ್ಕುಂದಾ ಮಾತನಾಡಿ ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವದಂತೆ ಕಾರುಣ್ಯ ಆಶ್ರಮದ ಸೇವೆ ಜರುಗುತ್ತಿದೆ ಕಾರುಣ್ಯಾಶ್ರಮದ ಸೇವೆ ಜರುಗುತ್ತಿದೆ. ಶೋಷಣೆಗೆ ಒಳಗಾಗಿರುವ ಕುಟುಂಬಗಳಿಗೆ ನ್ಯಾಯ ಒದಗಿಸುವ ಪ್ರಯತ್ನದಿಂದ ಬಿ.ಕೃಷ್ಣಪ್ಪನವರು ಮಾಡಿದಂತಹ ಹೋರಾಟ ವರ್ಣಿಸಲು ಸಾಧ್ಯವಿಲ್ಲ ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಕೊಡುಗೆ ಶೋಷಿತ ಸಮಾಜಕ್ಕೆ ಅಪಾರವಾಗಿದೆ. ಇಂತಹ ಎಲ್ಲಾ ಉದ್ದೇಶಗಳನ್ನೊಳಗೊಂಡು ಮೂರು ಸಂಘಟನೆಯ ವತಿಯಿಂದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಾವೆಲ್ಲರೂ ಯಾವಾಗಲೂ ಬೆನ್ನೆಲುಬಾಗಿರುತ್ತೇವೆ ಎನ್ನುವ ಧೈರ್ಯ ತುಂಬುತ್ತಿದೆ ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗಳ ಮೂಲಕ ದಾರಿ ತಪ್ಪುತ್ತಿರುವುದು ಎತ್ತ ತಂದೆ ತಾಯಿಗಳಿಗೆ ಕಷ್ಟಗಳು ಒದಗಿ ಬರುತ್ತೀವೆ ಶಾಲಾ ಶುಲ್ಕ ಬರಿಸಲಾರದಷ್ಟು ಕಷ್ಟದಲ್ಲಿದ್ದ ಅಂಬೇಡ್ಕರ್ ಅವರು ಶೋಷಿತ ಸಮಾಜವಾದ ದಲಿತ ಸಮುದಾಯಕ್ಕೆ ಮೀಸಲಾತಿಯ ಮೂಲಕ ಶಿಕ್ಷಣ ಕ್ಷೇತ್ರದಿಂದ ದಲಿತ ಸಮುದಾಯದ ತಂದೆ ತಾಯಿಗಳ ಕಣ್ಣೀರು ಒರೆಸುತ್ತಿದ್ದಾರೆ. ಇಂತಹ ಮಹಾನುಭಾವರ ಜಯಂತಿಯನ್ನು ಪ್ರತಿ ವರ್ಷವೂ ನಮ್ಮ ಕಾರುಣ್ಯ ಆಶ್ರಮದಲ್ಲಿ ಆಚರಿಸುವುದಲ್ಲದೆ ಈ ಆಶ್ರಮದ ಸೇವೆಯಲ್ಲಿ ಭಾಗಿಯಾಗುತ್ತಿದ್ದೇವೆ. ಯಾವತ್ತಿಗೂ ಕೂಡ ಸಿಂಧನೂರಿನ ಕರುಣಾಮಯಿ ಕುಟುಂಬವಾದ ಕಾರುಣ್ಯಾಶ್ರಮಕ್ಕೆ ನಮ್ಮ ಸಂಘಟನೆಗಳು ಬೆನ್ನೆಲುಬಾಗಿರುತ್ತವೆ ನೊಂದವರ ನಾಡಿಮಿಡಿತವಾಗಿರುವ ಈ ಪವಿತ್ರ ಮಂದಿರದಲ್ಲಿ ಸಮಾನತೆಯ ಮನಸ್ಸುಗಳಿವೆ ಎಂದು ಮಾತನಾಡಿದರು ನಂತರ ಕಾರ್ಯಕ್ರಮದ ಉದ್ಘಾಟಕರಾದ ಶರಣು.ಪಾ.ಹಿರೇಮಠ ಮಾತನಾಡಿ ಪ್ರೊ. ಬಿ.ಕೃಷ್ಣಪ್ಪ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ ಅವರ ಹೋರಾಟಗಳು ಅವರ ಸಂಘಟನೆ ಶಕ್ತಿಯನ್ನು ಹೆಚ್ಚಿಸಿದ್ದವು. ಸಾಮಾನ್ಯ ವ್ಯಕ್ತಿಯಂತಿದ್ದ ಕೃಷ್ಣಪ್ಪ ಅವರ ಕೊಡುಗೆ ಶೋಷಿತ ಸಮುದಾಯಗಳಿಗೆ ವರವಾಗಿದೆ.ಅದೇ ರೀತಿ ಅಂಬೇಡ್ಕರ್ ಅವರ ಸಂವಿಧಾನ ನ್ಯಾಯದ ಕೇಂದ್ರ ಬಿಂದುವಾಗಿದೆ ಸಿಂಧನೂರಿನ ಎಲ್ಲಾ ದಲಿತಪರ ಸಂಘಟನೆಗಳು ನಮ್ಮ ಈ ಕಾರುಣ್ಯ ಆಶ್ರಮಕ್ಕೆ ನೀಡುತ್ತಿರುವ ಸಹಾಯ ಸಹಕಾರ ನಮ್ಮನ್ನು ಇನ್ನು ಹೆಚ್ಚಿನ ಅನಾಥಪರ ಸೇವೆ ಮಾಡಲು ಕಾರಣಿಭೂತವಾಗಿವೆ ಈ ಕಾರ್ಯಕ್ರಮದಲ್ಲಿ ಪುರಸ್ಕಾರ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಈ ಇಬ್ಬರು ಮಹಾನುಭಾವರ ಆದರ್ಶ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ನಿಮ್ಮ ಹೆತ್ತ ತಂದೆ ತಾಯಿಗಳನ್ನು ಪೂಜಿಸಿ ಪ್ರೀತಿಸಬೇಕು. ಅಂದಾಗ ಮಾತ್ರ ನಮ್ಮ ಸುಂದರ ಭಾರತ ನಿರ್ಮಾಣವಾಗುವುದು ಎಂದು ಮಾತನಾಡಿ ಎಲ್ಲಾ ದಲಿತ ಸಂಘಟನೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಶಾಲಾ ಸಾಮಗ್ರಿಗಳನ್ನು ವಿತರಿಸಿ ಪುರಸ್ಕಾರ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಬುಕ್ಕನಟ್ಟಿ.ರಮೇಶ ಬಸಾಪುರ ನಾಗರಾಜ ಭಂಡಾರಿ ಸಾಲಗುಂದ. ಆಲಂಬಾಷ ಬೂದಿವಾಳ.ವೀರೇಶ ಪಗಡದಿನ್ನಿ,ಮಹಾನಂದಮ್ಮ ಶಿವಮ್ಮ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ,ಗೀತಾ ಕುಲಕರ್ಣಿ, ಮರಿಯಪ್ಪ ,ಶರಣಮ್ಮ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮಾಜದ ಮಾತೆಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ