ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆ ಬೆಂಬಳಿ ಹಾಗೂ ಕೊಡಲ ಗ್ರಾಮಗಳ ಕೃಷ್ಣಾ ನದಿಯ ಹತ್ತಿರ ಹೆಬ್ಬಾವುಗಳ ಹಾವಳಿಯಿಂದ ಕುರಿಗಾಹಿಗಳು ಮತ್ತು ಜನರು ಭಯಭೀತರಾಗಿದ್ದಾರೆ ಕಳೆದ ಕೆಲದಿನಗಳ ಹಿಂದೆ ಬೆಂಡೆಬೆಂಬಳಿ ಗ್ರಾಮದ ಸಣ್ಣ ಸಿದ್ದಪ್ಪ ರಾಯ್ಕುಂಪಿ ಎಂಬ ವ್ಯಕ್ತಿಯ ಮೂರು ಆಡುಗಳನ್ನು ಬೆಂಡೆ ಬೆಂಬಳಿ ಗ್ರಾಮದ ಕೃಷ್ಣಾ ನದಿಯ ಹತ್ತಿರದಲ್ಲಿ ಹೆಬ್ಬಾವು ತಿಂದು ಹಾಕಿತ್ತು ಮತ್ತೆ ಇಂದು ಕೊಡಲ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಕುರಿಗಾಗಿ ನರಸಪ್ಪ ಪೂಜಾರಿ ಕೂಡಾಲ ಈತನು ಕುರಿಗಳು ಮೇಯಿಸುತ್ತಿರುವ ಸಂದರ್ಭದಲ್ಲಿ ದೊಡ್ಡದಾದ ಹೆಬ್ಬಾವು ಆಡನ್ನು ಸುತ್ತಿಕೊಂಡು ಸಾಯಿಸಿದೆ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಅಕ್ಕಪಕ್ಕದ ಜನರು ಬಂದ ತಕ್ಷಣ ಹೆದರಿ ಬಿಟ್ಟು ಹೋಗಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸ್ಥಳಗಳಿಗೆ ಭೇಟಿ ನೀಡಿ ಕುರಿ ಗಾಯಿಗಳಿಗೆ ಪರಿಹಾರ ನೀಡುವುದರ ಜೊತೆಗೆ ಈ ಭಾಗದಲ್ಲಿ ಹೆಬ್ಬಾವುಗಳ ಸಂಖ್ಯೆ ಹೆಚ್ಚಾಗಿದೆ ರೈತಾಪಿ ವರ್ಗದವರು ಕುರಿ ಗಾಯಗಳು ಭಯಬಿತರಾಗಿದ್ದಾರೆ ಇವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಬೆಂಡೆ ಬೆಂಬಳಿ ಗ್ರಾಮದ ರೈತ ಬೂದಿ ಬಸವ ಸಾಲಿಮಠ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ವರದಿ-ಶಿವರಾಜ ಸಾಹುಕಾರ ವಡಗೇರಾ