ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮಾರನಾಳ 2023 24 ಸಾಲಿನ ಶಾಲಾ ಸಂಸತ್ತು ರಚನೆ ನಡೆಸಲಾಗಿತ್ತು ಹಿನ್ನೆಲೆಯಲ್ಲಿ ತಂತ್ರಜ್ಞಾನ ಮತದಾನ ವ್ಯಾಪ್ ಮೂಲಕ ಮತದಾನ ಮಾಡುವ ಮಾಹಿತಿಯನ್ನು ತಿಳಿಸಲಾಗಿತ್ತು ಭಾರತೀಯ ಚುನಾವಣೆಯ ಮಾದರಿಯಲ್ಲಿ ಮತದಾನ ಮಾಡಲಾಯಿತು ಮತದಾರ ಪಟ್ಟಿ ಉಮೇದುವಾರಿಕೆ ಸೂಚಕರು ಪೋಲಿಂಗ್ ಆಫೀಸರ್ ಏಜೆಂಟರ ಶಾಹಿ ಗುರುತು ಇವುಗಳನ್ನು ಪ್ರಾಯೋಗವಾಗಿ ಮಾಡಿಸಲಾಯಿತು ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಗಳನ್ನು ಹೇಳಿಕೆ ಮಾಡಲಾಯಿತು ಗೆದ್ದ ಅಭ್ಯರ್ಥಿಗಳಿಗೆ ಪ್ರಧಾನ ಗುರುಗಳು ಪ್ರಮಾಣವಚನವನ್ನು ಬೋಧಿಸಿದರು ಬಹಳ ಉತ್ಸಾಹದಿಂದ ಮಕ್ಕಳು ಈ ಚುನಾವಣೆಯಲ್ಲಿ ಭಾಗ ವಹಿಸಿದರು ಮತ್ತು ಪ್ರಧಾನ ಗುರುಗಳು ಹಾಗೂ ಸಹಶಿಕ್ಷಕರು ಭಾಗವಹಿಸಿದ್ದರು.
ವರದಿ-ಸಂತೋಷ ನಾಯಕ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.