ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಪ್ರೌಢ ಶಾಲೆಯ ಶಿಕ್ಷಕರು ಶ್ರೀಯುತ ಚಂದ್ರಕಾಂತಯ್ಯ ಕಲ್ಯಾಣಮಠರವರು ವಿದ್ಯಾರ್ಥಿಗಳ ಪಾಲಿನ ಚಾಮಯ್ಯ ಮೇಷ್ಟ್ರುಸುದೀರ್ಘ 36 ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಗುರುವಾಗಿ ಉಳಿದ ಮೇರು ವ್ಯಕ್ತಿತ್ವದ ಶಿಕ್ಷಕರು.
ವಿದ್ಯಾರ್ಥಿಗಳೇ ದೇವರು,ಶಾಲೆಯೆಂದರೆ ದೇಗುಲ ಮಕ್ಕಳೇ ದೇವರರಿದ್ದಂತೆ ಈ ಭಾಗದಲ್ಲಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು,ಉನ್ನತ ಸ್ಥಾನವನ್ನು ಪಡೆಯಿರಿ ಮುಂದಿನ ಜನ್ಮದಲ್ಲಿ ಕೂಡಾ ಈ ಶಾಲೆಯಲ್ಲಿ ಮೇಷ್ಟ್ರು ಆಗಬೇಕೆಂದು ಬಯಸುವೆ ನಾನು ಕರ್ತವ್ಯದಲ್ಲಿ ರಾಜಿಯಾಗುವುದಿಲ್ಲ,ಈ ಊರಿನ ನೆಲವು ಪರ್ವತಗಿರಿ ಇದ್ದಂತೆ ಸಾವಿರಾರು ವಿದ್ಯಾರ್ಥಿಗಳ ಹೃದಯ ಗೆದ್ದಿದ್ದೇನೆ,ನಾನು ಆಸ್ತಿ ಮಾಡಿಲ್ಲ ವಿದ್ಯಾರ್ಥಿಗಳು,ಪಾಲಕರು,ಜನರ ಪ್ರೀತಿ, ವಿಶ್ವಾಸವೇ ನನಗೆ ಆಸ್ತಿ,ಪ್ರತಿಯೊಬ್ಬರೂ ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ,ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೋಡಿಸಬೇಕು,ಸಂಸ್ಕಾರ ಕಲಿತು ಮಕ್ಕಳಿಗೆ ಸಂಸ್ಕಾರ ಕಲಿಸೋಣ,ತಾಳ್ಮೆ,ಸಹನೆಯಿದ್ದರೆ ಯಶಸ್ಸು ಸಿಗುತ್ತದೆ,ಈ ಭಾಗದಲ್ಲಿ ಹಿರೇವಂಕಲಕುಂಟಾ ಶಾಲೆಯು ವಿದ್ಯಾಕಾಶಿ ಇದ್ದಂತೆ ಎಂದು ಶಿಕ್ಷಕರಾಗಿ,ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಚಂದ್ರಕಾಂತಯ್ಯ ಕಲ್ಯಾಣಮಠರವರು ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರು,ಉಪ ಪ್ರಾಚಾರ್ಯರಾಗಿ ಸುದೀರ್ಘ 34 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ,ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ,ಜ್ಞಾನದೀಪ ಬೆಳಗಿಸಿದ ಸಿ.ಕೆ.ಸರ್ ಎಂದೇ ಪ್ರಸಿದ್ಧರಾದ ಚಂದ್ರಕಾಂತಯ್ಯ ಕಲ್ಯಾಣಮಠರವರ ಸೇವಾ ನಿವೃತ್ತಿ ಹೊಂದಿದ್ದರಿಂದ ಹಳೆಯ ವಿದ್ಯಾರ್ಥಿಗಳ ಸಂಘ,ಗ್ರಾಮಸ್ಥರಿಂದ “ಗುರುತೇರು” ಎಂಬ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕತೆಗಾರರು,ಹಂಪಿ ಕನ್ನಡ ವಿ.ವಿ.ವಿಶ್ರಾಂತ ಪ್ರಾಧ್ಯಾಪಕರಾದ ಡಾ.
ಅಮರೇಶ ನುಗಡೋಣಿ ಮಾತನಾಡಿ ಬಹುಶಃ ನಾನು ನೋಡಿದ ಹಾಗೆ ಕನಾ೯ಟಕದಲ್ಲಿ ಈ ಬಗೆಯ ಕಾರ್ಯಕ್ರಮ ಪ್ರಪ್ರಥಮ ಅಂತ ಹೇಳಬಹುದು ಸಿ.ಕೆ.ಸರ್ ರವರ ಸುದೀರ್ಘ 34 ವರ್ಷಗಳ ಕಾಲ ಅವರ ಕೈಯಲ್ಲಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ಇವರ ಮೇಲೆ ಇಟ್ಟಿರುವ
ಪ್ರೀತಿ,ಗೌರವ,ಭಾವನಾತ್ಮಕ ಸಂಬಂಧ ಸಾಮಾನ್ಯವಾದದ್ದಲ್ಲ
ಇವರು ಸಲ್ಲಿಸಿದ ನಿಸ್ವಾರ್ಥ ಶಿಕ್ಷಣ ಸೇವೆ,ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಇದ್ದಲ್ಲಿ ಮಾತ್ರ ಇಷ್ಟು ಜನಸಂಖ್ಯೆ ಸೇರಲು ಸಾದ್ಯ,ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಗುರುಗಳನ್ನು ನೆನೆಯುತ್ತಾರೆ.ಶಿಕ್ಷಕರು ಹೇಳಿದ ಮಾತು ಎಂದರೆ ವೇದವಾಕ್ಯ ಎಂಬ ಭಾವನೆ ಇರುತ್ತದೆ ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧ ಇರುವುದಿಲ್ಲ ಹೈಸ್ಕೂಲಿನಲ್ಲಿ ಕಲಿಸಿದ ಗುರುಗಳು ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾಗಿ ಇರುತ್ತಾರೆ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಕರನ್ನಾಗಿ ಮಾಡಬೇಕು,ಸಿಕ್ಕರುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ರಾಜಾಸಾಬ ಕುಷ್ಟಗಿ ಮಾತನಾಡಿ ಹಿರೇವಂಕಲಕುಂಟಾ ಶಾಲೆ,ಕಾಲೇಜಿನ ವಿದ್ಯಾರ್ಥಿಗಳು ಆತ್ಮವಿಶ್ವಾಸಯುಳ್ಳವರು,ಬುದ್ದಿವಂತರು ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಾಠಗಳನ್ನು ಅತ್ಯಂತ ಶ್ರದ್ಧೆಯಿಂದ ಕೇಳುತ್ತಿದ್ದರು.
ಯಾರು ಹೆಚ್ಚು ಕಡಿಮೆ ಅಲ್ಲ ಎಲ್ಲರೂ ಸಮಾನರು ವಿದ್ಯಾರ್ಥಿಗಳಲ್ಲಿ ತಾರತಮ್ಯ,ಅಹಂ ಇರಬಾರದು ಎಲ್ಲರೂ ಒಳ್ಳೆಯ ಸ್ಥಾನಗಳಲ್ಲಿದ್ದರೆ,ಅಹಂ ಬೆಳೆಸಿಕೊಳ್ಳಬಾರದು ಖಾಲಿ ಕುಳಿತುಕೊಳ್ಳದೆ ಯಾವುದೇ ಕೆಲಸವಾದರೂ ಕೂಡಾ ಮಾಡಬೇಕು ಎಂದು ತಮ್ಮ ಬೋಧನಾ ವೃತ್ತಿ ಜೀವನವನ್ನು ಮೆಲುಕು ಹಾಕಿದರು,ಸಾಕಿ ಸಲುಹಿದ ಈ ಊರು ನನ್ನ ಕರ್ಮಭೂಮಿ ಎಂದರು
ಭವ್ಯ ಮೆರವಣಿಗೆ:
ಗ್ರಾಮದ ಬಸ್ ನಿಲ್ದಾಣದಿಂದ ಅಲಂಕೃತ ಠಥದಲ್ಲಿ ಸಿ.ಕೆ ರವರ ದಂಪತಿಗಳ ಮೆರವಣಿಗೆ ಸಾಗಿತು,ದಾರಿಯುದ್ದಕ್ಕೂ ಹೂವುಗಳು,ಡೊಳ್ಳು,ತೊಗಲು ಗೊಂಬೆ ನೃತ್ಯ,ಡಿಜೆ ಸೌಂಡ್ ಸಾವಿರಾರು ಹಳೆಯ ವಿದ್ಯಾರ್ಥಿಗಳು.ಗ್ರಾಮಸ್ಥರು,ಯುವಕರು ಕುಣಿದು ಕುಪ್ಪಳಿಸಿದರು.
ಹಳೆಯ ವಿದ್ಯಾರ್ಥಿಗಳ ಸಮ್ಮಿಲನ:
ಈ ಶಾಲೆಯಲ್ಲಿ 1989 ರಿಂದ ಶಿಕ್ಷಣ ಪಡೆದ ಎಲ್ಲಾ ಬ್ಯಾಚಿನ ಸಹಪಾಠಿ ವಿದ್ಯಾರ್ಥಿಗಳ ಭಾಗಹಿಸಿದ್ದರು ತಮ್ಮ ಅಚ್ಚುಮೆಚ್ಚಿನ ಗುರುವಿನ ಸೇವಾ ನಿವೃತ್ತಿಗೆ ಶುಭ ಕೋರಿ,ಉಡುಗೊರೆ ನೀಡಿ ಸಂತಸಪಟ್ಟರು.ಈ ಕಾರ್ಯಕ್ರಮದ
ದಿವ್ಯ ಸಾನಿದ್ಯವನ್ನು ಶ್ರೀ ಬಸವಾನಂದ ಸ್ವಾಮಿಗಳು ಮಹಾಮನೆ (ಮನಗುಂಡಿ,ಧಾರವಾಡ),ಅಧ್ಯಕ್ಷತೆಯನ್ನು ಕಿರಣಕುಮಾರ್ ಪ್ರಾಚಾರ್ಯರು ಸ.ಪ.ಪೂರ್ವ ಕಾಲೇಜು ಇವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಟಿ.ಬಸವರಾಜ ನಿವೃತ್ತ ಪ್ರಾಂಶುಪಾಲರು, ಡಾ.ಕೆ ವೆಂಕಟೇಶ ಪ್ರಾಚಾರ್ಯರು.ಸ.ಪ್ರ.ದ.ಕಾಲೇಜು ಹಗರಿಬೊಮ್ಮನಹಳ್ಳಿ,ನಿವೃತ್ತ ಶಿಕ್ಷಕರು ಹಾಗೂ ಉಪನ್ಯಾಸಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ
ಹಳೆಯ ವಿದ್ಯಾರ್ಥಿಗಳು,ಊರಿನ ಗುರು ಹಿರಿಯರು,ಯುವಕರು,ಮಹಿಳೆಯರು ಭಾಗವಹಿಸಿದ್ದರು,ಶಿಕ್ಷಕ ಆಂಜನೇಯ ಸ್ವಾಗತಿಸಿದರು ವಿಜ್ಞಾನ ಶಿಕ್ಷಕ ದೇವಂದ್ರಪ್ಪ ಜಿಲಿ೯ ಪ್ರಾಸ್ತಾವಿಕ ನುಡಿಗಳನ್ನಾಡಿದರು,
ನರಸಿಂಹಮೂರ್ತಿ ನಿರೂಪಿಸಿದರು.
ವರದಿ:ಬಾಲರಾಜ ತಾಳಕೇರಿ