ತುಮಕೂರು/ಕುಣಿಗಲ್:2022-23 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಬಸ್ ಪಾಸ್ ಅವಧಿ ಜೂನ್ 30ಕ್ಕೆ ಮುಕ್ತಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಆದರೆ ಪುರುಷ ವಿದ್ಯಾರ್ಥಿಗಳು ಮಾತ್ರ ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ಸಾಮಾನ್ಯ ವಿದ್ಯಾರ್ಥಿಗಳು ರೂ.150 ಮತ್ತು SC/ST ವಿದ್ಯಾರ್ಥಿಗಳು ರೂ.110 ಗಳನ್ನು ಪಾವತಿಸಿ ತಮ್ಮ ಪಾಸ್ ಗಳನ್ನು ಆಗಸ್ಟ್ 31ರ ವರೆಗೆ ವಿಸ್ತರಣೆ ಮಾಡಿಸಿಕೊಳ್ಳಬೇಕಾಗಿದೆ.ಇನ್ನು SC/ST ವಿದ್ಯಾರ್ಥಿಗಳ ಪಾಸಿನ ವಾರ್ಷಿಕ ಮೊತ್ತವೇ ರೂ.150 ಆಗಿದ್ದು ಕೇವಲ 2 ತಿಂಗಳ ವಿಸ್ತರಣೆಗಾಗಿ ಹೆಚ್ಚುವರಿ 110 ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಇದಲ್ಲದೆ ಸರದಿ ಸಾಲಿನಲ್ಲಿ ನಿಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಕೆಲ ವಿದ್ಯಾರ್ಥಿಗಳು ಸರ್ಕಾರ ಉಚಿತ ಭಾಗ್ಯಗಳನ್ನು ಪ್ರಯೋಜನವಿಲ್ಲದವರಿಗೆ ನೀಡಿ ಸರ್ಕಾರದ ಖಜಾನೆ ಬರಿದಾಗಿಸುತ್ತಿದೆ ಇದರ ಬದಲಾಗಿ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದರೆ ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ ಇದರ ಜೊತೆಗೆ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಬಸ್ಸುಗಳ ಕೊರತೆ ಉಂಟಾಗಿದ್ದು ಇದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ.ಈ ಕುರಿತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಸ್ ಗಳ ಸಂಖ್ಯೆ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಒಟ್ಟಿನಲ್ಲಿ ಶಕ್ತಿ ಯೋಜನೆಯು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿರುವುದಂತೂ ಸುಳ್ಳಲ್ಲ.
ವರದಿ-ಮನು ಕುಮಾರ್