ಯಾದಗಿರಿ/ವಡಗೇರಾ:ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳು ರೈತರು ಆದಿ ಬಸವಣ್ಣನ ಪರ್ವ ನಿಮಿತ್ಯ ಊರ ದೇವರುಗಳಿಗೆ ನೀರು ನೀಡಿ ಕಾಯಿ ಕರ್ಪೂರ ಅರ್ಪಿಸುವ ಪ್ರತಿತಿ ಉಂಟು ಎಂದು ಪರ್ವ ಸಮಿತಿಯ ಮುಖಂಡರಾದ ಶೀಲವಂತಪ್ಪ ಇಟಗಿ ರವರು ಹೇಳಿದರು ತದನಂತರ ಪಟ್ಟಣದಲ್ಲಿ ಮನೆಮನೆಗೆ ತೆರಳಿ ರೈತರು ಬೆಳೆದ ಜೋಳ ಕಾಳು ಕಡಿ ಪದಾರ್ಥಗಳನ್ನು ಸಂಗ್ರಹಿಸಿ ಜೋಳದ ಹಂಬಲಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ರೈತರಿಗೆ ಮತ್ತು ಭಕ್ತರಲ್ಲರಿಗೂ ಅದನ್ನು ವಿತರಿಸಲಾಗುವುದು ರಾತ್ರಿ ಇಡಿ ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗುವುದು ಎಂದು ಶೀಲವಂತಪ್ಪ ಇಟಗಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.