ಬೆಂಗಳೂರು : ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸತತ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಲ್ಯಾಪ್ ಟಾಪ್ ವಿತರಣೆಯ ಕಾರ್ಯವನ್ನು ಪುನಃ ಆರಂಭಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕವು ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಧಾರವಾಡ ಗ್ರಾಮೀಣ ಶಾಸಕರಾದ ಶ್ರೀ ವಿನಯ್ ಕುಲಕರ್ಣಿಯವರಿಗೆ ಮನವಿ ನೀಡಲಾಯಿತು.
ಇಂದು ಧಾರವಾಡ ಜಿಲ್ಲಾ ಘಟಕವು ಮಾಜಿ ಸಚಿವರು ಹಾಗೂ ಹಾಲಿ ಧಾರವಾಡ ಗ್ರಾಮೀಣ ಶಾಸಕರಾದ ಶ್ರೀ ವಿನಯಕುಲಕರ್ಣಿಯವರಬೆಂಗಳೂರಿನಲ್ಲಿರುವ ನಿವಾಸಕ್ಕೆ ತೆರಳಿ ಕರ್ನಾಟಕ ವಿಶ್ವವಿದ್ಯಾಲಯದ ಪ. ಜಾತಿ / ಪ. ಪಂಗಡದ ವಿದ್ಯಾರ್ಥಿಗಳಿಗೆ ಸತತವಾಗಿ ನಾಲ್ಕು ವರ್ಷಗಳಿಂದ ನಿಲ್ಲಿಸಲಾಗಿದ್ದ ಲ್ಯಾಪ್ ಟಾಪ್ ವಿತರಣೆಯ ಕಾರ್ಯವನ್ನು ಪುನಃ ಪ್ರಾರಂಭಿಸಿ ವಂಚಿತಗೊಂಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಸೌಲಭ್ಯ ಕಲ್ಪಿಸಿಕೊಡಬೇಕು, ವಿವಿಧ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬೇಗನೇ ಮಂಜೂರಾಗಬೇಕು, ವಿಶ್ವವಿದ್ಯಾಲಯಕ್ಕೆ ಒಳಪಡುವ ಎಲ್ಲಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು ಇಂದಿನ ಮಾರುಕಟ್ಟೆಯ ದರವನ್ನು ಗಮನದಲ್ಲಿಟ್ಟುಕೊಂಡು 5000ಕ್ಕೆ ಹೆಚ್ಚಿಸಬೇಕು, ಕಾನೂನು ವಿದ್ಯಾರ್ಥಿಗಳಿಗೆ ಸ್ಥಗಿತಗೊಂಡಿದ್ದ ಮಾಸಿಕ ಶಿಷ್ಯವೇತನವನ್ನು ಪುನಃ ಪ್ರಾರಂಭಿಸಿ ಮಾರುಕಟ್ಟೆಯ ಆಧಾರದ ಮೇಲೆ ನಿಗದಿಸಬೇಕು, ಸ್ನಾತಕೋತ್ತರ ವಿದ್ಯಾರ್ಥಿಗಳು ಮಾಡುವ ಕ್ಷೇತ್ರಕಾರ್ಯ ಅಧ್ಯಯನ ವರದಿಗಾಗಿ ರೂ.10,000ವರೆಗೆ ದೊರೆಯುವಂತಾಗಬೇಕು, ವಿಶ್ವವಿದ್ಯಾಲಯದಲ್ಲಿ ಅಭ್ಯಾಸಿಸುತ್ತಿರುವ ಪ. ಜಾತಿ /ಪ. ಪಂಗಡದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, ಡಿಪ್ಲೋಮ ಹಾಗೂ ವಸತಿ ನಿಲಯದ ಪ್ರವೇಶ ಶುಲ್ಕಗಳನ್ನು ಹೆಚ್ಚಿಸಿದ್ದು ಅದನ್ನು ಕಡಿತಗೊಳಿಸಬೇಕು, ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪ್ರವೇಶ ಪಡೆದ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಶಿಷ್ಯವೇತನ ಮಂಜೂರು ಮಾಡಬೇಕು ಹೀಗೆ ಪ. ಜಾತಿ /ಪ. ಪಂಗಡದ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಅಧ್ಯಕ್ಷರಾದ ಹನುಮಂತ ದಾಸರ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಾಸಟ್ಟಿ, ಸಂಗಮೇಶ ಬನಸೋಡೆ, ಕುಮಾರ್ ತಳವಾರ ಹಾಗೂ ಬಸವರಾಜ್. ಎಚ್.ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.