ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಾಜ ಸೇವೆಯೇ ನನ್ನ ನಿತ್ಯ ಕಾಯಕವೆಂದ ನಿಲಯಪಾಲಕ

ಹುಟ್ಟಿದ ಮನುಷ್ಯ ಸಾಯುವುದಂತೂ ಖಚಿತ, ಇದು ನಮ್ಮೆಲ್ಲರ ಮೂರು ದಿನದ ಸಂತೆ ಇರುವಷ್ಟು ದಿನ ಚೆನ್ನಾಗಿ ಎಲ್ಲರೊಂದಿಗೆ ಸ್ನೇಹ ಸಹಬಾಳ್ವೆಯಿಂದ ಬದುಕಬೇಕು. ಯಾವುದನ್ನೂ ಜಾಸ್ತಿ ವಿಚಾರಮಾಡದೇ ಶಾಂತಿಯಿಂದ ಜೀವನ ಸಾಗಿಸಬೇಕಿದೆ. ಏಕೆಂದರೆ ಶಾಂತಿ ಮನುಷ್ಯನ ಮರಣದ ದಿನಗಳನ್ನು ಹೆಚ್ಚಿಸಿದರೆ ಅಶಾಂತಿ ಮರಣವನ್ನು ಮತ್ತಷ್ಟು ಸಮೀಪಿಸುತ್ತದೆ ಹಾಗಾಗಿ ಮನುಷ್ಯನಿಗೆ ಮುಖ್ಯವಾಗಿ ಎಲ್ಲರೊಂದಿಗೆ ನಗುನಗುತ್ತಾ ಅನೂನ್ಯತೆಯಿಂದ ಜೀವನ ನಡೆಸಿ ಮತ್ತೊಬ್ಬರ ಕಷ್ಟಕ್ಕೆ ಆಸರೆಯಾಗುವ ಮನೋಭಾವ ಹೊಂದಿದ್ದರೆ ಸಾಕು ಅದೇ ಜೀವನ “ಸಮರಸ ಜೀವನ”ವಾಗಬಹುದು ಎಂದು ಗಟ್ಟಿತನದ ಮಾತನ್ನು ಮನದಲ್ಲಿ ಮೈಗೂಡಿಸಿಕೊಂಡಿರುವ ಈ ವ್ಯಕ್ತಿ ಇಡೀ ತನ್ನ ಜೀವನವನ್ನೇ ಸಮಾಜ ಸೇವೆಗೆ ಮೀಸಲಿಡುವೆ ಯಾವುದೇ ಜಾತಿ ಧರ್ಮ ಲಿಂಗ ತಾರತಮ್ಯ ಮಾಡದೇ ಬುದ್ಧ ಬಸವ ಅಂಬೇಡ್ಕರ್ ರವರ ಮಾರ್ಗದರ್ಶನದಲ್ಲೇ ನಡೆದು “ಜನರ ಸೇವೆಯೇ ನನ್ನ ಮನೆಯ ಸೇವೆ, ಬಡ ಮಕ್ಕಳ ಸೇವೆಯೇ ನನ್ನ ಮನದ ಸೇವೆ” ಎಂಬ ಹೃದಯವಂತಿಕೆ ಮಾತುಗಳನ್ನು ಹೇಳುವುದರ ಜೊತೆಗೆ ಈಗಾಗಲೇ ತಮ್ಮ ಸೇವಾವೃತ್ತಿಯಲ್ಲಿ ಬಡತನ ಹಸಿವು ಶಿಕ್ಷಣವಂಚಿತ ಮಕ್ಕಳಿಗೆ ಆಶ್ರಯ ನೀಡುವುದರ ಜೊತೆಗೆ ಅನ್ನ ಅಕ್ಷರವನ್ನು ನೀಡುತ್ತಾ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಪ್ರತೀ ಕುಟುಂಬದ ತಂದೆ ತಾಯಿಯರ ಕನಸನ್ನು ನನಸು ಮಾಡಿ ಮನೆಯ ಕೆಟ್ಟ ಪರಿಸ್ಥಿತಿಯನ್ನು ಬದಲಾಯಿಸಿ ಪ್ರತೀ ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳಾಗಿ ಪ್ರತೀ ಸಮುದಾಯಗಳು ಬಲಿಷ್ಠವಾಗಬೇಕು ಎಂಬ ಬಹುದೊಡ್ಡ ಕನಸು ಈ ನಿಲಯ ಪಾಲಕನದ್ದಾಗಿದೆ.
ಸಮಾಜದ ಬದಲಾವಣೆಗಾಗಿ ಮತ್ತು ಸಮುದಾಯಗಳ ಬಲಿಷ್ಠತೆಗಾಗಿ ಇಷ್ಟೆಲ್ಲಾ ಕನಸನ್ನು ಹೊತ್ತುಕೊಂಡಿರುವ ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಅಲ್ವಾ…. ಅವರೊಬ್ಬ ಸಾಮಾನ್ಯ ವ್ಯಕ್ತಿತ್ವ ಹೊಂದಿದ ವ್ಯಕ್ತಿ, ಯಾವುದೇ ಆಡಂಬರದ ಬದುಕನ್ನು ಹೊಂದಿರದ, ಸರ್ಕಾರಿ ನೌಕರನಾಗಿದ್ದರೂ ಬಹಳ ನಯವಿನಯತೆಯಿಂದ ಬದುಕುವಂತಹ ಕಟ್ಟುನಿಟ್ಟಿನ ಶಿಸ್ತಿನ ಸಿಪಾಯಿಯಂತೆ ಬದುಕುತ್ತಿರುವ ಮತ್ತು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಜೊತೆಗೆ ಬದುಕಿನ ನೈತಿಕತೆಯನ್ನು ಬೆಳೆಸುವಲ್ಲಿ ನಿರತರಾಗಿರುವ ತಪ್ಪು ದಾರಿಗಳಿಗೆ ಕಠೋರವಾದಿಯಾದ ಸಮಾಜ ಕಲ್ಯಾಣ ಇಲಾಖೆಯ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಿಲಯಪಾಲಕರಾದ ವಿದ್ಯಾರ್ಥಿಗಳಿಂದ ಹುಲಿಯೆಂದು ಬಿಂಬಿಸಿಕೊಂಡವರು ಶ್ರೀ ಮಾನ್ ಆಸ್ಕರ್ ಅಲಿ ಹಿರೇಮನಿ.
ಇವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಧಮ್ಮೂರು ಗ್ರಾಮದ ರಾಜಾಸಾಬ್ ಹಿರೇಮನಿ ಹಾಗೂ ಮಕ್ತುಮ್ ಬೀ ಅವರ ಮಗನಾಗಿದ್ದು ಇವರು ತಮ್ಮ ವಿದ್ಯಾಭ್ಯಾಸವನ್ನು ಹುಟ್ಟೂರಲ್ಲೇ ಮುಗಿಸಿ ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಪದವಿ, ಸ್ನಾತಕೋತ್ತರ ಪದವಿ, ಬಿ. ಎಡ್. ಹಾಗೂ ಇತಿಹಾಸ ಮತ್ತು ಪ್ರಾಚ್ಯಾಶಾಸ್ತ್ರ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದು ಕಾನೂನು ಶಾಸ್ತ್ರದಲ್ಲಿಯೂ ಶಿಕ್ಷಣ ಪಡೆದ ಇವರು 2002 ರಲ್ಲಿ ಪ್ರಪ್ರಥಮವಾಗಿ ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಡುವ ಬಾಲಕರ ವಸತಿ ನಿಲಯಕ್ಕೆ ನಿಲಯಪಾಲಕರಾಗಿ ನೇಮಕಗೊಳ್ಳುತ್ತಾರೆ, ಮುಂದೆ ಧಾರವಾಡ ತಾಲೂಕಿನ ಅಳ್ನಾವರ ವಸತಿ ನಿಲಯಕ್ಕೆ ನೇಮಕಗೊಂಡು, ಗದಗ ಜಿಲ್ಲೆಯ ಮುಳಗುಂದ ಮುರಾರ್ಜಿ ವಸತಿ ನಿಲಯಕ್ಕೆ ನಿಲಯಪಾಲಕರಾಗಿ ಸೇವೆ ಸಲ್ಲಿಸಿ 2013ರಲ್ಲಿ ಧಾರವಾಡಕ್ಕೆ ವರ್ಗಾವಣೆಗೊಂಡ ಇವರು ಹತ್ತಾರು ವಸತಿ ನಿಲಯಗಳಲ್ಲಿ ಸೇವೆ ಮಾಡಿದ ಅನುಭವವೇ ನನ್ನ ಬದುಕಿನ ದಾರಿಯನ್ನೇ ಬದಲಾಯಿಸಿದೆ ಹಲವಾರು ಬಡ ವಿದ್ಯಾರ್ಥಿಗಳ ಕೆಟ್ಟ ಪರಿಸ್ಥಿತಿಯನ್ನು ಅರಿತು ಅವರಿಗೆ ನನ್ನ ಚಿಕ್ಕ ಅಳಿಲು ಸೇವೆಯನ್ನು ನೀಡುತ್ತಾ ಬಡತನವನ್ನು ನೀಗಿಸಲು ಮೊದಲು ಶಿಕ್ಷಣಬೇಕು ಆ ಶಿಕ್ಷಣದಿಂದ ವಂಚಿತರಾಗುವ ಅದೆಷ್ಟೋ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಸರಿದೂಗಿಸುವಲ್ಲಿ ನಿರತನಾಗಲು ಈ ಹುದ್ದೆ ನನಗೆ ತುಂಬಾ ಸಹಾಯಕವಾಗಿದೆ ಮತ್ತು ಇಂತಹ ವಿಭಿನ್ನ ಮಾನವೀಯ ಮೌಲ್ಯಗಳನ್ನು ಕಲಿಸಿಕೊಟ್ಟ ನನ್ನ ನೆಚ್ಚಿನ ಗುರುಗಳು, ಮಾರ್ಗದರ್ಶಕರು ಹಾಗೂ ಪೂಜ್ಯ ತಂದೆಯವರೇ ಕಾರಣ ಅವರು ಹಾಕಿಕೊಟ್ಟ ಪ್ರತಿಯೊಂದು ಮಾರ್ಗದರ್ಶನದಲ್ಲೇ ಇಲ್ಲಿಯವರೆಗೆ ಸಾಗಿದ್ದೆ ನನಗೆ ಈ ಹುದ್ದೆ ದೊರೆತಿದ್ದು ಹಾಗಾಗಿ “ಮನುಷ್ಯನಲ್ಲಿರುವ ಮೌಲ್ಯಗಳೇ ಅವನನ್ನು ಗುರುತಿಸುತ್ತವೆ ಮತ್ತು ಮುನ್ನೆಲೆಗೆ ತರುತ್ತವೆ” ಎನ್ನುವುದಕ್ಕೆ ಈ ನನ್ನ ಚಿಕ್ಕ ಸಮಾಜ ಸೇವೆಯ ಕಾರ್ಯಗಳೇ ಕಾರಣ ನನ್ನ ಜೀವ ಇರುವವರೆಗೂ ನಾನು “ನನ್ನ ದೇಶ ನನ್ನ ಜನ” ಎಂದು ಬದುಕುತ್ತೇನೆ ಪ್ರತೀ ತನು ಮನಗಳನ್ನು ಶುದ್ಧಿಸಿಕೊಳ್ಳುವಲ್ಲಿ ಪ್ರೇರಣೆ ನೀಡುತ್ತೇನೆ ಇದು ನನ್ನ ನಿತ್ಯ ಕಾಯಕ ಎಂದು ಮನಬಿಚ್ಚಿ ನುಡಿದಿದ್ದಾರೆ.
ನನ್ನ ತಂದೆ ತಾಯಿಯರ ಶಿಕ್ಷಣ ಅಲ್ಪವಾಗಿದ್ದರೂ ಕೂಡ ಅವರಲ್ಲಿರುವ ಮಾನವೀಯ ಮೌಲ್ಯಗಳಿಗೆ ಮಾತ್ರ ಕಡಿಮೆ ಇರಲಿಲ್ಲ. ಅವರ ಶಿಕ್ಷಣ ಕೇವಲ 10ನೇ ತರಗತಿ ಆದರೂ ನಮ್ಮೂರಲ್ಲೇ ಅವರಿಗೆ ಸಾಲಿ ಮನೆತನದವರೆಂದು ಹೇಳುವ ವಾಡಿಕೆಯಿತ್ತು ಮತ್ತು ನನ್ನ ತಂದೆ ಸಿಕ್ಕಿರುವ ನೌಕರಿಯನ್ನೇ ಬಿಟ್ಟು ಕೃಷಿ ಕ್ಷೇತ್ರಕ್ಕೆ ಹೋಗಿ ಸುಮಾರು 1960-70 ದಶಕದಲ್ಲೇ ದ್ರಾಕ್ಷಿ ಬೆಳೆದು ಹೊರದೇಶಕ್ಕೆ ರಫ್ತ್ತು ಮಾಡಿ ಇಡೀ ರಾಜ್ಯಕ್ಕೆ ಹೆಸರುವಾಸಿ ರೈತನೆಂಬ ಹೆಗ್ಗಳಿಕೆಯೂ ಪಡೆದುಕೊಂಡಿದ್ದರು ಹಾಗಾಗಿ ನನ್ನ ತಂದೆಯು ಕೃಷಿಯಲ್ಲಿ ಪಟ್ಟ ಪರಿಶ್ರಮವೇ ನನ್ನ ಜೀವನಕ್ಕೆ ಫಲವೆಂದು ಹೇಳುತ್ತೇನೆ ಮತ್ತು ಅಂತಹ ದಿನಮಾನಗಳಲ್ಲಿ ನಮ್ಮನ್ನು ಶಿಕ್ಷಣವಂತರನ್ನಾಗಿ ಮಾಡಿ ಇವತ್ತು ಒಂದು ಹುದ್ದೆಯಲ್ಲಿರಿಸಿ ಇಡೀ ಗ್ರಾಮದಲ್ಲೇ ಹೆಚ್ಚಿನ ಶಿಕ್ಷಣ ಪಡೆದ ಹಾಗೂ ಅತೀಹೆಚ್ಚು ಶಿಕ್ಷಣವಂತರ ಕುಟುಂಬವೆಂದರೆ ಅದು ನಮ್ಮ ಸಾಲಿ ಮನೆತನ ಹಿರೇಮನಿಯವರ ಕುಟುಂಬ ಎಂದು ಹೆಸರುವಾಸಿಯಾಗಿದೆ. ನನ್ನ ತಂದೆಯವರು ಕೂಡ ಹಲವಾರು ದಾರ್ಶನಿಕರ, ವಚನಕಾರರ ಹಾಗೂ ಬುದ್ಧ ಬಸವ ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನೇ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಾಬಾ ಸಾಹೇಬರ ಮಾತಿನಂತೆ “ಶಿಕ್ಷಣವೇ ಮೂಲ ಮಂತ್ರ, ಆ ಶಿಕ್ಷಣದ ದೀಪ ಪ್ರತೀ ಮನೆಯಲ್ಲೂ ಉರಿಯುತ್ತಿರಬೇಕು ಮತ್ತು ಪ್ರಜ್ವಲಿಸುತ್ತಿರಬೇಕು ಅದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ” ಎಂಬಂತೆ ನಡೆದ ಪರಿಣಾಮವೇ ನನ್ನ ಈ ಹುದ್ದೆ ದೊರೆಯಲು ಕಾರಣವಾಗಿದೆ. ಹಾಗಾಗಿ ನನ್ನ ಸರ್ಕಾರಿ ಸೇವೆಯ ಜೊತೆಗೆ ವ್ಯಯಕ್ತಿಕ ಸೇವೆಯನ್ನು ಸಮಾಜದ ಒಳಿತಿಗಾಗಿ ಏಳಿಗೆಗಾಗಿ ಅಭಿರುದ್ಧಿಗಾಗಿ ಶಿಕ್ಷಣವಂತರನ್ನಾಗಿ ಮಾಡುವಲ್ಲಿ ನಿರತನಾಗಿದ್ದೇನೆ ಎಂದಿದ್ದಾರೆ.
ಹಾಗಾಗಿ ಇವರೊಬ್ಬ ನಿಷ್ಠಾವಂತ ಕಾಯಕವ್ಯಕ್ತಿ ಮತ್ತು ಹಸಿದ ಮಕ್ಕಳಿಗೆ ಬಡ ಮಕ್ಕಳಿಗೆ ಶಿಕ್ಷಣವಂಚಿತ ಮಕ್ಕಳಿಗೆ “ಅನ್ನ-ಅಕ್ಷರ- ಅರಿವು” ವನ್ನು ನೀಡುವಂತಹ ಮೂರು ಮೂಲಂಶಗಳ ದಾಸೋಹಿ ಎಂದೇ ಹೆಸರುವಾಸಿಯಾಗಿದ್ದಾರೆ.

ತಮಗೆ ಒಲಿದ ಅಧಿಕಾರವನ್ನು ಅತೀ ನಿಷ್ಠೆ ನಿಯಮದಿಂದ ಕಾಯಕ ತಪ್ಪದೇ ಪಾಲಿಸುವಂತಹ ದೃಢ ನಿರ್ಧಾರದ ಗಟ್ಟಿತನದ ದಿಟ್ಟ ಮನಸಿನ ಸ್ಪಷ್ಟತೆಯ ನಿಷ್ಠಾಭಾವದ ವ್ಯಕ್ತಿ ಈ ಆಸ್ಕರ್ ಅಲಿ ಆಗಿದ್ದಾರೆ. ಅವರ ಜೇವನದುದ್ದಕ್ಕೂ ಸಮಾಜ ಸೇವೆಯೇ ನನ್ನ ಬದುಕೆಂದು ಹೇಳುವ ಮೂಲಕ ಇಂದಿಗೂ ಅದೇ ಸನ್ಮಾರ್ಗದಲ್ಲಿ ನಡೆದ ಶ್ರಮಜೀವಿಯಾಗಿದ್ದಾರೆ ಹಾಗೂ ಈಗಾಗಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇನ್ನೊರ್ವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾಯಕದಲ್ಲೂ ಮೆರೆದು ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಡುವ ಗೌರಿಶಂಕರ ಬಾಲಕರ ವಸತಿನಿಲಯದ ವಾಸ್ತವತೆಯನ್ನೇ ಬದಲಾಯಿಸಿ ಕಟ್ಟುನಿಟ್ಟಿನ ಆಡಳಿತ ನಡೆಸಿದ ನಿಲಯಪಾಲಕರಾಗಿದ್ದಾರೆ.

  • ಹನುಮಂತ ದಾಸರ – 9945246234
    ಯುವ ಬರಹಗಾರರು ಧಾರವಾಡ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ