
ಇಂಡಿ: ಶಿಕ್ಷಣ ಕ್ಷೇತ್ರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ರೂಪಿಸಲಾಗುತ್ತದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ ಆದ್ರೆ,ಇಲ್ಲಿರುವ ಬೇಜವಾಬ್ದಾರಿ ಅಧಿಕಾರಿಗಳು ಕಳಪೆ ಮಟ್ಟದ ಆಹಾರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇಂಡಿ ಪಟ್ಟಣದ ವಿಜಯಪುರ ರಸ್ತೆ ಆದರ್ಶ ವಿದ್ಯಾಲಯ ಶಾಲೆ ಎದುರುಗಡೆ ಇರುವ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ನಮಗೆ ಕಳಪೆ ಮಟ್ಟದ ಅಕ್ಕಿಯಿಂದ ಆಹಾರ ತಯಾರಿಸಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಾಸ್ಟೆಲ್ ಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ನೀಡಲಾಗುತ್ತಿದೆ ಆದರೆ ಮೇಲ್ವಿಚಾರಕರ ಬೇಜವಾಬ್ದಾರಿತನದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸರಿಯಾಗಿ ಆಹಾರ ಪೂರೈಕೆ ಆಗುತ್ತಿಲ್ಲ .
ಇಲ್ಲಿಗೆ ನಿಲಯದ ಮೇಲ್ವಿಚಾರಕರು ಇದ್ದರೂ ಇಲ್ಲದಂತಾಗಿದ್ದಾರೆ ಕಳಪೆ ಮಟ್ಟದ (ಜಾಳಿಗೆ ಗಟ್ಟಿದ್) ಅಕ್ಕಿಯಿಂದ ವಿದ್ಯಾರ್ಥಿಗಳಿಗೆ ಕಳಪೆಮಟ್ಟದ ಆಹಾರ ತಯಾರಿಸಿ ಕೊಡುತಿದ್ದಾರೆ ಎಂಬುದು ವಿದ್ಯಾರ್ಥಿಗಳ ಗೋಳಾಗಿದೆ.
ಮೇಲ್ವಿಚಾರಕರಂತೂ ಹಾಸ್ಟೆಲ್ ಗೆ ಮನಸಿಗೆ ಬಂದಾಗ ಬರುತ್ತಾರೆ ಇದನ್ನು ಕೇಳುವವರು-ಹೇಳುವವರು ಯಾರೂ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆಮಾಡಿದೆ.
ಪ್ರಸ್ತುತ ದಿನದಲ್ಲಿ ಇರುವಂತಹ ವಿದ್ಯಾರ್ಥಿಗಳು ಸೌಲಭ್ಯ ಮರಿಚೀಕೆಯಾಗಿರುವುದರಿಂದ ಒಬ್ಬೊಬ್ಬರೇ
ವಸತೊ ನಿಲಯದಿಂದ ಕಾಲುಕಿತ್ತು ಮನೆಗೆ ಹಿಂತಿರುಗುತ್ತಿದ್ದಾರೆ ಎಂಬುದು ಇಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತಕ್ರಮ ಕೈಗೊಂಡು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕಿದೆ ಎನ್ನುವುದು ವಿದ್ಯಾರ್ಥಿಗಳ ಆಶಯವಾಗಿದೆ.
ವರದಿ-ಅರವಿಂದ್ ಕಾಂಬಳೆ ಇಂಡಿ
