
ಲಿಂಗಸುಗೂರು:ಸ್ಥಳೀಯ ಪುರಸಭೆ ಸದಸ್ಯರಾದ ಫಾತಿಮಾಬಿ ಮೌಲಾಸಾಬ,ಪ್ರಮೋದ ಕುಲಕರ್ಣಿ, ಮೌಲಾಸಾಬ ಚೋಟುಸಾಬ,ಶರಣಪ್ಪ ಬಸಪ್ಪ ಕೆಂಗೇರಿ ಅವರ ಮೇಲೆ ಅನರ್ಹತ ತೂಗುಕತ್ತಿ ನೇತಾಡುತ್ತಿದೆ.
ಸ್ಥಳೀಯ ಪುರಸಭೆಗೆ ಜರುಗಿದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 13 ಸದಸ್ಯರು ಆಯ್ಕೆಗೊಂಡಿದ್ದರು ಈ ಪೈಕಿ ಮೇಲಿನ ನಾಲ್ವರು ಸದಸ್ಯರು,
2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ1987ರ ಅಡಿ ಕಾರಣ ಕೇಳಿ ನೋಟಿಸ್ ಜಾರಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡು ಸಾರ್ವಜನಿಕವಾಗಿ ಘೋಷಣೆ ಮಾಡಿಕೊಂಡಿದ್ದರು.ಈ ಮಾಡಿದ್ದಾರೆ ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು.
ಭೂಪನಗೌಡ ಕರಡಕಲ್ಲ ಅವರು,ನಾಲ್ವರು ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಗೊಂಡು ಹೇಳಿಕೆ ನೀಡಿರುವ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ. ಕಾರಣ ಜುಲೈ 3ರಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ನೀಡಿದ್ದಾರೆ.ಕಾಂಗ್ರೆಸ್
ನೋಟಿಸ್ ತಲುಪಿದ ಹತ್ತು ದಿನಗಳೊಳಗಡೆ ತಮ್ಮ ಲಿಖಿತ ವಿವರ ನೀಡಲು ಸೂಚಿಸಲಾಗಿದೆ ತಪ್ಪಿದಲ್ಲಿ ನಿಯಮಾನುಸಾರ ಪರಿಶೀಲಿಸಿ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರಡಿ ತಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ:ಪುನೀತಕುಮಾರ
