ಲಿಂಗಸುಗೂರು:ಹಟ್ಟಿ ಚಿನ್ನದ ಗಣಿಯಲ್ಲಿರುವ ಎಐಟಿಯುಸಿ ಕಾರ್ಮಿಕ ಸಂಘಟನೆಯು ಎಡ ಪಂಥೀಯ ಸಂಘಟನೆಯಾಗಿರದೇ ಮೋದಿ ವಾದಿಗಳ ಎಐಟಿಯುಸಿ ಸಂಘಟನೆಯಾಗಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಗಂಭೀ ರವಾಗಿ ಆರೋಪ ಮಾಡಿ ಮಾತನಾಡಿದ ಅವರು,ಎಐಟಿ ಯುಸಿ ಸಂಘಟನೆ ಹಟ್ಟಿ ಕಂಪನಿಯ ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾರ್ಮಿಕರಿಗೆ ಮಂಕುಬೂದಿ ಎರಚಿ ಗುತ್ತಿಗೆದಾರ ರವಿ .ಕೆ. ಇಸ್ಪಿಟ್, ಮಟ್ಕಾದಂತ ಕೆಲಸ ಮಾಡುತ್ತಿದ್ದಾರೆ ಇದರಿಂದಾಗಿ ಕಾರ್ಮಿ ಕರ ವೇತನ ಹೆಚ್ಚಳವಾಗುತ್ತಿಲ್ಲ.ರಾಜ್ಯ ಸರ್ಕಾರಿ ನೌಕರರಲ್ಲ,ಅವರು ಸೇವೆ ವೃತ್ತಿಯಲ್ಲಿ ಬರುತ್ತಾರೆ, ಆದರೂ ಅವರಿಗೆ ಸರ್ಕಾರ 7ನೇ ವೇತನ ಆಯೋಗವನ್ನು ಅನುಷ್ಠಾನ ಗೊಳಿಸಲು ಚಿಂತನೆ ನಡೆಸುತ್ತಿದೆ ಆದರೆ ಹಟ್ಟಿ ಚಿನ್ನದ ಗಣಿ ನೌಕರರು ಉತ್ಪಾದಕ ನೌಕರರಾಗಿದ್ದು,ತಮ್ಮ ಜೀವನವನ್ನು ಪಣಕ್ಕಿಟ್ಟು ಭೂಮಿಯ ಆಳದಲ್ಲಿ ಇಳಿದು ಚಿನ್ನವನ್ನು ಕೊಡುತ್ತಾರೆ ಇಂತಹ ಕಾರ್ಮಿಕರಿಗೆ ಕಳೆದ 28 ತಿಂಗಳುಗಳಿಂದ ವೇತನ ಹೆಚ್ಚಳ ಮಾಡದೇ ಹಳೆಯ ಆದೇಶಕ್ಕೆ 10 ರಷ್ಟು
ನೀಡುತ್ತಿದ್ದೇವೆಂದು ಹೇಳುತ್ತಿದ್ದಾರೆ, ಆದರೆ ಈ ವಿಧಾನ ಕೇವಲ 3 ತಿಂಗಳಿಗೆ ಮಾತ್ರ ಸಿಮೀತವಾಗಿರುತ್ತದೆ. ಆದರೆ ಕಂಪನಿಯ ಅಧಿಕಾರಿಗಳು ಕಾರ್ಮಿಕರ ನಿಯಮಗಳನ್ನು ಗಾಳಿಗೆ ತೂರಿ ಕಳೆದ 28 ತಿಂಗಳುಗಳಿಂದ ಕಾರ್ಮಿಕರಿಗೆ ಹಳೆಯ ವೇತನವನ್ನೇ ನೀಡುತ್ತಿದ್ದಾರೆ. ವೈದ್ಯಕೀಯ ಅನರ್ಹತೆಯನ್ನು ಜಾರಿಗೆ ತರುತ್ತೇವೆಂದು ಹೇಳಿ ನೂರಾರು ಕೋಟಿ ರೂ. ಗಳನ್ನು ಪಡೆದು ಕಾರ್ಮಿಕರಿಗೆ ವೈದ್ಯಕೀಯ ಅನರ್ಹತೆಗೆ ಸಹಿ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾರ್ಮಿಕರಿಗೆ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ವೇಳೆ ವೈದ್ಯಕೀಯ ಅನರ್ಹತೆ ಸಹಿ ಆಗಿದ್ದರೆ,ಸಭೆಯ ನಡಾವಳಿಯ ಪ್ರತಿಯನ್ನು ಬಹಿರಂಗ ಪಡಿಸಿ,ಬಿಜೆಪಿ ಸರ್ಕಾರ ಕಾರ್ಮಿಕರ ಆಹಾರ ಕಟ್ಟನ್ನು ಬಂದ್ ಮಾಡಿದೆ.ಕಾರ್ಮಿಕರಿಗೆ ಬಟ್ಟೆಗಳನ್ನು ಕೊಡುವುದನ್ನು ನಿಲ್ಲಿಸಿದೆ.ಕಾರ್ಮಿಕರ ಬೋನಸ್,
ಕೊಟ್ಟಿಲ್ಲ, ಆದ್ದರಿಂದ ರಾಜ್ಯ ಸರ್ಕಾರ ಸೌಲಭ್ಯಗಳನ್ನು ಮರಳಿ ಪ್ರಾರಂಭಿಸಬೇಕೆಂದರು ಕಾರ್ಮಿಕ ಮುಖಂಡ ಆಮೀರ ಅಲಿಯವರು ಮಾತನಾಡಿ ವೈದ್ಯಕೀಯ ಅನರ್ಹತೆ ಎಐಟಿಯುಸಿ ಸಂಘಟನೆಯವರೆ 186 ಜನರಿಗೆ ವೈದ್ಯಕೀಯ ಆನರ್ಹತೆ ಮೇಲೆ ಕೆಲಸ ಕೊಟ್ಟರೆ ಮುಂದೆ ಎಂದು ಕೇಳುವುದಿಲ್ಲ. ಇದೇ ಕೊನೆಯ ಬಾರಿ ವೈದ್ಯಕೀಯ ಅನರ್ಹತೆ ಮೇಲೆ ಕೆಲಸ ಕೊಡಿ ಎಂದು 2017 ರಲ್ಲಿಯೇ ಆಡಳಿತ ಮಂಡಳಿಯವರಿಗೆ ಪತ್ರ ಬರೆದು ಕೊಟ್ಟಿದ್ದಾರೆ, ಈಗ ವೈದ್ಯಕೀಯ ಅನರ್ಹತೆಯನ್ನು ಜಾರಿಗೆ ತರುತ್ತೇವೆ ಆಡಳಿತ ಮಂಡಳಿಯವರು ಒಪ್ಪಿಗೆ ನೀಡಿದ್ದಾರೆ-ವೈದ್ಯಕೀಯ ಆನರ್ಹತೆಯ ಜಾರಿಗೆ ತಂದರು ಸಹ ಇದರಲ್ಲಿ ಹಲವಾರು ಸರತ್ತುಗಳನ್ನು ವಿಧಿಸುವ ಸಂಭವ ಇದೆ ಎಂದರು ಕಾರ್ಮಿಕ ಮುಖಂಡರಾದ ಚೆನ್ನಪ್ಪ ಕೊಟಿ, ರೇವಣಸಿದ್ದಪ್ಪ ಸಂಗೇನಾಗ್,ಗುಡದಪ್ಪ,ನಾಗೇಶರಾವ್ ಸೇರಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.