ದಾನ ಶ್ರೇಷ್ಠತೆಯಲ್ಲಿ ರಕ್ತದಾನ ಒಂದಾಗಿದೆ
ರಕ್ತವು ಮನುಷ್ಯನಿಗೆ ಅತಿ ಮುಖ್ಯವಾದದ್ದು ಬೇರಾವು ದಾನವನ್ನು ನಾವು ಕೊಂಡು,ಉತ್ಪಾದಿಸಿ,ಇತರರಿಂದ ಪಡೆದು,ಬಟ್ಟೆ,ಆಹಾರ,ಧಾನ್ಯ,ದವಸ,ಆಸ್ತಿ ಇತರೆ ದಾನಗಳನ್ನು ಸಂತೋಷದಲ್ಲಾಗಲಿ ಗುಂಪುಗಳಲ್ಲಾಗಲಿ ಹಂಚಿಕೊಳ್ಳ ಬಹುದು ಆದರೆ ರಕ್ತ ದಾನ ಹಾಗಲ್ಲ ಒಬ್ಬ ವ್ಯಕ್ತಿಯ ಜೀವನದ ದೈಹಿಕವಾಗಿ ರಕ್ತದ ಸಾಮಾರ್ಥ್ಯ ಕಡಿಮೆ ಇದ್ದಾಗ ಅವನ ಯಾವುದೊ ಅಪಘಾತದಲ್ಲಿ ಸಿಲುಕಿದಾಗ ಗರ್ಭಿಣಿಯರು ಹೆರಿಗೆಯ ವ್ಯವಸ್ಥೆಯಲ್ಲಿ ಇನ್ನಿತರ ಅಘಾತಕಾರಿ ಅಪಾಯಗಳು ಮಾನವನಿಗೆ ಒದಗಿದಾಗ ಮನುಷ್ಯನಿಗೆ ರಕ್ತಬೇಕಾಗುತ್ತದೆ.
ಆದಾ ಕಾರಣ ನಮ್ಮ ಜಗತ್ತಿನಲ್ಲಿ ಜನ್ಮ ನೀಡುವುದು ತಾಯಿಗೆ ಮಾತ್ರ ಅವಕಾಶವಿರೋದು ಆದರೆ ಆ ತಾಯಿ ಜೀವ ನೀಡಿದ ಮನುಷ್ಯನನ್ನು ಮತ್ತೊಮ್ಮೆ ಅಘಾತದಿಂದ ಕಾಪಾಡೋದು ಈ ರಕ್ತದಾನ ಮಾಡಿದ ವ್ಯಕ್ತಿಗೆ ಸೇರುತ್ತದೆ.
ಆದ ಕಾರಣ ಸ್ನೇಹಿತರೆ ಯಾವುದೇ ಸಂಧರ್ಭದಲ್ಲಿ ರಕ್ತದ ಬೇಕಡಿಕೆಯ ಆಹ್ವಾನಗಳು ಕೇಳಿ ಬಂದರೆ ರಕ್ತದಾನ ಮಾಡಲು ಮುಂದಾಗಿ ಒಂದು ಜೀವಕ್ಕೆ ಜನ್ಮ ನೀಡಿದ ಪುಣ್ಯ ತಮಗೆ ಲಭಿಸುತ್ತದೆ ತುರ್ತು ಪರಿಸ್ಥಿತಿಯಲ್ಲಿ ಅಪಘಾತ,ಸಿಜಿರಿನ್,ಗರ್ಭದಾರಣೆಯ ಇನ್ನಿತರ ಸ್ಥಿತಿಯಲ್ಲಿ ನಮ್ಮ ಸೇವೆಯನ್ನು ರಕ್ತ ದಾನ ಮಾಡುವುದರ ಜ್ಯೊತೆಯಲ್ಲಿ ಮಾಡದಿದ್ದ ಪಕ್ಷದಲ್ಲಿ ಅವರಿಗೆ ಹೊಂದಿಸುವ ಪ್ರಯತ್ನ ಮಾಡುವ ಮೂಲಕ ನಾವು ಶ್ರಮಾದಾನ ಮಾಡಿ ರಕ್ತವನ್ನು ಅವಶ್ಯ ಇರುವ ವ್ಯಕ್ತಿಗೆ ದೊರಕಿಸುವ ಪ್ರಯತ್ನ ನಮ್ಮದಾಗಿಸೊ ಶ್ರಮ ಜೀವಿಯಲ್ಲೊಂದಾಗೋಣ.
ಪ್ರಪಂಚದಲ್ಲಿ ಎಲ್ಲಾ ವಸ್ತುಗಳು ಕೃತಕವಾಗಿ ತಯಾರಿಸಿ ಅಳವಡಿಸಬಹುದು ಆದರೆ ರಕ್ತಮಾತ್ರ ಕೃತಕವಾಗಿ ತಯಾರಿಸಲು ಬರುವುದಿಲ್ಲ ಆದ ಕಾರಣ ದಾನ
ಶ್ರೇಷ್ಠತೆಯಲ್ಲಿ ರಕ್ತದಾನ ಬಹುಮುಖ್ಯವಾದದ್ದು ರಕ್ತದಾನ ಮಾಡಿ ಜೀವ ಉಳಿಸಿ.
ಸದ್ಯ ನೀರು ಕೊಡಲು ಹಿಂಜರಿಯುವ ಸದ್ಯದ ಪ್ರಾಪಂಚಿಕ ವ್ಯವಸ್ಥೆಯಲ್ಲಿ ಯಾವುದೊ ಒಂದು ವ್ಯಾಟ್ಸಪ್ ರಕ್ತದ ಗುಂಪುಗಳಲ್ಲಿ ಅಥವಾ ಫೇಸ್ಬುಕ್ ನಲ್ಲಿ ವೀಕ್ಷಿಸಿ ಸಂಪರ್ಕಿಸಿ ರಕ್ತದಾನ ಮಾಡುವ ಮಹನೀಯರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ . ಸಂಕಷ್ಟದಲ್ಲಿ ರಕ್ತದಾನ ಮಾಡಿ ಜೀವ ಉಳಿಸಲು ಮುಂದಾಗೋಣ ಗೆಳಯರೆ,
ರಕ್ತದಾನ ಮಾಡುವುದರಿಂದ ಪ್ರಯೋಗಗಳು:
*ಹೊಸ ರಕ್ತದ ಕಣಗಳು ಉತ್ಪತ್ತಿಯಾಗುತ್ತವೆ.
*ಆರೋಗ್ಯವಾಗಿರಲು ಪ್ರೇರಣೆಯಾಗುತ್ತದೆ.
*ರಕ್ತದಾನ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
*ಒಂದು ಜೀವ ಉಳಿಸಿದ ಪುಣ್ಯ ಲಬಿಸುತ್ತಿದೆ.
-ಹನುಮೇಶ ಭಾವಿಕಟ್ಟಿ
ಡಣಾಪೂರ 9945760286
ತಾ.ಗಂಗಾವತಿ