ಭದ್ರಾವತಿ: ಯಾರದ್ದೋ ಜಮೀನನ್ನು ಇನ್ಯಾರದೋ ಹೆಸರಿಗೆ ಖಾತೆ ಮಾಡುವುದು, ಸುಳ್ಳು ಸಾಕ್ಷಿ ಸಹಿ ಮಾಡಿಸಿ ಅಕ್ರಮವೆಸಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ಭದ್ರಾವತಿ ತಹಶೀಲ್ದಾರ್ ಕಚೇರಿ ಮುಂಭಾಗ ಚಳುವಳಿ ಆರಂಭಿಸಿದ್ದಾರೆ.
ತಾಲ್ಲೂಕಿನ ಮೈದೊಳಲು ಗ್ರಾಮದ ರೈತ ಲೊಕೇಶಪ್ಪ ಎಂಬುವವರ ಕುಟುಂಬಕ್ಕೆ ಸೇರಿದ ಸುಮಾರು 1.9ಎಕರೆ ಜಮೀನನ್ನು ಬೇರೊಬ್ಬ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ಖಾತೆ ಮಾಡಿರುವ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಹಾಗೂ ಅಕ್ರಮವಾಗಿ ಖಾತೆ ಪಡೆದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸದರಿ ಜಮೀನನ್ನು ರೈತ ಲೊಕೇಶಪ್ಪನ ಖಾತೆಗೆ ವರ್ಗಾವಣೆ ಮಾಡಿಕೊಡಬೇಕೆಂದು ಚಳುವಳಿಯಲ್ಲಿ ಪಾಲ್ಗೊಂಡು ರೈತ ಮುಖಂಡರು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಚಳುವಳಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಗೋರ್ಪಡೆ ಯಶವಂತರಾವ್ ಗೋರ್ಪಡೆ ರಾಮಚಂದ್ರರಾವ್ ಗೋರ್ಪಡೆ ಎಚ್ ಪಿ ಹಿರಿಯಣ್ಣಯ್ಯ ಮಂಜುನಾಥೇಶ್ವರ ಸೇರಿದಂತೆ ನೂರಾರು ರೈತರು ಚಳುವಳಿಯಲ್ಲಿ ಪಾಲ್ಗೊಂಡಿದ್ದಾರೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ