ಸುರಪುರ:ಕೆಂಭಾವಿ ಪಟ್ಟಣದಲ್ಲಿ ಮಳೆಗಾಗಿ ನಡೆಯುವ ವಿಶೇಷ ಪೂಜೆ ಹಿಂದಿನ ಸಂಪ್ರದಾಯದಂತೆ ಪ್ರತಿ ವರ್ಷವು ಕೂಡ ಪಟ್ಟಣದ ಎಲ್ಲಾ ಹಿರಿಯರು, ರೈತರು ಸೇರಿದಂತೆ ಯಾವುದೇ ಜಾತಿ ಮತ, ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡರು
ಮಳೆಗಾಗಿ ಪಟ್ಟಣದಲ್ಲಿರುವ ಒಂದು ನೂರಾ ಒಂದು 101 ಲಿಂಗಗಳಿಗೆ ಭಾಜಾ ಭಜಂತ್ರಿ,ಡೊಳ್ಳು, ಭಜನೆಯೊಂದಿಗೆ ಪಂಚಾಮೃತ ಅಭಿಷೇಕ ಮತ್ತು ಪಟ್ಟಣದ ಸೀಮೆ ಬದುವಿಗೆ ಇರುವ ಶ್ರೀ ರಾಮಲಿಂಗೇಶ್ವ ದೇವಸ್ಥಾನಕ್ಕೆ ತೆರಳಿ ಊರಿನ ಪ್ರಮುಖರು ಬೀದಿಗಳಲ್ಲಿ ಮತ್ತು ಪಟ್ಟಣದ ಸಾವಿರಾರು ರೈತರು ಸೇರಿದಂತೆ ಒಂದು ರಾತ್ರಿ ದೇವಸ್ಥಾನದಲ್ಲಿ ಇದ್ದು ದೇವರ ಲಿಂಗಕ್ಕೆ ಮಳೆಗಾಗಿ ಗಂಧದಾಭಿಷೇಕ,ಕುಂಕುಮಾ ಅಭಿಷೇಕ್, ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ ನೆರವೇರಿಸಿದರು.
ಶ್ರೀ ರಾಮಲಿಂಗೇಶ್ವರ ಪಲ್ಲಕ್ಕಿ ಸಮೇತ ಮಣ್ಣಿನ ಕೊಡದೊಂದಿಗೆ ಅಲ್ಲಿನ ದೇವಸ್ಥಾನದ ಕೆಳಗಿನ ಕುಂಡದಿಂದ ಮಡಿ ನೀರು ತಂದು ಕೆಂಭಾವಿಯ ಪುರಾಣ ಪ್ರಸಿದ್ಧ ಶ್ರೀ ರೇವಣಸಿದ್ದೇಶ್ವರರ ದೇವಸ್ಥಾನದಲ್ಲಿ ಪಂಚಲಿಂಗದ ಗದ್ದುಗೆಗೆ ಅಭಿಷೇಕ ಮಾಡುವುದು ಸಾಂಪ್ರದಾಯಿಕವಾಗಿ ಪ್ರತಿವರ್ಷ ನಡೆಯುವುದು ವಾಡಿಕೆ ಇದೆ ಎಂದು ರೈತ ಮುಖಂಡ ಹಾಗೂ ಜಾನಪದ ಪ್ರಶಸ್ತಿ ಪುರಸ್ಕೃತ ಮುರಗೇಶ ಸಾಹು ಹುಣಸಗಿ ಹೇಳಿದರು.
ಲೋಕ ಕಲ್ಯಾಣಕ್ಕಾಗಿ ಉತ್ತಮ ಮಳೆ,ಬೆಳೆಯಾಗಿ ರೈತಾಪಿ ವರ್ಗದ ಸಂಕಷ್ಟ ಪರಿಹಾರವಾಗಲೆಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ರೈತ ಮುಖಂಡ ಮಡಿವಾಳಪ್ಪಗೌಡ ಪೋ.ಪಾಟೀಲ ಮಾತನಾಡಿ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ತೀವ್ರ ತರಹವಾದ ಬರಗಾಲ ಇದ್ದು ರೈತಾಪಿ ವರ್ಗ ಹಾಗೂ ಜನಸಾಮಾನ್ಯರು ಕುಡಿಯುವ ನೀರಿಗೂ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರ ಪರಿಹಾರಕ್ಕಾಗಿ ಪಟ್ಟಣದ 101 ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.
ಉತ್ತಮ ಮಳೆಯಾಗಿ ಕೆರೆ ಕಟ್ಟೆ ಜಲಾಶಯಗಳು ತುಂಬಬೇಕು,ಜನರ ಬದುಕು ಹಸನಾಗಬೇಕು ಅದಕ್ಕಾಗಿ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲು ಪ್ರಾರ್ಥನೆ ಸಲ್ಲಿಸಿ ಪೂಜಾ ನೆರವೇರಿಸಲಾಯಿತು ಎಂದು ಪುರಸಭೆ ಮಾಜಿ ಸದಸ್ಯ ಮಹಿಪಾಲರೆಡ್ಡಿ ದಿಗ್ಗಾವಿ ಹೇಳಿದರು.
ಈ ವಿಶೇಷ ಪೂಜೆ ವೇಳೆಯಲ್ಲಿ ನಗರದ ಹಿರಿಯರು ಮತ್ತು ರೈತರು ಸೇರಿದಂತೆ ವಿಶೇಷ ಪೂಜೆಯಲ್ಲಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ