ಎನ್ ಆರ್ ಪುರ :- ಜೈನ ಮುನಿಗಳ ಹತ್ಯೆ ಖಂಡನೀಯ ಕಣಗಳಿಗೂ ನೋವು ಮಾಡದ ಮುನಿಗಳನ್ನು ಹಣದ ಕಾರಣಕ್ಕೆ ಕೊಲೆ ಮಾಡಿರುವುದು ದೇಶದ ದುರಂತ ಎಂದು ಮೆಣಸೂರು ಬಸವಕೇಂದ್ರದ ಶ್ರೀ ಬಸವಯೋಗಿ ಪ್ರಭು ಸ್ವಾಮಿಜಿ ಹೇಳಿದ್ದಾರೆ
ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜರು ಹಲವು ಗ್ರಂಥಗಳನ್ನು ರಚಿಸಿದ್ದಾರೆ ಎಂದು ಕೇಳಿದ್ದೇನೆ
ಜ್ಞಾನಿ. ಮೇಧಾವಿಗಳು. ಇವರನ್ನು ಕಳೆದುಕೊಂಡದ್ದು ಜೈನ ಧರ್ಮ ಹಾಗೂ ನಾಡಿಗೆ ನಷ್ಟವಾಗಿದೆ
ರಾಷ್ಟ್ರದ ಸಾಮರಸ್ಯ ಹಾಳುಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ಸರ್ಕಾರ ಮುನಿಗಳು. ಸಂತರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
