ಸಿಂಧನೂರು: ಜು-11
ಸೇವಾ ಮನೋಭಾವನೆಯೋಂದಿಗೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶಿಕ್ಷಕ ಮಾತ್ರ ಯಾವಾಗಲೂ ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾನೆ ಎಂದು ರಾಯಚೂರಿನ ಬಾಲಂಕು ಆಸ್ಪತ್ರೆಯ ವೈದ್ಯರಾದ ಡಾ||ಎ.ಶ್ರೀಧರರೆಡ್ಡಿ ಅಭಿಪ್ರಾಯಪಟ್ಟರು
ಅವರು ಭಾನುವಾರದಂದು ತಾಲೂಕಿನ ರೈತನಗರ ಕ್ಯಾಂಪಿನಲ್ಲಿ ಶ್ರೀ ತಾಯಿ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಬಳಗದವತಿಯಿಂದ ಶಿಕ್ಷಕ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಮುಖ್ಯಗುರು ರಾಜೇಂದ್ರ ಕೆ ಇವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಶ್ರೀಯುತ ರಾಜೇಂದ್ರ ಅವರು ಯಾವುದೇ ಸೌಲಭ್ಯಗಳು ವಿದ್ಯುತ್, ರಸ್ತೆಯಂತಹ ಮೂಲ ಸೌಲಭ್ಯಗಳು ಇಲ್ಲದತಂಹ ಕಾಲದಲ್ಲಿ ಶಾಲೆಯೊಂದರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಕ್ಯಾಂಪಿನ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರುವ ಜೊತೆಗೆ ಅವರ ಜೀವನವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೆ ಇಂದು ನಡೆಯುತ್ತಿರುವ ಈ ಅರ್ಥಪೂರ್ಣ ಅಭಿನಂದನಾ ಹಾಗೂ ಗುರು ನಮನ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಇಂತಹ ಅತ್ಯುತ್ತಮ ಶಿಕ್ಷಕರನ್ನು ಪಡೆದ ವಿದ್ಯಾರ್ಥಿಗಳಿಂದ ಅಭೂತಪೂರ್ವ ಕಾರ್ಯಕ್ರಮ ಏರ್ಪಟ್ಟಿರುವುದು ಶ್ಲಾಘನೀಯ ಮತ್ತು ಅನುಕರಣೀಯ ಕೆಲಸವಾಗಿದೆ. ಅವರ ಮಾರ್ಗದರ್ಶನದಲ್ಲಿ ಕ್ಯಾಂಪಿನ ಅನೇಕ ವಿದ್ಯಾರ್ಥಿಗಳು ಇಂದು ವೈದ್ಯರು, ಪ್ರಾಂಶುಪಾಲರು, ಇಂಜಿನೀಯರ್, ಸಿಡಿಪಿಒ, ಶಿಕ್ಷಕರು, ಪಿಡಿಒ, ಹಾಗೂ ಇನ್ನಿತರ ಹುದ್ದೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.ಭಾರತ ವಾಯುಸೇನೆಯ ನಿವೃತ್ತ ಅಧಿಕಾರಿ ವಿಜಯಾನಂದ ಅವರು ಮಾತನಾಡುತ್ತಾ,ಶಿಕ್ಷಕ ವೃತ್ತಿ ಕೊಡುವಷ್ಟು ಖುಷಿ ಇನ್ನಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಪ್ರತಿಯೊಬ್ಬರೂ ತಮ್ಮ ಜೀವನ ಪರ್ಯಂತ ತನಗೆ ಅಕ್ಷರ ಕಲಿಸಿದ ಮತ್ತು ಜ್ಞಾನದ ಬೆಳಕನ್ನು ನೀಡಿದ ಶಿಕ್ಷಕರನ್ನೂ ಯಾವತ್ತೂ ಮರೆಯುದಿಲ್ಲ ಎಂದರು.
ಬಿಆರ್‌ಸಿ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ ಅವರು ಮಾತನಾಡುತ್ತಾ,ಶ್ರೀಯುತ ರಾಜೇಂದ್ರ ಅವರು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಜತೆಗೆ ಕ್ಯಾಂಪಿನ ಪ್ರತಿಯೊಬ್ಬರ ಮನದಲ್ಲಿದ್ದಾರೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ರಾಮಣ್ಣ, ಬೀದರ ಸಿಡಿಪಿಒ ಶಾರದಮ್ಮ ಕೆ,ಪಿಡಿಒ ಬಸವರಾಜ ಸೇರಿದಂತೆ ಇತರರು ಮಾತನಾಡಿದರು.
ಆರ್.ಡಿ.ಸಿ.ಸಿ ಬ್ಯಾಂಕ್‌ನ ಪಂಪನಗೌಡ ಬಾದರ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ವಿಪಿಆರ್ ಬಾಲಮದ್ದಿಲೇಟಿರೆಡ್ಡಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಯಚೂರಿನ ನಿವೃತ್ತ ಶಿಕ್ಷಕ ಸಂಗಯ್ಯ ಸೊಪ್ಪಿಮಠ ಮಾತನಾಡಿದರು.
ವೇದಿಕೆಯ ಮೇಲೆ ಎ.ಹುಲುಗಪ್ಪ,ಛತ್ರಪ್ಪ, ರಾಘವರೆಡ್ಡಿ, ಎಸ್.ಶೇಷಗಿರಿ ರಾವು, ಕೆ.ವೆಂಕಟೇಶ್ವರರಾವು,ಹನಮಂತಪ್ಪ ಕಳಮಳ್ಳಿ, ಸೂರ್ಯನಾರಾಯಣ ರಾವು,ಗ್ರಾಮ ಪಂಚಾಯತಿ ಸದಸ್ಯರಾದ ವಿಪಿಆರ್ ರವೀಂದ್ರನಾಥರೆಡ್ಡಿ, ಕೆ.ಕಂಠೆಪ್ಪ, ಶ್ರೀನಿವಾಸ, ಪ್ರತ್ಯುಷಾ, ಚೆನ್ನಬಸಮ್ಮ, ಲಕ್ಷö್ಮಮ್ಮ, ಸಿ.ಆರ್.ಪಿ ಷಣ್ಮುಖಗೌಡ, ಅನುದಾನಿತ ಪ್ರಾ.ಶಾ.ಶಿ ಸಂಘದ ಜಿಲ್ಲಾಧ್ಯಕ್ಷ ಹುಸೇನಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರ ಎಂ.ವಿಠಲಪ್ಪ, ಅನುದಾನಿತ ಪ್ರಾ.ಶಾ.ಶಿ ಸಂಘದ ತಾಲೂಕಾ ಅಧ್ಯಕ್ಷ ಮಲ್ಲನಗೌಡ ಸೇರಿದಂತೆ ಅನೇಕ ಶಿಕ್ಷಕರು, ಕ್ಯಾಂಪಿನ ಹಿರಿಯ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಮುಖ್ಯಗುರು ಎ.ಸತ್ಯನಾರಾಯಣರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹರಿದುಬಂದ ಕಾಣಿಕೆ:ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಶಿಕ್ಷಕ ವೃಂದ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಅವರ ಸ್ನೇಹಿತರು, ಆಪ್ತರು, ಕ್ಯಾಂಪಿನ ನಿವಾಸಿಗಳು ಬೆಳ್ಳಿ-ಬಂಗಾರ ಸೇರಿದಂತೆ ಇನ್ನಿತರ ಕಾಣಿಕೆಗಳನ್ನು ಗುರು-ಕಾಣಿಕೆಯಾಗಿ ನೀಡಿದರು.
ಭವ್ಯ ಮೆರವಣಿಗೆ: ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಕ್ಯಾಂಪಿನ ನಿವಾಸಿಗಳು ಡಿಜೆ ಮೂಲಕ ಮುಖ್ಯಗುರು ರಾಜೇಂದ್ರ ಇವರ ಮೆರವಣಿಗೆಯು ಕ್ಯಾಂಪಿನ ಮುಖ್ಯರಸ್ತೆಯಲ್ಲಿ ಸಂಚರಿಸಿ ಅವರ ಮನೆಯವರೆಗೆ ಬೀಳ್ಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.