ಹನೂರು:ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಬದಿಗಳಲ್ಲಿ ಪುಟ್ ಬಾತ್ ಮತ್ತು ಸಣ್ಣ ವ್ಯಾಪಾರಿಗಳು ವ್ಯಾಪಾರ ಮಾಡಿ ಜೀವನ ಸಾಗಿಸುವ ಅವಕಾಶ ಮಾಡಿಕೊಡಬೇಕೆಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಅವರಿಗೆ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಗೋವಿಂದ ಅವರು ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿವಾಸಿಗಳು ಸುಮಾರು 40 ರಿಂದ 50 ವರ್ಷಗಳಿಂದ ದೇವಸ್ಥಾನದ ಪೂಜಾ ಸಾಮಗ್ರಿಗಳು,ಮಕ್ಕಳ ಆಟ ಸಾಮಾನುಗಳು, ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು,ಕಡಲೆ ಪುರಿ, ಮಿಠಾಯಿ,ವಿಭೂತಿ ಇತ್ಯಾದಿ ವ್ಯಾಪಾರ ಮಾಡಿಕೊಂಡು ಸುಮಾರು 150 ರಿಂದ 200 ಅಂಗಡಿಗಳಿದ್ದು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.
ಮಲೆ ಮಾದೇಶ್ವರ ಪ್ರಾಧಿಕಾರಕ್ಕೆ ನಮ್ಮಿಂದ ಯಾವುದೇ ರೀತಿ ತೊಂದರೆಯಾಗದ ರೀತಿಯಲ್ಲಿ ನಾವುಗಳು ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ಬರುತ್ತಿದ್ದೇವೆ.ದಿನಾಂಕ 03/07 /2023 ರಂದು ಪ್ರಾಧಿಕಾರ ವತಿಯಿಂದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ ಇದರಿಂದಾಗಿ ನಾವುಗಳು ಹಾಗೂ ನಮ್ಮ ಕುಟುಂಬ ಸದಸ್ಯರುಗಳು ಬೀದಿಪಾಲಾಗಿದ್ದೇವೆ ವ್ಯಾಪಾರನ್ನೇ ನಂಬಿಕೊಂಡು ಮಹಿಳಾ ಸ್ವಸಹಾಯ ಸಂಘದಿಂದ ಕಿರು ಹಣಕಾಸು ಸಂಘಗಳಿಂದ ಸಾಲವನ್ನು ಪಡೆದುಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಲಾಗದ ಬಡ್ಡಿಗಳನ್ನು ಭಾವಿಸಲು ಸಾಧ್ಯವಾಗದ ಸ್ಥಿತಿಯಾಗಿದೆ.
ನಮ್ಮ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಇತ್ಯಾದಿ ಆರೋಗ್ಯಕರ ಸಂಬಂಧ ಪೂರೈಸಿಕೊಳ್ಳಲು ತೊಂದರೆ ಆಗುತ್ತಿದೆ ಬೆಳೆದು ನಿಂತ ಮಕ್ಕಳ ಜೀವನೋಪಾಯ ಮಾರ್ಗ ತಿಳಿಯದೆ ಅಸತ್ರರಾಗಲು ಸಂದೇಹವಿಲ್ಲ ಸಾಲಗಾರರ ಒತ್ತಡ ಜೀವನ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸ ಬೆಳೆದು ನಿಂತ ನಿರುದ್ಯೋಗಿ ಮಕ್ಕಳ ಇವೆಲ್ಲ ಜಿಂಜರ್ ಪಟದಲ್ಲಿ ಈ ಅಸಹಾಯಕ ಜೀವನವೇ ನಮಗೆ ಬೇಡವಾದಂತಾಗಿದೆ.
ನಾವುಗಳು ತಳ್ಳುವ ಗಾಡಿ ಹಾಗೂ ಪುಟ್ಬಾತ್ ಮೇಲೆ ತಾಡಪಾಲು ಹಾಸಿ ಅದರ ಮೇಲೆ ನಮ್ಮ ಮಾರಾಟ ಮಾಡುವ ಸಾಮಾನುಗಳನ್ನು ಹಾಕಿಕೊಂಡು ವ್ಯಾಪಾರ ಮಾಡಿ ಜೀವನವನ್ನು ಸಾಗಿಸುತ್ತೇವೆ ಪದೇಪದೇ ನಮ್ಮ ಪುಟ್ ಬಾತ್ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗುತ್ತಾರೆ.
ಸದಾಕಾಲ ವ್ಯಾಪಾರ ಮಾಡಿ ಜೀವನ ಸಾಗಿಸಲು ನಮಗೆ ಮುಕ್ತ ಅವಕಾಶ ಕೊಡಿಸಿ ಸಹಕರಿಸುವಂತೆ ಪ್ರಾರ್ಥಿಸುತ್ತೇವೆ ಇಲ್ಲವಾದಲ್ಲಿ ದೇವಾಲಯದ ಪ್ರಧಾನ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಜಿಲ್ಲಾ ಉಸ್ತುವಾರಿ ವೆಂಕಟೇಶ್,ಶಾಸಕ ಎಂ.ಆರ್ ಮಂಜುನಾಥ್,ಜಿಲ್ಲಾಧಿಕಾರಿ ಶಿಲ್ಪನಾಗ್,ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಗೀತಾ ಹುಡೇದ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಮಗೆ ನ್ಯಾಯ ಸಿಗದಿದ್ದಲ್ಲಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಕಚೇರಿ ಮುಂಭಾಗ ಅಮರಣಾoತಿಕ ಉಪವಾಸವನ್ನು ಮಾಡುತ್ತೇವೆ ಎಂದು ಮಲೆ ಮಹದೇಶ್ವರ ಬೆಟ್ಟದ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಗೋವಿಂದರವರು ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.