ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಮ್ಮೂರಿನ ಆರಾಧ್ಯದೈವ ಅವಧೂತ ಪರಂಪರೆಯ ಹಟ್ಟಿಯ ಲಿಂಗಾವಧೂತರ ಪುಣ್ಯಸ್ಮರಣೆಯ ಜಾತ್ರಾ ಮಹೋತ್ಸವ ಇಂದು!

ಹಟ್ಟಿ ನಗರದ ಮಹಿಮಾ ಪುರುಷ ಶ್ರೀ ಶ್ರೀ ಶ್ರೀ ಸದ್ಗುರು ಲಿಂಗಾವಧೂತ ಶಿವಯೋಗಿಗಳು

“ಮಹಾತ್ಮರನ್ನು ನೆನೆಯುವುದೇ ದೊಡ್ಡ ಘನ ತಪಸ್ಸು ಮಾಡಿದಂತೆ” ಎಂದು ವಚನಕಾರರು ಹೇಳಿರುವಂತೆ, ಯೋಗಿಗಳು,ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಶಿವಯೋಗಿ,ಧ್ಯಾನಯೋಗಿ,ಜಾತ್ಯಾತೀತವಾದಿ ಹೀಗೆ ಹಲವು ನಾಮಾಂಕಿತಗಳಿಂದ ಅರ್ಹನಾದ ಸ್ವಾರ್ಥವಿಲ್ಲದೇ ನಿಸ್ವಾರ್ಥಿಗಳಾಗಿ ಲೋಕಹಿತಕ್ಕಾಗಿ ನಿಸ್ವಾರ್ಥ ಕಾಯಕವನ್ನು ಮಾಡಿ ಸಮಸ್ತ ಜನತೆಗೆ ಶ್ರೇಯಸ್ಸು ದೊರಕಿಸಿಕೊಟ್ಟ ಮಹಾತ್ಮರ ಸಾಲಿನಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ ಶ್ರೀ ಲಿಂಗಾವಧೂತರು ಅಗ್ರಪಂಕ್ತಿಯರು.
ಈ ನಾಡಿದುದ್ದಕ್ಕೂ ಅನೇಕ ಶರಣರು,ಯೋಗಿಗಳು, ಸತ್ಪುರುಷರು ಬಾಳಿ ಬದುಕಿ ಹೋಗಿದ್ದಾರೆ. ಯೋಗಿಗಳು ಇಲ್ಲದಿದ್ದರೂ ಅವರ ತತ್ವ ಹಾಗೂ ಅವರು ನೀಡಿದ ಸಂದೇಶಗಳು ನಮಗೆ ಸದಾ ದಾರಿದೀಪ, ಅಂತಹ ದೀಪಗಳಲ್ಲಿ ಲಿಂಗಾವಧೂತರು ಒಬ್ಬರು. ಇಂದು ಪೂಜ್ಯರ ಜಾತ್ರಾ ಮಹೋತ್ಸವ ಜರುಗುತ್ತಿರುವ ಸಂದರ್ಭದಲ್ಲಿ ಶರಣ ಲಿಂಗಾವಧೂತರನ್ನು ನೆನೆಯುವುದು ಅಗತ್ಯವಾಗಿದೆ.
ಕವಿಗಳು,ಕಲಿಗಳು,ಶರಣರು,ಸಂತರು ಜನಿಸಿದ ಚಿನ್ನದ ನಾಡು ಲಿಂಗಸಗೂರು ತಾಲೂಕು ಧಾರ್ಮಿಕವಾಗಿ ಹಿರಿಮೆ ಪಡೆದು ವೈಭವದಿಂದ ಮೆರೆದ ನೆಲವಿದು. ತಾಲೂಕಿನಲ್ಲಿ ಅನೇಕ ಮಠ,ದೇವಸ್ಥಾನಗಳಿವೆ ಈ ಸಾಲಿನಲ್ಲಿ ಹಟ್ಟಿ ನಗರದ ಲಿಂಗಾವಧೂತರ ಶಾಂತಿಧಾಮವೂ ಒಂದಾಗಿದೆ.
ಲಿಂಗಸಗೂರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಸುಂದರ ಪ್ರಕೃತಿಯ ಹಟ್ಟಿ ನಗರದ ಉತ್ತರಭಾಗದಲ್ಲಿ(ಈಗ ಕ್ಯಾಂಪಿನ ಉತ್ತರಕ್ಕೆ) ಲಿಂಗಾವಧೂತರು ಸುಮಾರು ಶತಕಗಳ ವರ್ಷಗಳ ಹಟ್ಟಿಗೆ ಬಂದು ಒಂದು ಗುಡಿಸಲಿನಲ್ಲಿ ನೆಲೆಸಿ, ಪ್ರತಿನಿತ್ಯವೂ ಶಿವಪೂಜೆ,ಶಿವಧ್ಯಾನ,ಭಜನೆ,ಕೀರ್ತನೆ, ಶಿವನಾಮ ಸ್ಮರಣೆಯಲ್ಲಿ ಕಾಲ ಕಳೆಯುತ್ತಿದ್ದರು. ಕೈಯಲ್ಲಿ ಕಮಂಡಲ ಹಿಡಿದು,ಕೌಪೀನಧಾರಿಯಾಗಿ, ಭೀಕ್ಷಾನ್ನದಿಂದಲೇ ಸಂತುಷ್ಟನ್ನಾಗಿ ತನ್ನ ಅಗಾಧ ಶಿವಪೂಜೆ ಶಕ್ತಿಯಿಂದ ಅನೇಕ ಜನರ ರೋಗ-ರುಜಿನಗಳನ್ನು ನಿವಾರಿಸಿ,ಅವರಲ್ಲಿ ಬರುವ ಭಕ್ತರ ಕಷ್ಟಗಳನ್ನು ಪರಿಹರಿಸಿದ್ದಾರೆ.
ಲಿಂಗಾವಧೂತರು ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯಲ್ಲಿ ಭಿಕ್ಷಾಟನೆ ಮಾಡುತ್ತಿರುವಾಗ ಒಂದು ಮನೆಯ ಮುಂದೆ 10-20 ಜನ ಸೇರಿ,ಆ ಮನೆಯೊಡತಿ ಮೃತಪಟ್ಟಿದ್ದಕ್ಕೆ ದುಃಖಿಸುತ್ತಿದ್ದರು. ಶ್ರೀಗಳು ಒಳಗೆ ಹೋಗಿ ನೋಡಿದಾಗ,ಮೃತ ಮಹಿಳೆಗೆ ಎರಡು ಮಕ್ಕಳಿವೆ.ಇನ್ನೂ ಚಿಕ್ಕವಯಸ್ಸು ಗಂಡ ಹೆಂಡತಿಯ ಶವದ ಮುಂದೆ ಕುಳಿತು,ತನ್ನ ಎರಡು ಮಕ್ಕಳನ್ನು ಮುಂದೆ ಹಾಕಿಕೊಂಡು ಪರಿಪರಿಯಿಂದ ಪ್ರಲಾಪಿಸುತ್ತಿರುವುದನ್ನು ಕಂಡು ಶರಣರು ಅವನಿಗೆ, ನಿನ್ನ ಹೆಂಡತಿ ಹೋದದ್ದಕ್ಕಾಗಿ ನಿನಗೆ ಬಹಳ ದುಃಖವಾಗಿದೆ ಒಂದು ವೇಳೆ ಅವಳು ಬದುಕಿದರೆ ಪ್ರಪಂಚದಲ್ಲಿ ನಿನಗೆ ದುಃಖವೇ ಇಲ್ಲವೇ? ಎಂದು ಕೇಳಿದಾಗ,ಆಗ ಶರಣರ ಪಾದಗಳ ಮೇಲೆ ಬಿದ್ದು ತನ್ನ ಹೆಂಡತಿ ಬದುಕಿದರೆ ನನ್ನ ಸಂಸಾರ ಸುಖಮಯವಾಗುತ್ತದೆ.ಈ ಚಿಕ್ಕ ಮಕ್ಕಳನ್ನು ನಾನು ಜೋಪಾನ ಮಾಡಲಾರನೆಂದು ಶರಣರಿಗೆ ಹೇಳಿದ ಆಗ ಶ್ರೀಗಳವರು ತಮ್ಮ ಕಮಂಡಲದಲ್ಲಿರುವ ತೀರ್ಥವನ್ನು ಶವಕ್ಕೆ ಚುಮುಕಿಸಿದಾಗ ನಿದ್ದೆಯಿಂದ ಎಚ್ಚೆತ್ತವಳಂತೆ ಆ ತಾಯಿ ಕಣ್ತೆರೆದು ನೋಡಿದಳಂತೆ.
ಒಮ್ಮೆ ಸದ್ಗುರುಗಳು ರೋಡಲಬಂಡಾದಿಂದ ಹಟ್ಟಿಗೆ ಬರುವಾಗ,ನಿಜಗುಣ ಶಿವಯೋಗಿಗಳ “ಕೈವಲ್ಯ ಪದ್ಧತಿ ಗ್ರಂಥವನ್ನು ತರುತ್ತಿದ್ದರು ಆಗ ಸ್ವಲ್ಪ ಹೊತ್ತಿನಲ್ಲಿ ಭಾರಿ ಮಳೆ ಸುರಿಯತೊಡಗಿತು ಸುಮಾರು 2-3 ಗಂಟೆಗಳವರೆಗೆ ಎಡೆಬಿಡದೇ ಮಳೆ ಸುರಿದರೂ ಶರಣರು ಕೈಯಲ್ಲಿ ಹಿಡಿದಿದ್ದ ಕೈವಲ್ಯ ಗ್ರಂಥಕ್ಕೆ ಒಂದು ಹನಿ ನೀರೂ ಸಹ ಹತ್ತಿರಲಿಲ್ಲಂತೆ ಆಗ ಅದನ್ನು ನೋಡಿದ ಭಕ್ತಾಧಿಗಳು,ಮಳೆಯಲ್ಲಿ ಬಂದರೂ ಕೈವಲ್ಯ ಹೊತ್ತಗೆ ಮಾತ್ರ ತೊಯ್ಯದಿರುವುದಕ್ಕೆ, ತಾವು ಸಾಕ್ಷಾತ್ ಪರಶಿವನ ಅವತಾರವೆಂದು ಸಿದ್ಧಿಪುರುಷರನ್ನು ಭಜಿಸಿದರು.
ಸದ್ಗುರು ಲಿಂಗಾವಧೂತರ ಪರಮ ಭಕ್ತನೋರ್ವ ಬ್ರಿಟಿಷ್ ಅಧಿಕಾರಿಯಲ್ಲಿ ವಾಹನ ಚಾಲಕನಾಗಿದ್ದ ಶರಣರು ಅವನಲ್ಲಿನ ಸೇವೆ ಸ್ವೀಕರಿಸುತ್ತಿದ್ದರು ಚಾಲಕನಿಗೆ ಸ್ವಲ್ಪ ತಡವಾದುದರಿಂದ ಸಿಟ್ಟಿಗೆದ್ದ ಅಧಿಕಾರಿ,ತರಾಟೆಗೆ ತೆಗೆದುಕೊಂಡಾಗ ಅವನು,ಮನೆಗೆ ಲಿಂಗಾವಧೂತ ಶಿವಯೋಗಿಗಳು ಬಂದಿದ್ದರಿಂದ ತಡವಾಯಿತು ಎಂದು ಕೇಳಿಕೊಂಡ ಪೂಜೆ ಮಾಡುವುದರಿಂದೇನು ಲಾಭ?ಅವನೇನ್ ದೇವರನ್ನು ನೋಡಿದ್ದಾನೆಯೇ?ಅವನನ್ನು ಕರೆದುಕೊಂಡು ಬಾ ಎಂದೇಳಿದ ಅಧಿಕಾರಿ ಸಿಟ್ಟಿನಿಂದ ತನ್ನಲ್ಲಿರುವ ಆಳುಗಳನ್ನು ಕರೆದು ಶರಣರನ್ನು ದರದರನೆ ಎಳೆತಂದು ಲೋಹದಿಂದ ನಿರ್ಮಿಸಿದ ಒಂದು ತಗ್ಗಿನಲ್ಲಿ ದೂಡಿ, ಮೇಲೆ ತಳಮಳ ಕುದಿಯುತ್ತಿರುವ ಎರಕವನ್ನು ಅವರ ಮೇಲೆ ಹೊಯ್ದು,ಆ ಗುಂಡಿಯ ಮೇಲೆ ದೊಡ್ಡ ಕಲ್ಲುಬಂಡೆ ಎಳೆದು ಮುಚ್ಚಿದ ನಿನ್ನ ಸ್ವಾಮಿಯಲ್ಲಿ ಅಂತಹ ಶಕ್ತಿಯಿದ್ದರೆ,ಈಗ ಹೊರಗೆ ಬರಲಿ ಎಂದು ಚಾಲಕನಿಗೆ ಹೇಳಿದ ಶರಣರಿಗೆ ಬಂದ ಈ ಪರಿಸ್ಥಿತಿ ನೆನೆದು ಭಕ್ತ ಗೋಳಾಡುತ್ತಾ ಅಧಿಕಾರಿಯನ್ನು ವಾಹನದಲ್ಲಿ ಮನೆಗೆ ಬಿಡಲು ಹೋಗುತ್ತಿದ್ದ ಇವನ‌ ಗಾಡಿಯ ಮುಂದೆ ಲಿಂಗಾವಧೂತರು ಹೋಗುತ್ತಿರುವುದು ಕಂಡಿತು.ಭಕ್ತ ಸಂತೋಷಗೊಂಡು ಗಾಡಿ ನಿಲ್ಲಿಸಿ ಶರಣರ ಪಾದಪೂಜೆ ಮಾಡಿ ಉದ್ಧರಿಸಬೇಕೆಂದು ಬೇಡುತ್ತಾನೆ ಆಗ ಶರಣರು ಆಶೀರ್ವಾದ ಮಾಡಿ ಪುತ್ರಸಂತಾನ ಭಾಗ್ಯ ನೀಡಿದರಂತೆ.
ಯೋಗಿ ಲಿಂಗಾವಧೂತರು ಶಾಲಿವಾಹನ ಶಕೆ 1886ರಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಜನಿಸಿದರು.(ಕೆಲವರು ಬಾಂಬೆಯಿಂದ ಬಂದಿದ್ದಾರೆ ಶರಣರು ಹಟ್ಟಿಗೆ ಅವರ ಮೂಲಸ್ಥಳ ಗೊತ್ತಿಲ್ಲ ಎನ್ನುತ್ತಾರೆ) ತಂದೆ ಗುರುಲಿಂಗಯ್ಯ ಮತ್ತು ತಾಯಿ ಮಹಾದೇವಮ್ಮರ ಪುಣ್ಯ ಗರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಜನ್ಮವೆತ್ತಿ ಬಂದವರು ಶಿವಯೋಗಿಗಳು ಆ ನಂತರ ಮಹಾರಾಷ್ಟ್ರದಲ್ಲಿ ವಾಸವಾಗಿದ್ದರು ತದನಂತರ ಹಟ್ಟಿ ನಗರಕ್ಕೆ ಬಂದು ಗದ್ದೆಪ್ಪ ಉಪ್ಪಾರ,ಅಮರಸಿಂಗ್ ಎಂಬ ಶಿಷ್ಯಂದಿರ ಹತ್ತಿರ ಇದ್ದು,ಅನೇಕ ಪವಾಡಗಳನ್ನು ಮಾಡಿ,ಶರಣರು ಶಾಲಿವಾಹನ ಶಕೆ 1930ರಲ್ಲಿ ಲಿಂಗೈಕ್ಯರಾದರು. ಅವರು ಬದುಕಿದ್ದು ಕೇವಲ 34 ವರ್ಷ ಈ ಅಲ್ಪ ಆಯುಷ್ಯದಲ್ಲಿಯೇ ಬೆರಗಾಗುವ ರೀತಿಯಲ್ಲಿ ಸಾಧನೆ ಮಾಡಿ ತೋರಿಸಿ ಲೇಸೆನಿಸಿಕೊಂಡು ಬದುಕಿ ಪವಿತ್ರ ಜೀವನ ಸಾಗಿಸಿದ ಶರಣರು ಇಂದು ನಮ್ಮೊಂದಿಗೆ ಇರದಿದ್ದರೂ ಅವರ ಬದುಕು,ಸಂದೇಶ,ನಡೆ-ನುಡಿ ನಮ್ಮೊಂದಿಗಿದೆ.
ಇಂದಿಗೂ ಇವರ ಶಿಶುಮಕ್ಕಳಾದ ದಿ.ಗೆದ್ದೆಪ್ಪ ನಾಯಿಕೊಡಿಯವರ ಮನೆಯಿಂದ ಪಲ್ಲಕ್ಕಿ ಉತ್ಸವ ಮೊದಲಿ‌ನಿಂದ ನಡೆದು ಬರುತ್ತದೆ ಗ್ರಾಮೀಣ ಭಕ್ತರ ಬಾಯಲ್ಲಿ,ಲಿಂಗಯ್ಯ ತಾತನೆಂದೇ ಚಿರಪರಿಚಿತನಾದುದ್ದರಿಂದ ಇಲ್ಲಿ ಕೆಲವರಿಗೆ ಲಿಂಗಯ್ಯ, ಲಿಂಗಪ್ಪ,ಲಿಂಗಣ್ಣ,ಲಿಂಗನಗೌಡ ಎಂದು ನಾಮಕರಣ ಮಾಡಲಾಗುತ್ತದೆ ಇವರು ಕುಳಿತ ಸ್ಥಳಗಳನ್ನು ಗದ್ದುಗೆಯನ್ನಾಗಿ ನಿರ್ಮಿಸಿ ಪೂಜೆಯನ್ನು ಇಂದಿಗೂ ಹಟ್ಟಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಯಲಗಟ್ಟಾ, ಗಾಣದಾಳ,ಆನ್ವರಿ ಇನ್ನಿತರ ಹಳ್ಳಿಗಳಲ್ಲಿ ಮಾಡುತ್ತಿದ್ದಾರೆ ಕೊನೆಗೆ ಶರಣರು ಸರ್ವರಿಗೂ ಶಾಂತಿ ದೊರೆಯಲಿ,ಲೋಕ ಕಲ್ಯಾಣವಾಗಲಿ ಎಂಬ ಪರಮ ಉದ್ದೇಶದಿಂದ ಪೂಜೆಯಲ್ಲಿ ತಲ್ಲೀನರಾಗಿ ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಶಿವನಲ್ಲಿ ಬೆರೆತರು.ಆಗ ಹಟ್ಟಿ ಚಿನ್ನದ ಗಣಿ ಉತ್ತರ ಭಾಗದಲ್ಲಿ ಅವರ ಗದ್ದುಗೆಯನ್ನು ಭಕ್ತರು ನಿರ್ಮಿಸಿದ್ದಾರೆ ಸಕಲರಿಗೂ ಲೇಸನ್ನೇ ಬಯಸಿದ ಶಿವಯೋಗಿಗಳ ಬದುಕು ನಿಜಕ್ಕೂ ದಿವ್ಯವೂ ಹಾಗೂ ಭವ್ಯವೂ ಆಗಿತ್ತು.
ಇಂದಿಗೂ ಇವರ ಗದ್ದುಗೆಗೆ ನಿತ್ಯಪೂಜೆ ನಡೆಯುತ್ತದೆ. ಶ್ರಾವಣಮಾಸ (ನಾಗರ ಅಮವಾಸ್ಯೆ) (ಲಿಂಗಾವಧೂತರ ಪುಣ್ಯಾರಾಧನೆ ಸಲುವಾಗಿ ಜಾತ್ರೆ) ಮತ್ತು ಫಾಲ್ಗುಣ ಮಾಸದಲ್ಲಿ (ಶಿವರಾತ್ರಿ ಅಮವಾಸ್ಯೆ) ಪ್ರತಿವರ್ಷ ಜಾತ್ರೆ,ರಥೋತ್ಸವ ಹಾಗೂ ಸಾಮೂಹಿಕ ವಿವಾಹಗಳು ನಡೆಯುತ್ತವೆ.
ಇವರು ಸಿದ್ಧಿಪುರುಷರು ತಮರಸ ವಿದ್ಯೆಯಿಂದ ಬಂಗಾರವನ್ನು ತಯಾರಿ ಮಾಡುವ ವಿದ್ಯೆಯಿತ್ತು ಅದಕ್ಕೆ ಆಗಿನ ಬ್ರಿಟಿಷರು ಇವರ ರಸವಿದ್ಯೆಯ ಸೂತ್ರಗಳನ್ನು ಪಡೆಯಲು ಇವರ ಭಕ್ತರ ಮೂಲಕವೇ ಅಪಹರಿಸಿ ಅನೇಕ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಬೇಸತ್ತು ಆ ನಂತರ ಕ್ಷಮೆಕೋರಿ ಇವರು ಇರುವ ಹಟ್ಟಿಗೆ ಬಂದು ಬಿಟ್ಟಿದ್ದರು ಇವರು ಅದ್ವೈತ್ಯ ಸಿದ್ಧಾಂತ ಪ್ರತಿಪಾದನೆ ಮಾಡಿದರು.
ಸುಮಾರು 1982-84 ರಲ್ಲಿ ಪಟ್ಟಣದ ಹಿರಿಯರಾದ ಹಾಗೂ ಕಮಿಟಿಯ ಮುಖಂಡರಾದ ಈಶ್ವರಪ್ಪ ಆನ್ವರಿ, ದೇವೇಂದ್ರಪ್ಪ ಸರ್ಜಾಪೂರ,ಗುಂಡಪ್ಪಗೌಡ ಪೋಲಿಸ್ ಪಾಟೀಲ್,ದಿ.ಭೀಮಶಪ್ಪ ಹಾಗೂ ಯಂಕನಗೌಡ ಆನ್ವರಿ ಸೇರಿ ಚಂದಾ ಹಣವನ್ನು ಸೇರಿಸಿ ಹಾಗೂ ಹಟ್ಟಿ ಚಿನ್ನದ ಕಂಪನಿಯ ಸಹಾಯದಿಂದ ರಥೋತ್ಸವವನ್ನು ಸಿದ್ಧಪಡಿಸಲಾಯಿತು ಅಂದಿನ ಕಂಪನಿಯ ಜಾಗೃತ ಅಧಿಕಾರಿಗಳಾದ ಲಾಲಗೌಡರ ಹಾಗೂ ಊರಿನ ನಾಗರೀಕರೂ ಸೇರಿ 11 ಲಕ್ಷ ವೆಚ್ಚದಲ್ಲಿ ಹೊಸ ಮಂದಿರವನ್ನು ಇಸವಿ 2000ರಲ್ಲಿ ಪಂಚಪೀಠ ಸ್ವಾಮೀಜಿಗಳಾದ (1008 ಜಗದ್ಗುರುಗಳು) ಸಾನಿಧ್ಯದಲ್ಲಿ ವೀರ ಸೋಮೇಶ್ವರ ನೂತನ ಲಿಂಗಾವಧೂತರ ದೇವಸ್ಥಾನ ಉದ್ಘಾಟಿಸಿದರು.
ಲಿಂಗಾವಧೂತರು ಹಟ್ಟಿಗ್ರಾಮವು‌ ಛೋಟಾಬಾಂಬೆ, ಪಟ್ಟಣ ಆಗುತ್ತದೆ ಹಾಗೂ ಈ ಗ್ರಾಮಕ್ಕೆ ರೈಲು ಬರುತ್ತದೆ ನಾನು ಕೊನೆಯ ಬೋಗಿಯಲ್ಲಿ ಇರುತ್ತೇನೆ ಗುರುತಿಸಿರಿ ಎಂದು ಕೊನೆಯ ಘಳಿಗೆಯಲ್ಲಿ ಹೇಳಿದ್ದಾರಂತೆ ಈ ಜಾತ್ರಾಮಹೋತ್ಸವಕ್ಕೆ ಕಮೀಟಿಯ ಕೋರಿಕೆಯ ಮೇರೆಗೆ ಹಟ್ಟಿ ಚಿನ್ನದ ಕಂಪನಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ ಈ ದೇವಸ್ಥಾನವು ಗಟ್ಟಿ ಬಂಗಾರದ ಮೇಲಿದೆ ಎನ್ನುವುದು ಬಹುತೇಕ ಹಿರಿಯರ ಅನಿಸಿಕೆ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಅದುವೇ ಯೋಗಿ ಲಿಂಗಾವಧೂತ ಸಾಧು ಮಹಾರಾಜರಿಗೆ ಸಲ್ಲಿಸುವ ನಿಜವಾದ ಗೌರವ.
ಸಂಪಾದನೆ-ಶಿವರಾಜ್ ಮೋತಿ,
ಯುವ ಬರಹಗಾರರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ