ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ದಿನಾಂಕ 22/7/2023 ರಂದು ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ತಹಸಿಲ್ದಾರರಾದ ನಾಗಯ್ಯ ಹಿರೇಮಠ ಇವರು ಮಿನಿ ವಿಧಾನಸೌಧದ ಸುತ್ತಲೂ ಸಂಪೂರ್ಣವಾಗಿ ವೀಕ್ಷಿಸಿದರು ಇದರೊಂದಿಗೆ ಸಾರ್ವಜನಿಕರು ಮಿನಿ ವಿಧಾನಸೌಧಕ್ಕೆ ಬರುವುದು ಸಹಜ ಆದರೆ ಬಂದ ನಂತರ ತಮ್ಮಲ್ಲಿರುವ ಕ್ಯಾರಿಬ್ಯಾಗ್ ಆಗಿರಬಹುದು ಇನ್ನಿತರ ಯಾವುದೇ ವಸ್ತುಗಳನ್ನು ಎಲ್ಲಿ ಬೇಕಾದರೂ ಅವುಗಳನ್ನು ಎಸೆಯಬಾರದು ಡಸ್ಟ್ ಬಿನ್ ಗಳಲ್ಲಿ ಹಾಕಬೇಕು ಮತ್ತು ವಾಹನ ಮಾಲೀಕರು ಸಹ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು ಇದಕ್ಕೆಲ್ಲ ಸಾರ್ವಜನಿಕರ ಸಹಕಾರ ಅವಶ್ಯಕತೆ ಇದೆ ಯಾವುದೇ ಕಾರ್ಯಾಲಯಕ್ಕೆ ಹೋದರೆ ಅಲ್ಲಿನ ನಿಯಮಗಳ ಅನುಸಾರ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು. ಇಂದು ಮಿನಿ ವಿಧಾನಸೌಧವು ಸ್ವಚ್ಛ ಕನ್ನಡಿಯಂತೆ ಕಂಗೊಳಿಸುತ್ತದೆ ತಹಸಿಲ್ದಾರರಾದ ನಾಗಯ್ಯ ಹಿರೇಮಠ ಇವರು ಸ್ವತಹ ಮುಂದೆ ನಿಂತು ಪ್ರತಿಯೊಂದು ಭಾಗವನ್ನು ಸ್ವಚ್ಛಗೊಳಿಸಿದ್ದಾರೆ. ಆದ್ದರಿಂದ ಸಾರ್ವಜನಿಕ ಪರವಾಗಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಇವರಿಗೆ ಧನ್ಯವಾದಗಳು ಅರ್ಪಿಸೋಣ.
ವರದಿ-ಅರವಿಂದ್ ಕಾಂಬಳೆ ಇಂಡಿ