ಬೀದರ್:ನಗರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಬೀದರ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಯಿತು ಜಗತ್ತಿನ ಅತಿದೊಡ್ಡ ಸಂಸ್ಥೆಯಾದ ರೋಟರಿ ಕ್ಲಬ್ ಸೇವೆಯೇ ಮೊದಲ ಮತ್ತು ಕೊನೆಯ ಧ್ಯೇಯವಾಗಿಟ್ಟುಕೊಂಡು ಶತಮಾನ ಪೂರೈಸಿದೆ ಮನುಕುಲದ ಏಳಿಗೆಗಾಗಿ ಹುಟ್ಟಿದ ಈ ಸಂಸ್ಥೆ ಶಿಕ್ಷಣ, ಆರೋಗ್ಯ,ಪರಿಸರ, ಮಹಿಳಾ ಸಬಲೀಕರಣ,ಮಕ್ಕಳ ಅಭಿವೃದ್ಧಿ, ನಾಡ-ನುಡಿ,ಸೇರಿದಂತೆ ನೂರಾರು ಜನ ಹಿತಕಾರ್ಯ ಮಾಡುತ್ತಿದ್ದು ರೋಟರಿ ಕ್ಲಬ್ ನ ಮೂಲ ಆಶಯದಂತೆ ಶಿಕ್ಷಕರಿಗೆ ಗೌರವ ಸನ್ಮಾನ,ಪ್ರತಿಭಾವಂತ ವಿದ್ಯರ್ಥಿಗಳಿಗೆ ಪುರಸ್ಕಾರ,ನಿರ್ಗತಿಕರಿಗೆ ಹೊಲಿಗೆ ಯಂತ್ರ,ಪ್ರೋತ್ಸಾಹಧನ,ರಕ್ತದಾನ ಶಿಬಿರ,ಶೌಚಾಲಯ ನಿರ್ಮಾಣ,ನೆರೆ ಪರಿಹಾರ,ಕೊವಿಡ್ ಒಳಗಾದವರಿಗೆ ಆಕ್ಸಿಜನ್ ಸಾಂದ್ರಕ ಪೂರೈಕೆ,ಬಡವರಿಗೆ ಆಹಾರ ಕಿಟ್ ವಿತರಣೆ ಹೀಗೆ ಹಲವಾರು ಸಮಾಜಮುಖಿ ಕಾರ್ಯ ಮಾಡುತಿದ್ದು,ದಿನಾಂಕ 22ನೇ ಜುಲೈ 2023 ರಂದು ಗುರುದ್ವಾರ ಹತ್ತಿರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಪ್ತಗಿರಿ ಪಿ.ಯು.ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಸಾಗರ್ ಪಡಸಲೆ,ಅವರಿಗೂ ಆರ್. ಆರ್.ಕೆ. ಪಿ.ಯು. ಕಾಲೇಜಿನ ಉಪನ್ಯಾಸಕರಾದ ಬಂಡೆಪ್ಪ ಬಿರಾದರ,ಶ್ರೀ ದತ್ತಾಗಿರಿ ಮಹಾರಾಜ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ರೂಪಾ ಜೋಷಿ, ಸ್ವಾಮಿ ನರೇಂದ್ರ ಪಿ.ಯು.ಕಾಲೇಜಿನ ಉಪನ್ಯಾಸಕರಾದ ಸುಭಾಷ ಮಾಹಾಗಾಂವಕರ್, ಪನ್ನಾಲಾಲ ಹೀರಾಲಾಲ ಪಿ.ಯು. ಕಾಲೇಜಿನ ಉಪನ್ಯಾಸಕರಾದ ಹೊಮಾಪತಿ,ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಚನ್ನಬಸವ ಹೆಡೆ ಮತ್ತು ಇತರ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಶುಪಾಲರಿಗೆ ಬೀದರ್ ನ ದಕ್ಷೀಣ ವಿಧಾನಸಭಾ ಶಾಸಕರಾದ ಡಾ|| ಶೈಲೇಂದ್ರ ಬೆಲ್ದಾಳೆ ಯವರಿಂದ ‘ಜ್ಞಾನ ರತ್ನ’ಪ್ರಶಸ್ತಿ ಪತ್ರದ ಜೊತೆಗೆ 12ನೇ ಶತಮಾನದ ಬಸವಕಲ್ಯಾಣದಲ್ಲಿ ಸ್ಥಾಪಿಸಲ್ಪಟ್ಟ ಅನುಭವ ಮಂಟಪದ ಚಿತ್ರವನ್ನು ನಿಡಿ ಗೌರವ ಸನ್ಮಾನ ಮಾಡಲಾಯಿತು ಮತ್ತು
ಅತಿ ಹೆಚ್ಚು ಅಂಕ ಪಡೆದು ಮನೆಗೆ ಮತ್ತು ಸಪ್ತಗಿರಿ ವಿಜ್ಞಾನ ಪಿ.ಯು.ಕಾಲೇಜಿಗೆ ಕೀರ್ತಿತಂದಿರುವ ಸಂಗಮೇಶ/ರಾಜಕುಮಾರ,ರಕ್ಷಿತಾ ಕಾಳಗಿ/ಗಣಪತಿ ಕಾಳಗಿ,ಶ್ರೀ ದತ್ತಗಿರಿ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯಾದ ಸಂಧ್ಯಾರಾಣಿ,ಶ್ರೀ ಸ್ವಾಮಿ ನರೇಂದ್ರ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯಾದ ಸುವರ್ತಾ ರಾಜಕುಮಾರ,ವಿದ್ಯಾಶ್ರೀ ಸಂಸ್ಥೆಯ ವಿದ್ಯಾರ್ಥಿನಿಯಾದ ನಾಗೇಶ್ವರಿ ಆರ್ ಮತ್ತು ಇತರ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸುರೇಶ ಚನ್ನಶೆಟ್ಟಿ ಅಧ್ಯಕ್ಷರು ಜೀಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಮತ್ತು ಪದಾಧಿಕಾರಿಗಳು,ರೋಟರಿ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇನ್ನರ್ ವ್ಹಿಲ್ ಕ್ಲಬ್ ಬೀದರ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ವರದಿ-ಸಾಗರ್ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.