ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂಡಗೋಡಕ್ಕೆ ಕಳಂಕ ತಂದ ಜೇನುಗೂಡಿನ ಕರ್ಮಕಾಂಡ

ಮುಂಡಗೋಡ:ಮುಂಡಗೋಡ ಜನ ಶಾಂತಿ ಪ್ರಿಯರು ಹಾಗೂ ಸಮಚಿತ್ತ ಉಳ್ಳವರು,ಅದೊಂದು ಸಮಾಜ ಉದ್ದಾರ ಮಾಡುತ್ತೇವೆ ಎಂದು ಸಹೃದಯಿಗಳು ಕಟ್ಟಿಕೊಂಡ ಜೇನುಗೂಡು,ಅ ಜೇನು ಗೂಡಿಗೆ ಕಲ್ಲೆಸೆದು ದೇವರು ಎಂದೆನಿಸಿಕೊಂಡು ಅದರಲ್ಲಿ ಸೇರಿಕೊಂಡ ಒಬ್ಬ ಮಹಾಶಯ! ಅವನು ಮಾಡಿದ ಹಲ್ಕಾ ಕೆಲಸಗಳು ಒಂದೆರಡಲ್ಲ,ಇದು ನಿಜಕ್ಕೂ ಆ ಸಹೃದಯಿಗಳು ತಲೆತಗ್ಗಿಸುವ ವಿಷಯ.ನಿಜಕ್ಕೂ ಈ ಕರ್ಮಕಾಂಡದಲ್ಲಿ ಆ ಸಹೃದಯಿಗಳ ಪಾತ್ರವೇನು ಇಲ್ಲ, ಆದರೆ ಆ ಮಹಾಶಯನನ್ನು ದೇವರೆಂದು ಕೊಂಡು ಆ ಸಹೃದಯಿ ಜನ,ಆ ಜೇನುಗೂಡಿನ ಸಂಪೂರ್ಣ ಜವಾಬ್ದಾರಿಯನ್ನು ಆ ಮಹಾಶಯನ ಕೈಗೆ ನೀಡಿದ್ದರು, ಆದರೆ ಆ ಮಹಾಶಯ ದೇವರಲ್ಲ,ಪಿಶಾಚಿ ಎಂಬುದು ಇನ್ನೂ ಆ ಸಹೃದಯಿ ಜನಕ್ಕೆ ಗೊತ್ತೇ ಇಲ್ಲ ಮಹಾಶಯ ಎನಿಸಿಕೊಂಡ ವ್ಯಕ್ತಿ ಈಗಿರುವ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾನೆ,ಜೇನುಗೂಡಿನ ಮೂಲಕ ಸಮಾಜಕ್ಕೆ ಒಳ್ಳೆ ಸೇವೆ ನೀಡುತ್ತಾನೆ,ನಮಗೂ ಅವನಿಂದ ಒಳ್ಳೆಯದಾಗುತ್ತದೆ ಎಂದು ತಿಳಿದುಕೊಂಡು ಆ ಜೇನುಗೂಡಿಗೆ ಹಾರಿ ಬಂದ ಕೆಲ ಜೇನು ನೊಣಗಳು ಆ ಮಹಾಶಯನ ನೀಚ ಬುದ್ದಿ ತಿಳಿದು ತಾವು ಹುಟ್ಟಿ ಬೆಳೆದಿದ್ದ ಮೂಲ ಗೂಡಿಗೆ ಹಾರಿ ಹೋಗಿವೆ. ಜೇನುಗೂಡಿನ ಕೆಲ ಜೇನು ನೊಣಗಳನ್ನು ತನ್ನ ಸ್ವೇಚ್ಛೆಗೆ ತಕ್ಕಂತೆ ತನ್ನ ಕಾಮದಾಟಕ್ಕೆ ಬಳಸಿಕೊಂಡ ಮಹಾಶಯ,ಆ ಜೇನು ನೊಣಗಳ ಹಾಗೂ ಅವುಗಳ ಪೂರ್ವಿಕರ ಬೇಕು ಬೇಡಿಕೆಗಳನ್ನೂ ಈಡೇರಿಸಿ, ಸಮಾಜದಲ್ಲಿ ತಾನೊಂದು ಗೋ ಮುಖ ಧರಿಸಿದ ವ್ಯಾಘ್ರ ಎಂಬ ಸಂಗತಿಯನ್ನು ಎಲ್ಲಿಯೂ ಆಚೆ ಬರದೆ ನೋಡಿಕೊಂಡು ಸಮಾಜದ ಕಣ್ಣಿಗೆ ಮಣ್ಣೆರೆಚುತ್ತ ಮೆರೆಯುತ್ತಿರುವ ಸಂಗತಿ ಅವನ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ ಆ ಜೇನುಗೂಡಿನ ಸಂಗತಿ ಹೊರ ಬಿದ್ದಿದ್ದೆ ರೋಚಕ,ಇತ್ತೀಚಿಗೆ ನೊಂದ ಹಾಗೂ ಗೂಡಿನಿಂದ ಹೊರ ಬಿದ್ದ ಜೇನು ನೊಣಗಳನ್ನು ಸಂಪರ್ಕಿಸಿದಾಗ ಅವುಗಳು ಜೇನುಗೂಡಿನಲ್ಲಿ ಮಹಾಶಯನಿಂದ ಅನುಭವಿಸಿದ ಮಾನಸಿಕ ವೇದನೆಗಳು ಹಾಗೂ ದೌರ್ಜನ್ಯಗಳನ್ನು ಮನಸಿನಲ್ಲಿ ಅದುಮಿಕೊಂಡು ಇದ್ದ ಎಲ್ಲಾ ಸಂಗತಿಗಳು ಒಮ್ಮೆಲೆ ಆ ಜೇನು ನೊಣಗಳಿಂದ ಹೊರಬಿದ್ದವು ಆ ಮಹಾಶಯನ ಕರ್ಮ ಕಾಂಡಗಳು ಗೊತ್ತಿದ್ದರೂ ಸುಮ್ಮನಿರುವ ಜೇನುಗೂಡಿನ ಅಂಗರಕ್ಷಕ,ಇದರಲ್ಲಿ ಆತನ ಪಾತ್ರ ಇದರಲ್ಲಿ ಇದೆಯೋ ಇಲ್ಲವೋ ಎಂಬುದು ಇನ್ನೂ ಆ ಜೇನು ನೊಣ ಗಳು ಹಾಗೂ ಆ ಸಹೃದಯಿ ಜನಕ್ಕಂತೂ ಗೊತ್ತಿಲ್ಲ,ಒಟ್ಟಿನಲ್ಲಿ ಜೇನುಗೂಡಿನ ಸಹೃದಯಿ ಜನರ ಮೂಲಕ ಸಮಾಜದಲ್ಲಿ ಒಳ್ಳೊಳ್ಳೆ ಕಾರ್ಯಗಳು ಆಗುತ್ತಿದೆ,ಆದರೆ ಆ ಮಹಾಶಯ ಕೆಲ ಜೇನು ನೊಣಗಳನ್ನು ತನ್ನ ತೀಟೆ ತೀರಿಸಲು ಬಳಸಿಕೊಳ್ಳುತ್ತಿರುವುದು ಮಾತ್ರ ದುರಂತ.ಇದೆಲ್ಲಾ ಜೇನುಗೂಡಿನ ಕೆಲ ಸದಸ್ಯರಿಗೂ ಗೊತ್ತಿರುವ ವಿಚಾರ ಆದರೆ ಅದನ್ನೇ ದುರ್ಬಳಕೆ ಮಾಡಿಕೊಂಡು ಆ ಮಹಾಶಯನ ಮೂಲಕ ತಮ್ಮ ಬೇಕು,ಬೇಡಿಕೆ ಗಳೆಲ್ಲವನ್ನು ಈಡೇರಿಸಿಕೊಳ್ಳುವ ಮೂಲಕ ಆ ಸದಸ್ಯರು ಕೂಡಾ ತಮ್ಮ ಧ್ಯೇಯ ಸಾಧಿಸಿಕೊಳ್ಳುತ್ತಿದ್ದಾರೆ ಜೇನುಗೂಡಿನ ಮಹಾಶಯ ಅವನ ಅಕ್ರಮಗಳು ಹಾಗೂ ಅಲ್ಲಿನ ಹುಳುಕುಗಳು ಬಗ್ಗೆ ಸಂಪೂರ್ಣ ಸಾಕ್ಷಿ ಸಮೇತ ಸಮಾಜದ ಮುಂದೆ ಇಡಬೇಕೆಂದರು ನಮ್ಮ ಹಾಗೂ ನಮ್ಮಲ್ಲಿನ ಈಗಿನ ವ್ಯವಸ್ಥೆ ಅದೆಲ್ಲವನ್ನೂ ಕ್ಷಣಾರ್ಧದಲ್ಲಿ ಮುಚ್ಚಿ ಹಾಕುತ್ತದೆ ಎಂಬ ಆತಂಕವೂ ಜೇನುಗೂಡು ಬಿಟ್ಟ ಜೇನು ನೋಣಗಳಿಗಿವೆ ಆ ಕಾರಣಕ್ಕಾಗಿಯೇ ವ್ಯವಸ್ಥೆ ಮುಂದೆ ಬರಲು ಅವು ಅಂಜುತ್ತಿವೆ ಇದೆಲ್ಲದರ ಮಧ್ಯೆಯೇ ಆ ಮಹಾಶಯನಿಗೆ ದೇವದೂತನೊಬ್ಬನ ಕೃಪಾಕಟಾಕ್ಷ ಇರುವುದು ತಿಳಿದು ನಿಜಕ್ಕೂ ಖೇದ್ಯವಾಯಿತು ಒಟ್ಟಿನಲ್ಲಿ ಗೋಮುಖ ತೊಟ್ಟ ಆ ವ್ಯಾಘ್ರ ವನ್ನು ಆದಷ್ಟು ಬೇಗ ಹಿಡಿದು ಕಾಡು ತಲುಪಿಸಿದರೆ ಅಮಾಯಕ ಜೇನುಗೂಡು, ಜೇನುನೊಣ ಹಾಗೂ ಸಹೃದಯಿ ಜನ ಕ್ಷೇಮ ದಿಂದ ಇರಬಹುದು ಎಂಬುದು ಆ ಜೇನುಗೂಡಿನ ಹಿತೈಷಿಗಳ ಅಪೇಕ್ಷೆ ಯಾಗಿದೆ ಭವಿಷ್ಯದಲ್ಲಿ ಪರಿಸರದಲ್ಲಿರುವ ಬಾಕಿ ಜೇನು ನೊಣಗಳು ಆ ಜೇನು ಗೂಡಿಗೆ ಆಕರ್ಷಿತರಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಈಗಲೇ ಎಚ್ಚೆತ್ತರೆ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ.ಅದಕ್ಕೆ ನಮ್ಮ ಹಿರಿಯರು ಹೇಳಿದ ಗಾದೆ ಮಾತು “ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂಬುದು ತಿಳಿಯದು”ಎಂಬುದು ಈ ಜೇನುಗೂಡಿನ ಕರ್ಮಕಾಂಡ ತಿಳಿದಾಗ ಅರ್ಥವಾಗುತ್ತದೆ.ಸಂಪೂರ್ಣ ವಿಷಯ ಸಧ್ಯದಲ್ಲೇ ಎಲ್ಲರ ಮುಂದೆ ನಿರೀಕ್ಷಿಸಿ…
-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ