ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಾಜ ಸಂಘಟನೆಯಲ್ಲಿ ಯುವಕರ ಪಾತ್ರ ಮಹತ್ವವಾಗಿದೆ:ಲೋಹಿತ್ ವೈ ಕಲ್ಲೂರು

ನೂತನ ಪದಾಧಿಕಾರಿಗಳಿಗೆ ಕೆ.ಪಿ.ನಂಜುಂಡಿ ವಿಶ್ವಕರ್ಮ ವಿಡಿಯೋ ಮೂಲಕ ಶುಭ ಹಾರೈಕೆ

ರಾಯಚೂರು ಸಿಂಧನೂರು ಶ್ರೀಪುರಂ ಜಂಕ್ಷನ್ ನ ಸೂಗೂರೇಶ್ವರ ಟಿಂಬರ್ ಮತ್ತು ಹಾರ್ಡವೇರ್ ನಲ್ಲಿ ರಾಯಚೂರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ಸಾಮಾನ್ಯ ಸಭೆ ಮತ್ತು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ಕಲ್ಲೂರು ಮಾತನಾಡಿ ವಿಶ್ವಕರ್ಮ ಸಮಾಜದ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾದರೆ ಮೂಲಭೂತ ಸಮಾಜದ ಶಕ್ತಿ ಅಂದರೆ ಅದು ಯುವಕರ ಶಕ್ತಿ ಯುವಕರೆಲ್ಲರೂ ಸೇರಿ ಸಂಘಟಿತರಾಗಿ ಸಮಾಜಕೋಸ್ಕರ ದುಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾದ್ಯ ಎಂದು ತಿಳಿಸಿದರು ನಮ್ಮ ಸಮಾಜದ ನಾಯಕರಾದ ಕೆ.ಪಿ.ನಂಜುಂಡಿ ಅವರು ವಿಶ್ವಕರ್ಮ ಸಮಾಜಕ್ಕೆ ಇಪ್ಪತ್ನಾಲ್ಕು ವರ್ಷಗಳಿಂದ ಸಂಘಟನೆ ಮಾಡುತ್ತ ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವುಗಳೆಲ್ಲರೂ ಒಗ್ಗಟ್ಟಾಗಿ ಕೆ.ಪಿ.ನಂಜುಂಡಿ ಅವರ ಕೈ ಬಲಪಡಿಸಿ ಸಮಾಜದ ಹೋರಾಟಕ್ಕೆ ಯುವಕರೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ತಾಲೂಕ ವಿಶ್ವಕರ್ಮ ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೌನೇಶ ತಿಡಿಗೋಳ ಅವರಿಗೆ ವಿಶ್ವಕರ್ಮ ಧ್ವಜವನ್ನು ಹಸ್ತಾಂತರ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಮಾಜ ಸಂಘಟಿಸುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕ ಧರ್ಮಣ್ಣ ಗುಂಜಳ್ಳಿ ಮಾತನಾಡಿದರು.ನೂತನ ತಾಲೂಕ ಅದ್ಯಕ್ಷರಾದ ಮೌನೇಶ ತಿಡಿಗೋಳ ಅವರು ಮಾತನಾಡಿ ಅದ್ಯಕ್ಷರಾಗಿದ್ದ ವೀರಭದ್ರಪ್ಪ ಹಂಚಿನಾಳ ಅವರು ತಮ್ಮ ಅವಧಿಯಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಾ ಸಿಂಧನೂರನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಎಲ್ಲರೂ ಮಾರ್ಗದರ್ಶನ,ಸಲಹೆ ಸೂಚನೆ ಹಾಗೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ ಅವರು ನೂತನ ಅದ್ಯಕ್ಷ ಮೌನೇಶ ತಿಡಿಗೋಳ ಅವರಿಗೆ ವಿಶ್ವಕರ್ಮ ದ್ವಜ ಹಸ್ತಾಂತರಿಸಿ ಶುಭ ಕೋರಿದರು ರಾಜ್ಯ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲರು ಎಲ್ಲರ ಅಭಿಪ್ರಾಯದ ಮೇರೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಯಚೂರು ಜಿಲ್ಲಾ ಯುವ ಘಟಕದ ಅದ್ಯಕ್ಷರಾಗಿ ವಿಜಯಕುಮಾರ ಮಸ್ಕಿ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಿ ಘೋಷಿಸಿದರು ಸಮಾಜದ ನಾಯಕರಾದ ಕೆ.ಪಿ.ನಂಜುಂಡಿ ಅವರು ವಾಟ್ಸಾಪ್ ವೀಡಿಯೋ ಕಾಲ್ ಮೂಲಕ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು ಮುಂದಿನ ದಿನಗಳಲ್ಲಿ ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿ ಮತ್ತು ಅಲಬನೂರು ಹೋಬಳಿಗಳಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯ ಜನಜಾಗೃತಿ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಿಂಧನೂರಿನ ನಿವೃತ್ತ ಶಿಕ್ಷಕಿಯಾದ ಪಾರ್ವತಮ್ಮ ಇವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಡಲಗೇರಿ ವೆಂಕಟೇಶ ಮಹಾಸ್ವಾಮಿಗಳು,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ಕಲ್ಲೂರು,ರಾಜ್ಯ ಕಾರ್ಯದರ್ಶಿ ಬ್ರಹ್ಮ ಗಣೇಶ ವಕೀಲರು ಹಾಗೂ ಸೋಮನಾಥ ಪತ್ತಾರ ಸುಕಲಪೇಟೆ,ಅಖಿಲ ಜಿಲ್ಲಾ ಅಧ್ಯಕ್ಷರಾದ ಮಾರುತಿ ಬಡಿಗೇರ,ಜಿಲ್ಲಾ ಯುವ ಘಟಕದ ನೂತನ ಅದ್ಯಕ್ಷ ವಿಜಯಕುಮಾರ ಮಸ್ಕಿ,ಮನೋಹರ,ರಾಮು ಗಾಣದಾಳ,ವೀರೇಶ ದೇವರಗುಡಿ,ಶಂಕ್ರಪ್ಪ ನಿಡಿಗೋಳ,ವೆಂಕಟೇಶ ಆನ್ವರಿ,ಉಮೇಶ ಬಡಿಗೇರ ಲಿಂಗಸೂರು,ಅಂಬಣ್ಣ ಗೊರೆಬಾಳ,ತಿರುಮಲ ಆಚಾರಿ,ಧರ್ಮಣ್ಣ ಗುಂಜಳ್ಳಿ,ಚನ್ನಪ್ಪ ಕೆ.ಹೊಸಹಳ್ಳಿ,ಗಣೇಶ ಸುಕಲಪೇಟೆ,ಕಾಳಪ್ಪ ಕಣ್ಣೂರು,ಮಂಜುನಾಥ ಬಡಿಗೇರ,ಬಸವರಾಜ ಕಮತಗಿ ಇನ್ನೂ ಹಲವಾರು ಮುಖಂಡರು,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ಜಿಲ್ಲಾ ಪದಾಧಿಕಾರಿಗಳು,ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು,ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು, ಶ್ರೀ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ