ಸಿಂಧನೂರಿನ ಬಸವ ಮಕ್ಕಳ ಆಸ್ಪತ್ರೆಯ ವೈದ್ಯರಾದ ದೊಡ್ಡಬಸವ ಅವರು ಇಂದು ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯಕ್ಕೆ ಭೇಟಿ ನೀಡಿ ಕರ್ನಾಟಕ ಸರಕಾರದಿಂದ ರಾಜ್ಯ ಮಟ್ಟದ ಪರಿಸರ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅಮರೇಗೌಡ ಮಲ್ಲಾಪೂರ ಅವರನ್ನು ಸನ್ಮಾನಿಸಿ ಗೌರವಿಸಿದರು.ಪರಿಸರ ಸೇವೆಗೆ ಸಹಕಾರವಾಗಲಿ ಎಂದು 5 ಸಾವಿರ ರೂಪಾಯಿಗಳನ್ನು ವನಸಿರಿ ಫೌಂಡೇಶನ್ ಗೆ ದೇಣಿಗೆ ನೀಡಿ
ಮಾತನಾಡಿ ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳಸಿಕೊಳ್ಳಬೇಕು ನಮ್ಮ ಸಿಂಧನೂರಿನಲ್ಲಿ ಅಮರೇಗೌಡ ಮಲ್ಲಾಪೂರ ಅವರು ಅತ್ಯಂತ ಹೆಚ್ಚು ಪರಿಸರ ಕಾಳಜಿ ಹೊಂದಿದ್ದು ಮತ್ತು ಈ ಕಾಳಜಿಯನ್ನು ಕರ್ನಾಟಕ ಸರ್ಕಾರ ಗುರುತಿಸಿ ಜೂನ್ 5 ವಿಶ್ವ ಪರಿಸರ ದಿನದಂದು ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ತಾಲೂಕಿನ ಅನೇಕ ಪರಿಸರ ಪ್ರೇಮಿಗಳು ಆಲದ ಮರಕ್ಕೆ ದಾನಿಗಳ ರೂಪದಲ್ಲಿ ಸಹಾಯ ಸಹಕಾರಿ ನೀಡಿದಕ್ಕೆ ಇಂದು ಆಲದ ಮರ ರಕ್ಷಣೆಗೊಂಡು ಸುಂದರವಾಗಿ ಬೆಳೆದು ತಾಲೂಕಿನ ಜನತೆಗೆ ಶುದ್ಧಗಾಳಿ ನೀಡುತ್ತಿದೆ.ಇಂತಹ ಪರಿಸರ ಪ್ರೇಮಿಗಳು ಇನ್ನಷ್ಟು ಹೆಚ್ಚಿನ ಪರಿಸರ ಕಾಳಜಿಯುಳ್ಳ ಕಾರ್ಯಗಳನ್ನು ದಿನನಿತ್ಯ ಕೈಗೊಳ್ಳಲಿ ಎಂದು ನಾನು ಇಂದು ವನಸಿರಿ ಫೌಂಡೇಶನ್ ತಂಡಕ್ಕೆ 5 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ ಇದು ಇನ್ನೊಬ್ಬರಿಗೆ ಪ್ರೇರಣೆಯಾಗಲಿ,ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡುವ ಇಂತಹ ಪರಿಸರ ಪ್ರೇಮಿಗಳಿಗೆ ಸಹಾಯ ಸಹಕಾರ ನೀಡುವಂತಾಗಲಿ ಎಂದು ತಿಳಿಸಿದರು.