ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದ 38 ವರ್ಷಗಳ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರತಿಷ್ಠಿತ ಅಮ್ಮ ಸಂಸ್ಥೆಯ ಪದಾಧಿಕಾರಿಗಳು ಭೇಟಿ ನೀಡಿ ಆಶ್ರಮದ ವೃದ್ಧರ ಹಾಗೂ ಬುದ್ಧಿಮಾಂಧ್ಯರ ಯೋಗ ಕ್ಷೇಮವನ್ನು ವಿಚಾರಿಸಿ ಆಶ್ರಮಕ್ಕೆ ಅಮ್ಮ ಸಂಸ್ಥೆಯಿಂದಲೂ ಕೂಡಾ ಬೆಂಬಲ ಸೂಚಿಸಿದರು ಈ ಕಾರ್ಯಕ್ರಮದಲ್ಲಿ ಅಮ್ಮ ಸಂಸ್ಥೆಯ ಬಾಲಚಂದ್ರ ಮಾತನಾಡಿ ನಮ್ಮ ಸಂಸ್ಥೆಯು ಸತತ 38 ವರ್ಷಗಳ ಕಾಲ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ ಆದರೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕಾರುಣ್ಯ ಆಶ್ರಮವೂ ಕೂಡಾ ಕೈಗೆ ನಿಲುಕಲಾರದಷ್ಟು ಅನಾಥ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ ಇಂತಹ ಕಾರುಣ್ಯ ಆಶ್ರಮಕ್ಕೆ ನಮ್ಮ ಸಂಸ್ಥೆಯ ನಿರಂತರ ಬೆಂಬಲ ಸಹಾಯ ಸಹಕಾರ ಯಾವಾಗಲೂ ಇರುತ್ತದೆ ಈ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಸುಮಾರು ವರ್ಷಗಳಿಂದ ನಮಗೆ ಆತ್ಮೀಯ ಸ್ನೇಹಿತರು ಹಾಗೂ ನಮ್ಮ ಸಂಸ್ಥೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು ಕಾರುಣ್ಯ ಎನ್ನುವ ಕುಟುಂಬದ ಮೂಲಕ ಸಮಾಜದಲ್ಲಿನ ಅದೆಷ್ಟು ನೊಂದು ಬೆಂದಜೀವಿಗಳಿಗೆ ಆಸರೆಯಾಗಿರುವ ಜಂಗಮನ ಜೋಳಿಗೆ ವಿಶೇಷ ಅರ್ಥ ಕಲ್ಪಿಸಿಕೊಟ್ಟಿದ್ದಾರೆ ಇಂತಹವರಿಂದ ಸಮಾಜದ ಕರುಣೆ ಹೆಚ್ಚಾಗುತ್ತದೆ ನಾವು ಯಾವಾಗಲೂ ಇವರ ಬೆಂಬಲಕ್ಕೆ ಸದಾ ನಿಲ್ಲುತ್ತೇವೆ ಎಂದು ಮಾತನಾಡಿದರು. ಈ ಸಮಯದಲ್ಲಿ ಅಮ್ಮ ಸಂಸ್ಥೆಯ ಬಾಲಚಂದ್ರ ಅಶೋಕ ನರೇಗಲ್ ಮಲ್ಲಿಕಾರ್ಜುನ ಕಕ್ಕಸಗೇರಿ ಇವರುಗಳನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು ನಂತರ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಇಲಕಲ್ ನಗರದ ಅಮ್ಮ ಸಂಸ್ಥೆಯು ಯಾವಾಗಲೂ ಸಹ ನಮಗೆ ಬೆನ್ನೆಲುಬಾಗುತ್ತಾ ನಿರಂತರ ಮಾರ್ಗದರ್ಶನ ನೀಡುತ್ತಿದೆ ಇಂತಹ ಅನುಭವಿ ಸಂಸ್ಥೆ ನಮ್ಮ ಸೇವೆಗೆ ಶಕ್ತಿ ತುಂಬುತ್ತಾ ನಮ್ಮೊಂದಿಗಿರುವುದು ಕಾರುಣ್ಯ ಕುಟುಂಬದ ಘನತೆ ಗೌರವವನ್ನು ಹೆಚ್ಚಿಸುತ್ತಿದೆ ಈ ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ,ಇಂದುಮತಿ,ಏಕನಾಥ,ಗೀತಾ ಕುಲಕರ್ಣಿ,ಮರಿಯಪ್ಪ,ಹರ್ಷವರ್ಧನ ಕರಿಯಪ್ಪ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.