ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಪುಟ್ಟ ಗ್ರಾಮವಾದ ಚಳ್ಳೂರ ಈಗ ಪ್ರತಿಯೊಂದು ರಂಗದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.ಇದೇ ಗ್ರಾಮದ ಅನಿಲ್ ಕುಮಾರ್ ಎಂಬ ಯುವಕ ಡಾ||ನಾಗೂರು ಆಯುರ್ವೇದ ಮತ್ತು ಮೆಡಿಕಲ್ ಕಾಲೇಜ್ ವಿಜಯಪುರ ಅವರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ(ರಿ.) ಬೆಂಗಳೂರು,ಇವರ ವತಿಯಿಂದ ದಿನಾಂಕ 29-07-2023 ಮತ್ತು 30-07-2023 ರಂದು ನಡೆಸಲಾದ ಕರ್ನಾಟಕ ರಾಜ್ಯ ಯೋಗಾಸನ ಸ್ಪರ್ಧೆ- 2023 ರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿಯಾದ ಅನಿಲ್ ಕುಮಾರ(25) ಚಳ್ಳೂರ್ ದ್ವಿತೀಯ ಸ್ಥಾನವನ್ನು ಪಡೆದು ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ,ತಂದೆ-ತಾಯಿ ಕುಟುಂಬ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದರು,ಜೊತೆಗೆ ಗ್ರಾಮದ ಗುರುಹಿರಿಯರು,ಯುವಕರು ಅನಿಲ್ ಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
