ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಶ್ರೀಮತಿ ತಾಯಮ್ಮ ಕಿರಣಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಗುರು ಪಾಟೀಲ್ ರನ್ನು ಆಯ್ಕೆ ಮಾಡಿದ್ದಕ್ಕಾಗಿ ನೆಲೋಗಿಯ ಸರ್ವ ಸದಸ್ಯರಿಗೂ ತಾಯಮ್ಮ ಕಿರಣಗಿ ಮತ್ತು ಗುರು ಪಾಟೀಲ್ ಗ್ರಾಮದ ಸರ್ವ ಸದಸ್ಯರಿಗೂ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೂ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ,ಹಲವಾರು ಗಣ್ಯ ಮಾನ್ಯರಿಗೂ ಆಯ್ಕೆ ಮಾಡಿದ್ದಕ್ಕಾಗಿ ಅಭ್ಯರ್ಥಿ ಅನಂತ ಕೋಟಿ ಕೃತಜ್ಞತೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳ ವಿರಕ್ತ ಮಠ ನೆಲೋಗಿರವರು ದಿವ್ಯ ಸಾನಿದ್ಯವನ್ನು ವಹಿಸಿ ಸಭೆಯನ್ನುದ್ದೇಶಿಸಿ ಆಶಿರ್ವಚನವನ್ನು ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ದಿ ನೋಡಿ ನನಗೆ ತುಂಬಾ ಖುಷಿಯಾಗಿದೆ ಇನ್ನಷ್ಟು ಅಭಿವೃಧ್ಧಿಯಾಗಿ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಆಯ್ಕೆಯಾದ ಅಭ್ಯಾರ್ಥಿಗಳಿಗೆ ಶುಭ ಕೋರಿದರು.
ಹಾಗೂ ಇನ್ನೋರ್ವ ರಾಜಕೀಯ ಕಾಂಗ್ರೇಸ್ ಧುರೀಣರಾದ ರಾಜಶೇಖರ ಸಾಹೂ ಸೀರಿಯವರು ನಾವು ರಾಜಕೀಯ ವಿಷಯಗಳನ್ನಾಗಲಿ,ಅಧಿಕಾರ ಮಾಡುವುದಾಗಲಿ,ಜನರ ಒಕ್ಕೂಟದ ಕಾರ್ಯಗಳನ್ನಾಗಲಿ ಕಲಿಯಬೇಕಾದರೆ ನೆಲೋಗಿ ಗ್ರಾಮವೇ ನಮಗೆ ಸ್ಪೂರ್ತಿ ಎಂದು ಆಶಾ ಭಾವದ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಗಳಾಗಿ ಭೀಮರಾಯ ಆರ್ ಗುಜಗೊಂಡರವರು ತಮ್ಮ ಆತಿಥ್ಯ ಸ್ಥಾನವನ್ನು ವಹಿಸಿದರು ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಭ್ಯಾರ್ಥಿಗಳನ್ನು ಶುಭ ಕೋರುತ್ತಾ
ವಸುದೈವ ಕುಟುಂಬಕಂ ಎಂದರೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ ಹಾಗಾಗಿ ನಮ್ಮ ನೆಲೋಗಿ ಗ್ರಾಮದ ಸರ್ವ ಸದಸ್ಯರು ಒಗ್ಗಟ್ಟಾಗಿರೋಣ ಎಂದು ತಮ್ಮ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಎಮ್ ಸಂಕಾಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅರಳಗುಂಡಗಿ,ಬೈಲಪ್ಪ ಯುವ ಕಾಂಗ್ರೇಸ್ ಪಕ್ಷದ ಮುಖಂಡರು,ಶರಣು ಬಿಲ್ಲಾಡ,ಶರಭು ಕಲ್ಯಾಣಿ,ರವಿಕುಮಾರ ಕಿರಣಗಿ,ಮಲ್ಲಿ ಕಾರ್ಜುನ ಮಂಗಾ,ಬಸವರಾಜ ದಬಕಿ,ಧರೀಶ ಗುಳಗಿ ಹಾಗೂ ವಿವಿಧ ಸಂಘಟನಾ ಅಧ್ಯಕ್ಷರು ಮತ್ತು ಗ್ರಾಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.