ಸಿಂಧನೂರು:ಮನುಷ್ಯನ ಜೀವನಕ್ಕೆ ಗಾಳಿ,ನೀರು,ಆಹಾರ ಅತ್ಯವಶ್ಯಕವಾಗಿದೆ.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನೋಪಾಯಕ್ಕಾಗಿ ಪರಿಸರವನ್ನು ಅವಲಂಬಿಸಿರುತ್ತಾನೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು LBK ಕಾಲೇಜಿನ ಪ್ರಾಚಾರ್ಯರಾದ ವೆಂಕಟರಾವ್ ಮಿರಿಯಂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಧನೂರು ನಗರದ ಎಕ್ಸ್ ಲೆಂಟ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರನ್ನು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ LBK ಕಾಲೇಜಿನ ಪ್ರಾಚಾರ್ಯರಾದ ವೆಂಕಟರಾವ್ ಮಿರಿಯಂ ಅವರು ಮನುಷ್ಯ ತನ್ನ ಜೀವನದಲ್ಲಿ ಹಲವಾರು ರೀತಿಯ ಜೀವನೋಪಾಯದ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಸರವನ್ನು ಅವಲಂಬಿಸಿದ್ದಾನೆ.ಜೀವಿಸಲು ಪ್ರಮುಖವಾಗಿ ಗಾಳಿ ನೀರು ಆಹಾರ ತುಂಬಾ ಅತ್ಯವಶ್ಯಕ,ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು.ಈಗಾಗಲೇ ನಮ್ಮ ಭಾಗದವರಾದ ಅಮರೇಗೌಡ ಮಲ್ಲಾಪೂರ ಅವರು ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಅವರ ಪರಿಸರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.ಸಮಾಜ ಶಾಸ್ತ್ರ ಗೆಳೆಯರೆಲ್ಲರೂ ಕೂಡ ಸೇರಿ ಇವರ ಕಾರ್ಯಕ್ಕೆ ಕೈಜೋಡಿಸೋಣ ಮತ್ತು ಮಕ್ಕಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿತು ಬೋಧಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,LBK ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವೆಂಕಟರಾವ್ ಮಿರಿಯಂ,ಸಮಾಜಶಾಸ್ತ್ರ ಗೆಳೆಯರ ಬಳಗದ ಸದಸ್ಯರಾದ ಪರಶುರಾಮ ಮಲ್ಲಾಪುರ, ರಮೇಶ ಮುಡಬೂಳ,ಸಣ್ಣಯಲ್ಲಪ್ಪ ಸಾಸಲಮರಿ,
ಶ್ರೀಮೌನಮ್ಮ,ಶ್ರೀಶೈಲ ಪಲ್ಲೇದ,ವಿಶ್ವನಾಥ ಹೆಚ್,ಶಾಲಿನಿ ಸಂಗಮ,ಮಹಾಂತೇಶ ಹಿರೇಮಠ,ಬಿ.ರವಿಕುಮಾರ ಸಾಸಲಮರಿ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.