ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರಿಗೆ ಆಶ್ರಮದ ವತಿಯಿಂದ ಅಭಿನಂದನಾ ಸನ್ಮಾನ ಸಮಾರಂಭ ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ ಗೌಡ ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಮಾತನಾಡಿ ಕಾರುಣ್ಯ ಆಶ್ರಮದ ಸೇವೆ ಮಾಡಲು ನನಗೂ ಅವಕಾಶ ನೀಡಿ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಅನಾಥ ಜೀವಿಗಳ ನೋಂದ ಜೀವಿಗಳಿಗೆ ಬದುಕು ಕಟ್ಟಿ ಕೊಟ್ಟಿರುವ ಕಾರುಣ್ಯ ಆಶ್ರಮದ ಸೇವೆ ನಮ್ಮ ದೇಶವೇ ಮೆಚ್ಚುವಂಥದ್ದು ಭಾರತೀಯ ಕರುಣಾಮಯಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಿಸ್ವಾರ್ಥತೆಯ ಪಾಠ ಕಲಿಸಿ ಕೊಟ್ಟಿರುವ ಕಾರುಣ್ಯ ಆಶ್ರಮ ನಮ್ಮ ಸಿಂಧನೂರಿನಲ್ಲಿ ಹುಟ್ಟಿಕೊಂಡಿರುವುದು ನಮ್ಮ ಕಲ್ಯಾಣ ಕರ್ನಾಟಕದ ಪುಣ್ಯ ಇಂತಹ ಕಾರುಣ್ಯ ಕುಟುಂಬದೊಂದಿಗೆ ನಮ್ಮ ಕರ್ತವ್ಯದೊಂದಿಗೆ ಸಮಯಾವಕಾಶ ಸಿಕ್ಕಾಗ ಜೀವನವನ್ನು ಕಳೆಯುವುದರ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳುತ್ತೇವೆ ಮನೆಯಲ್ಲಿರುವ ತಂದೆ ತಾಯಿಗಳನ್ನು ತಿರಸ್ಕರಿಸುವಂತಹ ಅದೆಷ್ಟೋ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ಆದರೆ ಇಲ್ಲಿ ಬೇರೆ ರಾಜ್ಯದಿಂದ ಬೇರೆ ಬೇರೆ ಜಿಲ್ಲೆಗಳಿಂದ ಅನಾಥ ಹಿರಿಯ ಜೀವಿಗಳನ್ನು ಲಾಲನೆ ಪೋಷಣೆ ಮಾಡುತ್ತಿರುವ ಕಾರುಣ್ಯ ಆಶ್ರಮ ದೇವರು ಮೆಚ್ಚುವಂತಹ ಕಾರ್ಯ ಮಾಡುತ್ತಿದೆ ಇಂತಹ ಕಾರುಣ್ಯ ಕುಟುಂಬದ ಆಶೀರ್ವಾದದ ಮೂಲಕ ನನ್ನ ಕರ್ತವ್ಯ ಹಾಗೂ ನನ್ನ ಕುಟುಂಬಕ್ಕೆ ಶುಭ ಕೋರಿ ಹಾರೈಸಿ ಹಾರೈಸಿದ ಕ್ಷಣಗಳು ನನ್ನ ಜೀವನದ ಇತಿಹಾಸ ಪುಟದಲ್ಲಿ ಸೇರಲಿವೆ ನನ್ನ ಜೀವ ಇರುವವರೆಗೂ ಕಾರುಣ್ಯ ಕುಟುಂಬದಲ್ಲಿ ನಾನೊಬ್ಬ ಸೇವಕನಾಗಿ ಸೇವೆ ಮಾಡುತ್ತೇನೆ ಎಂದು ಭಾವನಾತ್ಮಕವಾಗಿ ತಮ್ಮ ಅಂತರಾಳದ ಅನಿಸಿಕೆಯನ್ನು ಎಲ್ಲಾ ಹಿರಿಯ ಜೀವಿಗಳು ಹಾಗೂ ಬುದ್ಧಿಮಾಂದ್ಯ ಜೀವಿಗಳ ಜೊತೆ ಹಂಚಿಕೊಂಡರು ನಂತರ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ.ಹಿರೇಮಠ ಮಾತನಾಡಿ ಸಮಗ್ರ ಶಿಕ್ಷಣದ ಬದಲಾವಣೆಯನ್ನು ತಾವು ತರುತ್ತೀರಿ ಎನ್ನುವ ಭರವಸೆ ನಮ್ಮೆಲ್ಲರಿಗಿದೆ.ಶಿಕ್ಷಣ ಕ್ಷೇತ್ರದ ತಮ್ಮ ಕರ್ತವ್ಯ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ತಮ್ಮಂತಹ ಪ್ರಾಮಾಣಿಕ ಅಧಿಕಾರಿಗಳು ನಮ್ಮ ಸಿಂಧನೂರಿಗೆ ಮತ್ತೆ ಬಂದು ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಹಾಗೂ ನಮ್ಮ ಕಾರುಣ್ಯ ಕುಟುಂಬಕ್ಕೆ ಬಹಳ ಸಂತೋಷದ ಹೆಮ್ಮೆಯ ವಿಷಯವಾಗಿದೆ ಎಂದು ಮಾತನಾಡಿ ಶುಭ ಕೋರಿದರು ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಸಲಿಂಗಪ್ಪ ಬಿ.ಆರ್.ಸಿ.ಅಮರೇಶ ಇ.ಸಿ.ಓ.ಶೇಖರಗೌಡ ಇ.ಸಿ.ಒ. ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ ಚನ್ನಬಸವ ಸ್ವಾಮಿ ಹಿರೇಮಠ ಸುಜಾತ ಹಿರೇಮಠ. ಇಂದುಮತಿ ಏಕನಾಥ.ಗೀತಾ ಕುಲಕರ್ಣಿ.ಮರಿಯಪ್ಪ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.