ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲಕ್ಷ್ಮೇಶ್ವರ ಪುರಸಭೆ- ಗುಂಡಿಯಲ್ಲಿ ರಸ್ತೆ ಇದೆಯೋ!ರಸ್ತೆಯಲ್ಲಿ ಗುಂಡಿ ಇದೆಯೋ!

ಗದಗ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದರೆ ಅದು ಲಕ್ಷ್ಮೇಶ್ವರ, ಶಿಕ್ಷಣ,ಕೈಗಾರಿಕೆ,ಉದ್ಯೋಗ,ಕಲೆ ಮತ್ತು ಸಂಸ್ಕೃತಿ, ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ರಾಜ್ಯದಲ್ಲಿಯೇ ಹೆಸರು ಮಾಡುತ್ತಿದೆ.ಪ್ರತಿದಿನ ಲಕ್ಷ್ಮೇಶ್ವರ ನಗರಕ್ಕೆ ವಿವಿಧ ಉದ್ದೇಶ ಮತ್ತು ಕಾರಣಗಳಿಗಾಗಿ ಸಾವಿರಾರು ಜನ ಬಂದು ಹೋಗುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರಕ್ಕೆ ಇರುವ ಸಂಪರ್ಕ ರಸ್ತೆಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆ ಯಾವುದೋ ಗುಂಡಿ ಯಾವುದೋ ತಿಳಿಯದೇ ಚಾಲಕರು ಗಲಿಬಿಲಿಗಿಡುಗುತ್ತಾರೆ ತದನಂತರದಲ್ಲಿ ನಗರದಲ್ಲಿರುವ ರಸ್ತೆಗಳ ಕಥೆಯಂತೂ ಹೇಳತೀರದು. ವಿಶೇಷ ಧಾರ್ಮಿಕ ಸ್ಥಳಗಳಿರುವ ಲಕ್ಷ್ಮೇಶ್ವರದಲ್ಲಿ ಮಳೆಗಾಲದಲ್ಲಿ ಒಂದು ದಿನ ಭೇಟಿಕೊಟ್ಟರೇ ಅವರ ಜನ್ಮ ಪಾವನವಾದಂತೆಯೇ ಸರಿ,ಏಕೆಂದರೆ ಇಷ್ಟೊಂದು ಕೆಟ್ಟ ರಸ್ತೆಗಳನ್ನು ಅವರ ಬದುಕಿನಲ್ಲಿ ಎಲ್ಲಿಯೂ ಕೂಡ ನೋಡಿರಲಿಕ್ಕೆ ಸಾಧ್ಯವಿಲ್ಲವೆನೋ! 23 ಸದಸ್ಯ ಬಲದ ಪುರಸಭೆಯ ಕಾರ್ಯವೈಖರಿ ನಿಜವಾಗಿಯೂ ಮೆಚ್ಚುವಂತದ್ದು ಕಾರಣ,ಶುದ್ಧೀಕರಣವಾಗದ ಕಳಪೆ ಗುಣಮಟ್ಟದ ಕುಡಿಯುವ ನೀರು,ಬೀದಿ ದೀಪವಿಲ್ಲದ ಮಿಂಚುಹುಳಗಳ ನೆರವಿನಿಂದ ಕಾಣುವ ರಸ್ತೆಗಳು, ಬ್ಲಾಕ್‌ ಆಗಿ ಅಥವಾ ಕಟ್ಟಿಕೊಂಡು ನಿಂತಿರುವ ಗಟಾರ ಮತ್ತು ಚರಂಡಿಗಳು,ಕೋಟ್ಯಾಂತರ ರೂಪಾಯಿಗಳನ್ನು ಪೋಲು ಮಾಡಿ ಅರ್ಧಂಬರ್ಧವಾಗಿ ನಿಂತಿರುವ ಒಳಚರಂಡಿ ವ್ಯವಸ್ಥೆ,ಬಡವರಿಗೆ ರೈತರಿಗೆ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಎಲ್ಲಿಗಾದರೂ ಹೋಗಬಯಸಿದರೇ ತಾಸುಗಟ್ಟಲೇ ಬಸ್ಸಿಗಾಗಿ ಕಾದು ಬಸ್ಸು ಸಿಕ್ಕರೂ ಕೂಡಾ ನಿಂತುಕೊಂಡು ಹೋಗುವ ದುರ್ವಿಧಿ ನಮ್ಮದು,180 ಕ್ಕೂ ಅಧಿಕ ಬಸ್ಸುಗಳ ಸಾಮರ್ಥ್ಯದ ಲಕ್ಷ್ಮೇಶ್ವರ ಡಿಪೋದಲ್ಲಿ ಸದ್ಯಕ್ಕೆ 70 ಬಸ್ಸುಗಳು ಕೆಟ್ಟು ನಿಂತು ಎರಡು ಮೂರು ವರ್ಷಗಳು ಕಳೆದರೂ ಕೇಳುವವರಿಲ್ಲ ಇರುವ 110 ಬಸ್ಸುಗಳು ಸುಸ್ಥಿತಿಯಲ್ಲಿರದಿದ್ದರೂ ಅನಿವಾರ್ಯವಾಗಿ ರಸ್ತೆಗಳ ಮೇಲೆ ಓಡಾಡುತ್ತಿವೆ ಆಹಾ ಎನ್‌ ಅಧ್ಬುತ ನೀ ಲಕ್ಷ್ಮೇಶ್ವರ ಸರ್ಕಾರ ಮತ್ತು ಪುರಸಭೆ ಈ ನಿಟ್ಟಿನಲ್ಲಿ ಗಮನ ಹರಿಸಿ ಸಾರ್ವಜನಿಕರು,ಪ್ರವಾಸಿಗರು, ಉದ್ಯೋಗಸ್ಥರು ರೈತರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ಅಗತ್ಯ ಸೇವೆಗಳನ್ನು ಪೂರೈಸಲು ವಿನಂತಿಸಿದರು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು,ಅಧಿಕಾರಿಗಳು, ಊರಿನ ಹಿರಿಯ ನಾಯಕರು ಕೊಂಚ ಗಮನ ಹರಿಸಿದರೆ ಒಳಿತು ಎಂದು ಸೋಮಣ್ಣ ಉಪನಾಳ ಬಿಜೆಪಿ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ