ಯಾದಗಿರಿ/ಸುರಪುರ:ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ನಗರದ ನಿಷ್ಠಿ ಕಡ್ಲಪ್ಪ ಮಠದ ಆವರಣದಲ್ಲಿ ಆಗಸ್ಟ್ 7 ರಿಂದ ಕಾಲ ಪಾರಂಪರಿಕ ನಾಟಿ ವೈದ್ಯರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ . ಎಂದು ಪರಿಷತ್ತಿನ ರಾಜ್ಯ ಖಜಾಂಚಿ ರಾಜಾ ಚನ್ನಪ್ಪ ನಾಯಕ (ಪುಟ್ಟು) ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು ಶಿಬಿರದಲ್ಲಿ ನಾಡಿ ಶೋಧನ ಮತ್ತು ಮನುಷ್ಯನ ಅಂಗ ರಚನೆ ಹಾಗೂ ರೋಗ ಲಕ್ಷಣಗಳು ಕುರಿತು ತರಬೇತಿ ನೀಡಲಾಗುವುದು ಆಯುಷ್ ಇಲಾಖೆಯ ಖ್ಯಾತ ವೈದ್ಯ ಡಾಕ್ಟರ್ ನಿರ್ಮಲಾ ಕೆಳಮನೆ ತರಬೇತಿ ನೀಡಲಿದ್ದಾರೆ.ಉಪಹಾರ,ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ ಮಿಸ್ಟಿಕ್ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಮಹಾ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಡಾ.ವೆಂಕಟಪ್ಪ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಸುರಪುರದ ಅರಸು ಮನೆತನದ ಡಾಕ್ಟರ್ ರಾಜಾ ಕೃಷ್ಣಪ್ಪ ನಾಯಕ ಧನ್ವಂತರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ ಹುಲಿಹೈದರ್,ಅರಸು ಮನೆತನದ ರಾಜಾ ಸುಭಾಶ್ಚಂದ್ರ ನಾಯಕ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಪರಿಷತ್ತಿನ ಅಧ್ಯಕ್ಷರಾದ ವೈದ್ಯ ಆನಂದ್ ಏರೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಅತಿಥಿಗಳಾಗಿ ವೇಣು ಮಾಧವ ನಾಯಕ್ ನಗರಸಭಾ ಸದಸ್ಯರು ಕಬಡಿಗೇರ ನಿಷ್ಟಿ ತಾಂತ್ರಿಕ ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್ ನಿಷ್ಕಿ ಪರಿಷತ್ ರಾಜ್ಯ ಕಾರ್ಯದರ್ಶಿ ವೈದ್ಯ ಕುಮಾರಸ್ವಾಮಿ ಪರಿಷತ್ ಜಿಲ್ಲಾಧ್ಯಕ್ಷ ಮಕ್ತುಂ ಪಟೇಲ್ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳು ರಾಘವೇಂದ್ರ ಸುಗಂಧಿ ಪರಿಷತ್ ತಾಲೂಕ ಅಧ್ಯಕ್ಷ ಪ್ರಭಯ ಸ್ವಾಮಿ ಸ್ಥಾವರಮಠ ಲಕ್ಷ್ಮಿಪುರ
ಜಿಲ್ಲೆಯ ಪಾರಂಪರಿಕ ನಾಟಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಪರಿಷತ್ ರಾಜ್ಯ ಖಜಾಂಚಿ ರಾಜಾ ಚನ್ನಪ್ಪ ನಾಯಕ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.