ಸಿಂಧನೂರು ನಗರದ ಉಪ್ಪಾರವಾಡಿ ರಸ್ತೆಯ ಹಳ್ಳದ ಹತ್ತಿರ ಚಿಟ್ಟೂರಿ ರಾಮಬಾಬು ಅವರು ಸಾಮಾಜಿಕ ಕಳಕಳಿಯಿಂದ ಹಿಂದೂ ಸಮುದಾಯಗಳಿಗೆ ದಹನದ ಅಂತ್ಯಕ್ರಿಯೆ ಮಾಡಲು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸಿ.ಎಸ್.ಆರ್.ಫೌಂಡೇಶನ್ ಕೈಲಾಸ ಭೂಮಿ (ರುದ್ರಭೂಮಿ)ಗೆ ವಿಶ್ವಕರ್ಮ ಸಮಾಜದ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಬಡಿಗೇರ ಮಾತನಾಡಿ ಚಿಟ್ಟೂರಿ ರಾಮಬಾಬು ಅವರು ಹಲವಾರು ಸಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿರುವವರು.ಇವರು ಪರಿಸರ ಪ್ರೇಮಿಗಳಾಗಿ ಸಿಂಧನೂರಿನ ಹಲವಡೆ ಸಸಿಗಳನ್ನು ನೆಟ್ಟಿದ್ದಾರೆ,ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಂಧನೂರು ನಗರದಲ್ಲಿ ಸ್ವಂತ ರುದ್ರಭೂಮಿ ಹೊಂದಿರದ ಹಾಗೂ ಅತ್ಯಂತ ಹಿಂದುಳಿದಿರುವ ಸಮಾಜಗಳಿಗೆ ಎಲ್ಲಾ ಹಿಂದೂ ಸಮುದಾಯಗಳಿಗೆ ಅಂತ್ಯ ಸಂಸ್ಕಾರ ದಹನಕ್ರಿಯೆ ಮಾಡಲು ಸಿ.ಎಸ್.ಆರ್.ಫೌಂಡೇಶನ್ ಮೂಲಕ ಕೈಲಾಸ ಭೂಮಿ ಹೆಸರಿನ ರುದ್ರಭೂಮಿಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಅತ್ಯಂತ ಹಿಂದುಳಿದ ಸಮಾಜಗಳಿಗೆ ಹಾಗೂ ನಮ್ಮ ವಿಶ್ವಕರ್ಮ ಸಮಾಜಕ್ಕೂ ದಹನದ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ತುಂಬಾ ಶ್ಲಾಘನೀಯ ಇದು ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಬಹಳ ಉಪಯುಕ್ತವಾಗಿದೆ ಚಿಟ್ಟೂರು ರಾಮಬಾಬು ಅವರಿಗೆ ಅವರಿಗೆ ವಿಶ್ವಕರ್ಮ ಸಮಾಜದ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಚಿಟ್ಟೂರು ರಾಮಬಾಬು,ವಿಶ್ವಕರ್ಮ ಸಮಾಜದ ತಾಲೂಕ ಸದಸ್ಯರಾದ ಗಂಗಾಧರ ಪೇಂಟರ್,ಉಪೇಂದ್ರ ಆಚಾರಿ ಹಾಗೂ ಇನ್ನೂ ಹಲವಾರು ಜನರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.