ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾರುಣ್ಯಾಶ್ರಮ ಮಾನವೀಯ ಹರಿಕಾರನಂತೆ ಕಾಯಕ ಮಾಡುತ್ತಲಿದೆ ಡಾ.ಕೆ.ಶಿವರಾಜ ಶ್ಲಾಘನೆ.

ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಹನಾ ಮಕ್ಕಳ ಆಸ್ಪತ್ರೆ ದಿ.ಕೆ.ಗೋವಿಂದ ರೆಡ್ಡಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಕಲ್ಪ ಗ್ರಂಥಾಲಯ ಗೆಳೆಯರ ಬಳಗ ಸಿಂಧನೂರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಾಗೂ “ಮಾನವೀಯತೆಯ ಮನಸ್ಸುಗಳು” ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಮಕ್ಕಳ ತಜ್ಞರಾದ ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ಕೆ.ಶಿವರಾಜ ಅವರು ಇಡೀ ದಿನ ಕಾರುಣ್ಯ ಆಶ್ರಮದ ಆಶ್ರಯದಾತರುಗಳೊಂದಿಗೆ ಅವರ ಯೋಗಕ್ಷೇಮವನ್ನು ವಿಚಾರಿಸುವ ಮೂಲಕ ಅವರುಗಳಿಗೆ ಜೀವನದಲ್ಲಿ ಬದುಕುವ ಅಂಶಗಳನ್ನು ಅಳವಡಿಸಿ ನಾವೆಲ್ಲಾ ನಿಮ್ಮವರು ಎನ್ನುವ ಭಾವನೆಯ ಬೀಜವನ್ನು ಬಿತ್ತುವುದರ ಮೂಲಕ ಅಲ್ಲಿನ ಜೀವಿಗಳಿಗೆ ಧೈರ್ಯ ತುಂಬಿದರು ಈ ಸಮಯದಲ್ಲಿ ಆಶ್ರಮದ ವತಿಯಿಂದ ಡಾ.ಕೆ.ಶಿವರಾಜ ಅವರನ್ನು ವಿಶೇಷ ಸನ್ಮಾನದ ಮೂಲಕ ಅವರ ಪಿತೋಶ್ರೀಯವರಾದ ದಿ. ಕೆ.ಗೋವಿಂದ ರೆಡ್ಡಿಯವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಸಮಯದಲ್ಲಿ ಡಾ. ಕೆ.ಶಿವರಾಜ ಮಾತನಾಡಿ ಕಾರುಣ್ಯಾಶ್ರಮವು ಮಾನವೀಯ ಹರಿಕಾರನಂತೆ ಕಾಯಕ ಮಾಡುತ್ತಲಿದೆ ಇಂತಹ ಸೇವೆಯನ್ನು ನಮ್ಮ ಈ ಕಾರುಣ್ಯ ಸಂಸ್ಥೆ ಇದು ಸೇವೆಯಲ್ಲ ಕರ್ತವ್ಯ ಎನ್ನುವ ಹಾಗೆ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿ ಕೊಟ್ಟಿದೆ. ಇಲ್ಲಿ ಆಶ್ರಯ ಪಡೆದಿರುವ ಜೀವಿಗಳಿಲ್ಲಿ ಸಂಬಂಧಿಕರಿದ್ದರೂ ಕೂಡ ನಮಗೆ ಕಾರುಣ್ಯ ಎನ್ನುವ ಕುಟುಂಬವೇ ನನ್ನ ಸ್ವಂತ ಮನೆ ಇಲ್ಲಿರುವ ಕರ್ತವ್ಯಧಾರಿಗಳು ನಮ್ಮ ಮಕ್ಕಳು ಮೊಮ್ಮಕ್ಕಳು ನಿಮ್ಮ ಜೊತೆ ವಾಸಿಸುವ ಜೀವಿಗಳೇ ನಮ್ಮ ಸ್ವಂತ ಸಹೋದರ ಸಹೋದರಿಯರು ಆಶ್ರಮಕ್ಕೆ ಭೇಟಿ ನೀಡುವ ನಾವೆಲ್ಲರೂ ಬಂಧು ಬಳಗ ಎಂದುಕೊಂಡು ನಿಮ್ಮ ಹಿಂದಿನ ಜೀವನದ ಘಟನೆಗಳನ್ನು ಮರೆಯಿರಿ ನನ್ನ ಗುರುಗಳು ನನಗೆ ನೀಡಿರುವ ಸಂದೇಶ ಯಾವುದು ಶಾಶ್ವತವಲ್ಲ ಅದೇ ರೀತಿಯಲ್ಲಿ ನಾನೂ ಕೂಡ ಈ ಪದದ ಅರ್ಥವನ್ನು ಪಾಲಿಸುತ್ತಿದ್ದೇನೆ.ಇಂದು ಸಂಕಲ್ಪ ಗ್ರಂಥಾಲಯದ ವಿದ್ಯಾರ್ಥಿಗಳು ಆಶ್ರಮದಲ್ಲಿ ಸ್ವಚ್ಛತೆಯ ಕಾರ್ಯಕ್ರಮವನ್ನು ಮಾಡುತ್ತಿರುವುದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ವಿದ್ಯಾರ್ಥಿಗಳು ಈ ರೀತಿ ಸಾಮಾಜಿಕ ಜವಾಬ್ದಾರಿಯನ್ನು ಪಾಲನೆ ಮಾಡುತ್ತಿರುವುದು ನಮ್ಮ ಸಿಂಧನೂರಿನ ಕೀರ್ತಿ ಹೆಚ್ಚಿಸಿದಂತಾಗುತ್ತದೆ. ಇಲ್ಲಿರುವ ಎಲ್ಲಾ ಜೀವಿಗಳು ನನ್ನ ತಂದೆ ತಾಯಿಗಳ ಸ್ವರೂಪಿಗಳು ನಾನು ಹಾಗೂ ನನ್ನ ಕುಟುಂಬ ಕಾರುಣ್ಯ ಆಶ್ರಮದ ಸೇವೆಗೆ ಸದಾ ಸಿದ್ಧವಿರುತ್ತದೆ. ನನ್ನ ಸಹೋದರರಾದ ರಾಜಶೇಖರ ರೆಡ್ಡಿ ಅವರು ಕಾರುಣ್ಯ ಕುಟುಂಬದ ಬಗ್ಗೆ ತೆಗೆದುಕೊಂಡಿರುವ ಕಾಳಜಿ ನನ್ನ ತಂದೆ ತಾಯಿಗಳ ಹಿರಿಮೆಯನ್ನು ಹೆಚ್ಚಿಸುತ್ತಿದೆ. ಯಾವಾಗಲೂ ಸಹ ಸಹನಾ ಕುಟುಂಬಕಾರುಣ್ಯ ಕುಟುಂಬ ಇವೆರಡೂ ಒಂದೇ ಎನ್ನುವ ಭಾವನೆ ಜನರಲ್ಲಿ ಮೂಡಿಸಿರುವ ಈ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶರಣು ಪಾ ಹಿರೇಮಠ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರುಮಠ ಹಾಗೂ ಪದಾಧಿಕಾರಿಗಳು ಮತ್ತು ಇಲ್ಲಿನ ಎಲ್ಲಾ ಕರ್ತವ್ಯ ಧಾರಿಗಳಿಗೆ ನಮ್ಮ ಕುಟುಂಬದಿಂದ ನಿರಂತರ ಸಹಾಯ ಸಹಕಾರ ದೊರೆಯುತ್ತದೆ ಎಂದು ಮಾತನಾಡಿ ಇನ್ನು ಮುಂದಿನ ದಿನಗಳಲ್ಲಿ ಪ್ರತಿ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಆಶ್ರಮದ ಗೌರವಾಧ್ಯಕ್ಷರಾದ ಶರಣು,ಪಾ. ಹಿರೇಮಠ. ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರ ಮಠ. ಸಲಹಾ ಸಮಿತಿಯ ಮುಖಂಡರಾದ ಮಲ್ಲನಗೌಡ ಮಾವಿನಮಡುಗು ಹಾಗೂ ಮುರಳಿ ಕೃಷ್ಣ ಮೆಕಾನಿಕ್. ವೀರಭದ್ರಗೌಡ ಗಿಣಿವಾರ ಸಿಬ್ಬಂದಿಗಳಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ.ಸುಜಾತ ಹಿರೇಮಠ ಇಂದುಮತಿ ಏಕನಾಥ. ಶರಣಮ್ಮ ಹಾಗೂ ಸಂಕಲ್ಪ ಗ್ರಂಥಾಲಯ ಗೆಳೆಯರ ಬಳಗದ ರವಿಕುಮಾರ ಗಿಣಿವಾರ. ಕಾಮಣ್ಣ ಮೆದಿಕಿನಾಳ. ಬಸವರಾಜ ಹುಲ್ಲೂರು. ಸುರೇಶ ಕಂಬಳಿ ಒಳಬಳ್ಳಾರಿ. ಬಸವರಾಜ ಕ್ಯಾತನಹಟ್ಟಿ. ಲಿಂಗನಗೌಡ ಮೆದಿಕಿನಾಳ,ಮಂಜುನಾಥ ಮೂರನೇ ಮೈಲ್ ಕ್ಯಾಂಪ್ ಬಸವರಾಜ ಸುಲ್ತಾನಪುರ,ಸಿದ್ದಪ್ಪ ಕುಷ್ಟಗಿ ಹನುಮೇಶ ಹೆಡಗಿನಾಳ ಕಲಾವಿದರು. ಹರ್ಷವರ್ಧನ ಸರ್ವೇಶ ಅನೇಕರು ಉಪಸ್ಥಿತರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ