ಹನೂರು ತಾಲೂಕಿನ ಅರ್ಜಿಪುರ ಸಮೀಪ ಇರುವ ಉಡುತೊರೆ ಜಲಾಶಯಕ್ಕೆ ಶಾಸಕ ಎಂಆರ್ ಮಂಜುನಾಥ್ ಭೇಟಿ ನೀಡಿ ನೀರಾವರಿ ಅಧಿಕಾರಿಗಳ ಜೊತೆ ಮಾತನಾಡಿ ಅಧಿಕಾರಿಗಳು ಮೊದಲು ರೈತರನ್ನು ಕರೆದು ಸಭೆ ನಡೆಸಿ ನೀರಾವರಿ ಸ್ವಹ ಸಮಿತಿ ರಚನೆ ಮಾಡಿ ನಂತರ ನೀರಾವರಿ ಯೋಜನೆಗೆ ಸದ್ಬಳಕೆ ಮಾಡಿಕೊಳ್ಳಲು ನಾಲೆಗಳಲ್ಲಿ ತುಂಬಿರುವ ಉಳು ತೆಗೆಸಿ ಗಿಡ ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ನಂತರ ಜಲಾಶಯದ ಮುಂಭಾಗ ಇರುವ ರೈತರಿಂದ ವಶಪಡಿಸಿಕೊಂಡಿರುವ ಜಮೀನನ್ನು ಸದ್ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಕ್ರಮವಿಸಬೇಕು ನೀರವರಿಗೆ ಸಂಬಂಧಪಟ್ಟಂತ ಕಡತಗಳನ್ನು ಸಂಪೂರ್ಣ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು
ನೀರಾವರಿ ಯೋಜನೆ ಸಂಪೂರ್ಣ ಸದ್ಬಳಕೆಗೆ ನೀಲ ನಕ್ಷೆ ತಯಾರಿಸಿ : ಜಲಾಶಯದ ನೀರಾವರಿಯನ್ನು ರೈತರಿಗೆ ಸಕಾಲದಲ್ಲಿ ಸಂಗ್ರಹಣೆಯಾಗುವ ನೀರಿನ ಸಾಮರ್ಥ್ಯವನ್ನು ಅರಿತು ನೀರಾವರಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ರೈತರನ್ನು ಕರೆದು ಸಭೆ ನಡೆಸಿ ನಂತರ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರಾವರಿ ಯೋಜನೆಯನ್ನು ರೈತರ ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಜೆ ಶಿವಮೂರ್ತಿ ಲಿಂಗೇಗೌಡ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಬಸವೇಶ್ ರೈತರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್