ಹನೂರು:ಕಾಯಕಯೋಗಿ ನುಲಿಯ ಚನ್ನಯ್ಯ ಜಯಂತಿಯನ್ನು ಸಮುದಾಯದ ಆಶಯಕ್ಕೆ ಯಾವುದೇ ದಕ್ಕೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು ಶಾಸಕ ಎಂ ಆರ್ ಮಂಜುನಾಥ್ ಅಧಿಕಾರಿಗಳಿಗೆ ಮಂಜುನಾಥ್ ಸೂಚನೆ
ಹನೂರು ಪಟ್ಟಣದ ಲೋಕೊಪಯೋಗಿ ಇಲಾಖೆ ಅತಿ ಗಣ್ಯ ವ್ಯಕ್ತಿಗಳ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು
ಹನೂರು ಪಟ್ಟಣದಲ್ಲಿ ನುಲಿಯಚಂದಯ್ಯ ನವರ ಜಯಂತಿ
ಮಾಡಲು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗಿದ್ದು ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಪೂರ್ವಜರು ಹಿರಿಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹೀಗಾಗಿ ನುಲಿಯ ಚಂದಯ್ಯ ನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ಸಹಕಾರ ಇದೆ ಎಲ್ಲರೂ ಒಗ್ಗೂಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಬಳಿಕ ಕುಡುವ ಸಮಾಜದ ಮುಖಂಡರಾದ ಪಂಚಾಕ್ಷರಿ ಎಂ ಮಾತನಾಡಿ, ಸೆ.3ರಂದು ಹನೂರು ಪಟ್ಟಣದಲ್ಲಿ ನುಲಿಯಚಂದಯ್ಯ ನವರ ಜಯಂತಿ
ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾ ಆಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟುಗೂಡಿ ಆಚರಣೆ ಮಾಡಬೇಕೆಂದು ಮುಖಂಡರ ಜೊತೆಗೂಡಿ ಚರ್ಚಿಸಲಾಗಿದ್ದು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹನೂರಿನಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ. ನುಲಿಯ ಚಂದಯ್ಯ ಅವರ ವಚನವನ್ನು , ತತ್ವ ವನ್ನು ಮೈಗೂಸಿಕೊಳ್ಳಬೇಕು, ಹಾಗೆಯೇ ನಮ್ಮ ಕೊರಮ ಸಮುದಾಯದ ಜನರು ಸಾವಿರಾರು ವರ್ಷಗಳಿಂದ ನೋವಿಂದ ಬದುಕುತ್ತಿದ್ದಾರೆ ಇದಕ್ಕೆ ಅಂತ್ಯ ಹಾಡಲು ಸಮುದಾಯದ ಪ್ರತಿಯೊಬ್ಬರು ಶಿಕ್ಷಕರಾಗಬೇಕು ಈ ನಿಟ್ಟಿನಲ್ಲಿ ಸಾಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಆರ್. ಐ ಮಹದೇವಸ್ವಾಮಿ, ಗ್ರಾಮ ಲೆಕ್ಕಿಗ ಶೇಷಾಣ್ಣ, ಕುಳುವ ಸಂಘದ ಮುಖಂಡರಾದ ಪಂಚಾಕ್ಷರಿ. ಎಂ, ಜಿಲ್ಲಾಧ್ಯಕ್ಷ ಮಾದೇಶ್, ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ವಕೀಲ ಮಹದೇವ್, ಇಂಜಿನಿಯರ್ ರವಿ, ಶಿವಕುಮಾರ್, ನಾಗಾಸುಂದರ್, ವೆಂಕಟರಾಜ್, ಶಿವರಾಜ್, ಶ್ರೀನಾಥ್, ಮುತ್ತುರಾಜ್, ಮುತ್ತಪ್ಪ, ರಾಜೇಂದ್ರ, ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು..
ವರದಿ ಉಸ್ಮಾನ್ ಖಾನ್.