ರಕ್ಷಾಬಂಧನ ಅಣ್ಣ-ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ,ಸಡಗರದಿಂದ ಆಚರಿಸಲಾಗುತ್ತದೆ.
ಮಹಾಭಾರತದಲ್ಲಿ ಶ್ರಾವಣ ಪೂರ್ಣಿಮೆಯಂದು ನಡೆದ ಈ ಸಂದರ್ಭ ಸುಪ್ರಸಿದ್ಧವಾದುದು. ಶಿಶುಪಾಲನನ್ನು ಸಂಹರಿಸಲು ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ ಕೃಷ್ಣನ ಕೈಬೆರಳಿಗೆ ಗಾಯವಾಗುತ್ತದೆ ಅಲ್ಲೇ ಇದ್ದ ದ್ರೌಪದಿ ಕೂಡಲೇ ತನ್ನ ಸೀರೆಯ ಸೆರಗನ್ನು ಹರಿದು ಶ್ರೀಕೃಷ್ಣನಿಗೆ ಕಟ್ಟುತ್ತಾಳೆ. ಆಗ ಕೃಷ್ಣನು ಮುಂದೊಂದು ಋಣವನ್ನು ತೀರಿಸುತ್ತೇನೆ ಎಂದು ದ್ರೌಪದಿಗೆ ಮಾತು ಕೊಡುತ್ತಾನೆ. ಅದರಂತೆಯೇ ಅದಕ್ಕೆ ಪ್ರತಿಯಾಗಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುವ ಸಂದರ್ಭದಲ್ಲಿ ಕೃಷ್ಣನು ಸೀರೆಯನ್ನು ದ್ರೌಪದಿಗೆ ದಯಪಾಲಿಸುತ್ತಾನೆ. ಈ ಒಂದು ಪರಿಕಲ್ಪನೆ ರಕ್ಷಾ ಬಂಧನದ ಒಂದು ಆರಂಭವೆಂದೂ ಹಿರಿಯರು ಪೂರ್ವಜರು ಹೇಳುತ್ತಾರೆ.
ಭಾತೃತ್ವದ ಅನುಬಂಧದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿನದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ ಆದರೆ ಈ ವರ್ಷ ಆಗಸ್ಟ್ 30 ಅಥವಾ 31 ರಾಖಿ ಕಟ್ಟಲು ಯಾವುದು ಶುಭದಿನ ಎಂಬ ಕುರಿತು ಗೊಂದಲಗಳಿವೆ ಹಾಗಾದರೆ ರಾಖಿ ಹಬ್ಬ ಎಂದು?
ದೃಕ್ ಪಂಚಾಂಗದ ಪ್ರಕಾರ ರಕ್ಷಾಬಂಧನ ಅಥವಾ ರಾಖಿ ಹಬ್ಬದ ಆಚರಣೆ ಆಗಸ್ಟ್ 30ರ ಬುಧವಾರದಂದು ಬರಲಿದೆ ಆದರೆ ಭದ್ರಕಾಲಾದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭಮುಹೂರ್ತವಾಗಿದೆ ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಪೂರ್ಣಿಮೆ ದಿನ ರಕ್ಷಾ ಬಂಧನ ಆಚರಣೆ ಇರುತ್ತದೆ ಆದರೆ ಈ ಬಾರಿ ಅಧಿಕ ಮಾಸವಿದೆ ಅಧಿಕ ಮಾಸದ ಪ್ರಭಾವದಿಂದ ರಕ್ಷಾಬಂಧನ ಹಬ್ಬವನ್ನ ಉತ್ತರ ಭಾರತದಲ್ಲಿ ಎರಡು ದಿನ ಆಚರಿಸ್ತಾರೆ ಈ ಬಾರಿ ಆಗಸ್ಟ್ 30 ಹಾಗೂ 31 ಎರಡೂ ದಿನಗಳಲ್ಲಿ ಹಬ್ಬದ ಆಚರಣೆ ಇದೆ.ಅಧಿಕೃತವಾಗಿ 31ನೇ ತಾರೀಖು ಆಚರಿಸಬೇಕು ಅಂತ ಪಂಚಾಂಗ ಹೇಳುತ್ತದೆ. ಇದಕ್ಕೆ ಕಾರಣ ಆಗಸ್ಟ್ 30ನೇ ತಾರೀಕನ್ನು ಭದ್ರಕಾಲ ಎಂದು ಪರಿಗಣಿಸಲಾಗುದೆ. ಭದ್ರಕಾಲ ಎಂದರೆ ಅಶುಭ ದಿನ ಎಂದು ಅರ್ಥ.ಅವತ್ತು ರಾಖಿ ಕಟ್ಟಿದ್ರೆ ಅಣ್ಣಂದಿರಿಗೆ ಕೆಟ್ಟದಾಗುತ್ತೆ ಅಂತ ನಂಬಿಕೆ. ಹೀಗಾಗಿ ಭದ್ರಕಾಲದಲ್ಲಿ ಹಬ್ಬ ಆಚರಿಸದೆ ಮರುದಿನ ಆಚರಿಸಬೇಕು ಅಂತ ಪಂಚಾಂಗ, ಶಾಸ್ತ್ರ ಹೇಳುತ್ತದೆ. ಇದಕ್ಕೆ ಪುರಾಣಗಳ ಐತಿಹ್ಯ ಕೂಡ ಇದೆ. ಭದ್ರಕಾಲದಲ್ಲಿ ಶೂರ್ಪನಖಿ ಅವನ ಅಣ್ಣ ರಾವಣನಿಗೆ ರಾಖಿ ಕಟ್ಟಿದ್ದಳಂತೆ. ಅದೇ ವರ್ಷ ರಾವಣನ ಸಾವು ಕೂಡ ಆಗಿತ್ತು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಭದ್ರಕಾಲ ಅಂದ್ರೆ ಹಬ್ಬ ಆಚರಿಸೋಕೆ ಕೆಟ್ಟ ದಿನ ಎಂದು ಅರ್ಥ. ಅವತ್ತು ರಾಖಿ ಕಟ್ಟದೆ ಮರುದಿನ ಕಟ್ಟುವುದು ಉತ್ತಮ.
ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಸಂಬಂಧವೇಂದರೆ ಅದು ಅಣ್ಣ ತಂಗಿಯ ಅಕ್ಕ ತಮ್ಮಂದಿರ ಸಂಬಂಧಗಳು. ಅಕ್ಕ ತಮ್ಮ ಅನ್ನೋ ಸಂಬಂಧಕ್ಕೆ ರಕ್ತ ಹಂಚಿ ಕೊಂಡ ಹುಟ್ಟ ಬೇಕು ಅಂತ ಏನಿಲ್ಲ. ಅಕ್ಕ ಅನ್ನೋ ಭಾವನೆ ಮನಸ್ಸಿನಲ್ಲಿ ಮೂಡಿದರೆ ಸಾಕು. ಅಂತ ಸಂಬಂಧದ ಆಚರಣೆಯ ದಿನ ಇಂದು. ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಕಟ್ಟುವುದು ಬಹಳ ಮುಖ್ಯ. ರಾಖಿಯ ಮೊದಲ ಗಂಟು ಸಹೋದರನ ದೀರ್ಘಾಯುಷ್ಯಕ್ಕಾಗಿ, ಎರಡನೆಯ ಗಂಟು ಅವನ ಸ್ವಂತ ದೀರ್ಘಾಯುಷ್ಯಕ್ಕಾಗಿ ಎಂದು ನಂಬಲಾಗಿದೆ. ಮತ್ತೊಂದೆಡೆ, ಮೂರನೇಯ ಗಂಟು ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧದ ದೀರ್ಘಾಯುಷ್ಯಕ್ಕಾಗಿ ಎನ್ನಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮೂರು ಗಂಟುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ದೇವರುಗಳಿಗೆ ಸಂಬಂಧಿಸಿವೆ.
ನನ್ನ ಎಲ್ಲಾ ಅಣ್ಣ ತಮ್ಮಂದಿರಿಗೆ ಈ ನಿಮ್ಮ ತಮ್ಮ ಅಥವಾ ಅಣ್ಣಯ್ಯ ಕಡೆಯಿಂದ ರಕ್ಷಾಬಂಧನದ ಶುಭಾಶಯಗಳು. ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ.
ಲೇಖನ-ವಿಶ್ವನಾಥ ಹರೋಲಿ