ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ್ ಜನಸೇವಾ ಶೈಕ್ಷಣಿಕ ಟ್ರಸ್ಟ್ ರಿ ವತಿಯಿಂದ ರಕ್ಷಾ ಬಂಧನ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಶ್ರೀ ನಿಷ್ಟಿ ಕಡ್ಲಪ್ಪನವರ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು” ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷರಾದ ರಾಜಾ ಚನ್ನಪ್ಪ ನಾಯಕ ಅವರು ಈ ಇಂದಿನ ಆಧುನಿಕ ಯುಗದಲ್ಲಿ ಹಸಿರನ್ನು ಮತ್ತು ಕಾಡನ್ನು ನಾಶ ಮಾಡಿ ದೊಡ್ಡ ದೊಡ್ಡ ಬಿಲ್ಡಿಂಗ್ ಮನೆಗಳು ಹಾಗೂ ಕಾರ್ಖಾನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಇದರಿಂದ ಪ್ರಾಕೃತಿಕ ಅವಘಡಗಳು ಬಹಳ ಆಗ್ತಾ ಇದಾವೆ ನಾವು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ಮಳೆ ಬೆಳೆ ಚೆನ್ನಾಗಿ ಆಗಿ ಒಳ್ಳೆ ಗಾಳಿ ಬರುವುದರಿಂದ ನಮ್ಮ ಆರೋಗ್ಯವು ಸುಧಾರಿಸುತ್ತದೆ ಜೊತೆಗೆ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಹಾಗೂ ಟ್ರಸ್ಟಿನ ವತಿಯಿಂದ ಹಸಿರು ಗಿಡಗಳನ್ನು ಬೆಳೆಸುವುದು ಸಾಮಾಜಿಕ ಕಳಕಳಿ ಮೂಡಿಸುವುದು ದೇಶಭಕ್ತಿ ಕಾರ್ಯಕ್ರಮಗಳು ಮಾಡುವುದು ಹಿಂದುಳಿದ ಅಲ್ಪಸಂಖ್ಯಾತರ ಬಡ ಮಕ್ಕಳ ಅನಾಥ ಮಕ್ಕಳ ಪರವಾಗಿ ಕೆಲಸ ಮಾಡುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ನಾವು ಮಾಡುತ್ತಾ ಬಂದಿದ್ದೇವೆ ಮುಂದೆಯೂ ಕೂಡ ನಮ್ಮ ಟ್ರಸ್ಟಿನ ವತಿಯಿಂದ ಅನೇಕ ಜನಪರ ಕಾಳಜಿ ಉಳ್ಳ ಕಾರ್ಯಕ್ರಮಗಳು ಮಾಡುತ್ತೇವೆ ಇದಕ್ಕೆ ತಮ್ಮೆಲ್ಲರ ಸಹಕಾರ ಸಹಾಯ ಅಗತ್ಯ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಠದ ಪೀತಾಧಿಪತಿಗಳಾದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹಾಗೂ ಅಬಿದ್ ಹುಸೇನ ರಾಜಾ ಉಡಚಪ್ಪ ನಾಯಕ,ಕೊನೇರ, ಬಲಭೀಮ,ಹರ್ಷವರ್ಧನ್ ನಾಯಕ್ ವೆಂಕಟೇಶ್, ಶರಣಬಸಪ್ಪ ಮತ್ತಿತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.