ನ್ಯಾನೋ ಕಥೆ:ಸಂಭ್ರಮ-ಸಂಕಷ್ಟ
ಅಂದು ಪ್ರಸಿದ್ಧ ನಟನೊಬ್ಬನ ಸಿನಿಮಾ ಬಿಡುಗಡೆಯಾಗಿತ್ತು...ಅಭಿಮಾನಿಗಳೆಲ್ಲಾ ಚಿತ್ರಮಂದಿರ ಮುಂದೆ ನಟನ ದೊಡ್ಡ ಕಟೌಟ್ ಗೆ ಕೊಡಪಾನಗಳಲ್ಲಿ ಹಾಲನ್ನು ಅಭಿಷೇಕ ಮಾಡುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.ಅಲ್ಲೆ ಅನತಿ ದೂರದಲ್ಲಿ ಹಾಲಿಲ್ಲದೇ ಅಳುತ್ತಿದ್ದ ಮಗುವಿನ ಧ್ವನಿ ಅರಣ್ಯರೋಧನದಂತಾಗಿತ್ತು…!


