ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಮಸ್ಕಿ ಮಹಾಯುದ್ಧ – ಮುಂಬರುವ ಚುನಾವಣೆಗೆ ಕಾಂಗ್ರೇಸ್ ಬಿಜೆಪಿ ತಿಕ್ಕಾಟ, ಹಾರಾಡುವುದಂತೂ ಖಚಿತ ಬಿಜೆಪಿ ಬಾವುಟ. ನಡೆಯಲಿದೆ ಕ್ಷೇತ್ರದಲಿ ಪ್ರತಾಪ ಪರ್ವ

ಕಳೆದ ಉಪಚುನಾವಣೆಗೆ ಬಿರುಸಿನ ಬಿರುಗಾಳಿಯಲ್ಲಿ ಸಾಗಿದ್ದ ಕಾಂಗ್ರೆಸ್ ಬಿಜೆಪಿ ಯ ಪಕ್ಷ ಪ್ರಚಾರ ಇಡೀ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ತಿಕ್ಕಾಟ ನಡೆದಿತ್ತು ಇಡೀ ರಾಜ್ಯ ರಾಜಕಾರಣವೇ ಮಸ್ಕಿಯತ್ತ ಗಮನಹರಿಸುವಂತೆ ಮಾಡಿತ್ತು ಆದರೇ ಪಕ್ಷಪಾತ ಹಾಗೂ ಅನರ್ಹ ಶಾಸಕರಿಗೆ ನಾವು ಮತ ನೀಡುವುದಿಲ್ಲ ಈ ಬಾರಿ ನಮ್ಮ ಕ್ಷೇತ್ರಕ್ಕೆ ಒಬ್ಬ ಹೊಸ ನಾಯಕನನ್ನು ಆಯ್ಕೆ ಮಾಡುತ್ತೇವೆ ಅಂತಹ ವ್ಯಕ್ತಿ ನಮ್ಮ ಆರ್. ಬಸನಗೌಡ ತುರ್ವಿಹಾಳ್ ಅಂತ ಏನೇನೋ ಹೇಳಿದ್ದರು ಕೊನೆಗೆ ಶ್ರೀ ಪ್ರತಾಪಾಗೌಡ ಪಾಟೀಲರನ್ನು ಕೈ ಬಿಡಲಾಗಿತ್ತು ಅದ್ಯಾಗೋ ಅನುಕಂಪದ ಆಧಾರದ ಮೇಲೆ ಆರ್. ಬಸನಗೌಡ ತುರ್ವಿಹಾಳ್ ಅವರು ಜಯಶಾಲಿಗಳಾದರೂ ಆದರೇ ಜಯಶಾಲಿಗಳಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಕೆಲವು ದಿನಗಳಿಂದ ಇಲ್ಲಿಯವರೆಗೂ ತಮ್ಮ ಅಭಿಮಾನಕ್ಕೋ ಅಧಿಕಾರಕ್ಕೋ ಮಾರು ಹೋಗಿ ಮತ ಹಾಕಿದ ಮತದಾರು ಇಂದು ಮತ್ತೇ ಮುಂಬರುವ 2023ರ ಚುನಾವಣೆಗೆ ಮತ್ತೇ ಕಮಲವೇ ಸೂಕ್ತ ಎಂಬಂತೆ ಮಾಜಿ ಶಾಸಕರಾದ ಶ್ರೀ ಪ್ರತಾಪಗೌಡ ಪಾಟೀಲ್ ಅವರ ಹೆಸರು ಇಡೀ ಕ್ಷೇತ್ರದ ತುಂಬೆಲ್ಲಾ ಕೇಳಿ ಬರುತ್ತಿದೆ. ಜನ ಮರಳೋ ಜಾತ್ರೆ ಮರಳೋ, ಅಧಿಕಾರ ಮುಖ್ಯವಲ್ಲ ಅಭಿಮಾನ ಮುಖ್ಯ, ಅಭಿಮಾನದ ಜೊತೆ ಜನಗಳಿಗೆ ಅನುದಾನವೂ ಮುಖ್ಯ ಎಂಬಂತೆ ಜನರು ಪ್ರತಾಪಾಗೌಡರ ಅಭಿಮಾನಕ್ಕೆ ಹಾಗೂ ಅವರ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಮಾಜಿಕ ಕಾರ್ಯ ಮತ್ತು ಅವರು ತಂದಿರುವ ಅನುದಾನಗಳನ್ನು ಅವಲೋಕಿಸಿದ ಜನತೆ ಮತ್ತೇ ಅವರೊಂದಿಗೆ ಹೆಜ್ಜೆಯನ್ನೀಡುತ್ತಿದೆ ಮತ್ತೊಮ್ಮೆ ಪ್ರತಾಪಗೌಡ ಪಾಟೀಲ್ ಎಂಬಂತಹ ಘೋಷಣೆಗಳು ಎಲ್ಲೆಲ್ಲೋ ಕೇಳಿ ಬರುತ್ತಿವೆ. ಮತದಾರರು ನಂಬಿದ ನಾಯಕನನ್ನು ಬಿಟ್ಟು ಬೇರೊಬ್ಬ ನಾಯಕನ ಹಿಂಬಾಲಕರಾಗಲು ಕಾರಣ ಮತದಾರರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಬೇಡಿದ ಅನುದಾನಗಳನ್ನು ತಂದು ಕೊಡದಿರುವ ನಾಯಕನ ಜೊತೆ ಇದ್ದೂ ವ್ಯರ್ಥ ಅದೆಷ್ಟೋ ಸರ್ಕಾರದ ಯೋಜನೆಗಳನ್ನು ಅವರ ಅಧಿಕಾರದಲ್ಲಿ ಪ್ರತಾಪಾಗೌಡರು ತಂದು ಕೊಟ್ಟಿದ್ದರೂ ಅದನ್ನು ಮುನ್ನೆಡೆಸಿಕೊಂಡು ಹೋಗುವ ಗಟ್ಟಿತನ ಕಾಣುತ್ತಿಲ್ಲ ಹಾಗೂ ಹೊಸ ಹೊಸ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಂತಹ ಯಾವುದೇ ಪ್ರಯತ್ನಗಳೂ ಕಾಣುತ್ತಿಲ್ಲ ಹಾಗೂ ನಿಗಮ ಮಂಡಳಿಗಳಿಂದ ಸಿಗುವ ಸೌಲಭ್ಯ ಸಹಕಾರಗಳಂತೂ ಕ್ಷೇತ್ರದ ಜನತೆಗೆ ಸರಿಯಾಗಿ ಒಲಿಯುತ್ತಿಲ್ಲ ಮತದಾರರ ಪ್ರತೀ ಗ್ರಾಮಕ್ಕೆ ಭೇಟಿ ನೀಡಿ ಅವರ ಸಾಮಾಜಿಕ ಕುಂದು ಕೊರತೆಗಳ ಬಗ್ಗೆ ವಿಚಾರಿಸುತ್ತಿಲ್ಲ,ಗ್ರಾಮ ಮಟ್ಟದಿಂದ ತಾಲೂಕಿಗೆ ಬರಲು ಅದೆಷ್ಟೋ ಹಳ್ಳಿಗಳಲ್ಲಿ ರಸ್ತೆಗಳು ಹದೆಗೆಟ್ಟಿದ್ದರೂ ಗಮನಹರಿಸುತ್ತಿಲ್ಲ, ಚರಂಡಿ ವ್ಯವಸ್ಥೆ ಹಾಳಾಗಿ ರಸ್ತೆಯ ಮೇಲೆ ಹರಿಯುತ್ತಿದ್ದರೂ ಯಾರೂ ಇಲ್ಲಿಯವರೆಗೆ ವಿಚಾರ ಮಾಡಿಲ್ಲ, ಕೆಲವೊಂದು ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆ ಹದೆಗೆಟ್ಟಿದೆ, ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳು ಇದ್ದರೂ ಕೂಡ ಇನ್ನೂವರೆಗೂ ಕೆಲವೊಂದು ಹಳ್ಳಿಗಳಿಗೆ ಶಾಸಕರು ಆರ್. ಬಸನಗೌಡ ತುರ್ವಿಹಾಳ ಅವರು ಭೇಟಿ ನೀಡಿಲ್ಲ ಜನ ಸ್ಪಂದನೆ ಅವರಲ್ಲಿ ಕಾಣುತ್ತಿಲ್ಲ ಎಂದು ಮತದಾರರು ಮುನಿಸಿಕೊಂಡಿದ್ದಾರೆ. ಆದರೇ ಮತ ಹಾಕುವಾಗ ಇದ್ದ ಹರ್ಷ ನಮ್ಮಲ್ಲಿ ಇಲ್ಲ ಮತ್ತು ಮತ ಹಾಕಿಸಿಕೊಂಡ ನೆನಪು ಅವರಲಿಲ್ಲ ಮುಂದೆ ಹೋದರೂ ಕ್ಯಾರೇ ಎನ್ನುತ್ತಿಲ್ಲ ಇಷ್ಟೊಂದು ನಮ್ಮ ಶಾಸಕರು ಬದಲಾಗಿದ್ದಾರೆ ನಾವು ಮಾಡಬಾರದ ತಪ್ಪು ಮಾಡಿದ್ದೇವೆ ಇನ್ನು ಮುಂದೆ ನಮ್ಮ ನಿಕಟಪೂರ್ವ ಶಾಸಕರಾದ ಶ್ರೀ ಪ್ರತಾಪಗೌಡರೇ ನಮ್ಮ ಕ್ಷೇತ್ರಕ್ಕೆ ನಮ್ಮ ಜನತೆಗೆ ಅವರೇ ಆಶಾಕಿರಣ ನಮ್ಮ ಕ್ಷೇತ್ರದ ಅಭಿರುದ್ಧಿ ಅವರ ಕೈಯಲ್ಲಿದೆ ಮುಂಬರುವ 2023ರ ಚುನಾವಣೆಗೆ ಪ್ರತಾಪಗೌಡರೇ ನಾಯಕರು ಮಸ್ಕಿ ಮಹಾಯುದ್ಧದಲ್ಲಿ ಬಿಜೆಪಿ ಬಾವುಟ ಹಾರಾಡುವುದಂತೂ ಖಚಿತ ಜಯಶಾಲಿಗಳಾಗಿ ಪ್ರಾತಾಪ ಪರ್ವ ಸೃಷ್ಟಿಯಾಗುವುದು ನಿಶ್ಚಿತ ಎಂದು ಮಸ್ಕಿ ಕ್ಷೇತ್ರದ ಸುಮಾರು ಗ್ರಾಮಗಳ ಜನರು ನಿರ್ಧಾರಿಸಿದ್ದಾರೆ. ಕಾಂಗ್ರೆಸ್ ಕೈ ಹಿಡಿದರೆ ನಮ್ಮ ಆರ್. ಬಸನಗೌಡರು ನಮಗೆ ನಮ್ಮ ಗ್ರಾಮದ ಪ್ರತೀ ಜನತೆಗೆ ಹೊಸ ಹೊಸ ಅವಕಾಶಗಳನ್ನೋ ಅನುದಾನಗಳನ್ನೋ ತರುವಲ್ಲಿ ಸಹಕರಿಸುತ್ತಾರೆ ಅಂತ ಏನೆಲ್ಲಾ ಕನಸನ್ನು ಕಟ್ಟಿಕೊಂಡಿದ್ದ ಜನ ಇಂದು ಆ ಕನಸುಗಳೆಲ್ಲಾ ಇವರಿಂದ ನೆರವೇರಲು ಸಾಧ್ಯವಿಲ್ಲ ಎಂದು ತಿಳಿದು ಮತದಾರರು ಮಾಜಿ ಶಾಸಕರ ಹತ್ತಿರ ಹೋಗಿ ತಮಗೆ ಬೇಕಾದ ಅವಕಾಶಗಳನ್ನು ಪಡೆಯುವುದಷ್ಟೇ ಅಲ್ಲದೇ ಅಭಿಮಾನದಿಂದ ಒಂದೆರೆಡು ಮಾತುಗಳನ್ನಾಡಿ ಜನರ ಕಷ್ಟಗಳನ್ನು ಆಲಿಸುವ ಆ ಮಾನವೀಯ ಗುಣವಿದೆ ಅಲ್ವಾ ಆ ಗುಣಕ್ಕೆ ಇಂದು ಜನ ಮಾರುಹೋಗಿದೆ ಪ್ರತೀ ಮತದಾರರು ಶಾಸಕರಿಂದ ಏನೂ ಬಯಸುವುದಿಲ್ಲ ಪ್ರೀತಿ ವಾತ್ಸಲ್ಯ ಒಂದಿದ್ದರೆ ಸಾಕು ಅವರು ಅಧಿಕಾರದಲ್ಲಿದ್ದರೂ ನಾಯಕರು ಅಧಿಕಾರದ ಹೊರಗಿದ್ದರೂ ನಾಯಕರಾಗಿರುತ್ತಾರೆ ಎನ್ನುವುದಕ್ಕೆ ಪ್ರತಾಪಗೌಡರೇ ಸಾಕ್ಷಿ. ಬದುಕಿನಲ್ಲಿ ಎಡವದೇ ಗೆದ್ದೋರಿಗೆ ಎಷ್ಟು ಅನುಭವಿರುತ್ತೋ, ಎಡವಿ ಬಿದ್ದು ಎದ್ದು ಗೆದ್ದೋರಿಗೆ ಸಾಕಷ್ಟು ಅನುಭವವಿರುತ್ತೆ ಅದು ಮಾನವತಾವಾದಿ ಶ್ರೀ ಪ್ರಾತಾಪಗೌಡರೇ ಹೊರತು ಮತ್ಯಾವ ನಾಯಕರಿಗೆ ಮತದಾರರ ಭಾವನೆಗಳು ಅರ್ಥವಾಗುವುದಿಲ್ಲ ಮಸ್ಕಿ ಕ್ಷೇತ್ರದ ಅಭಿರುದ್ದಿ ಹರಿಕಾರ ಜನ ಮನಗಳ ನಾಯಕ ಅಂತೆಲ್ಲಾ ಕೂಗು ಪ್ರತೀ ಗ್ರಾಮದಲ್ಲಿ ಕೇಳಿ ಬರುವುದನ್ನು ನೋಡಿದರೆ ಈ ಬಾರಿ ಶ್ರೀ ಪ್ರತಾಪಗೌಡ ಪಾಟೀಲ್ ಅವರು ಜಯಶಾಲಿಗಳಾಗಿ ಹೊರಬರುವುದು ಖಚಿತವಾಗಿದೆ ಮತ್ತು ಕಟ್ಟಿಟ್ಟಬುತ್ತಿ ಎಂದು ಹೇಳುವಂತಹ ಸನ್ನಿವೇಶ ಕ್ಷೇತ್ರದಲ್ಲಿ ಕಾಣುತ್ತಿವೆ.

ಹನುಮಂತ ದಾಸರ ಹೊಗರನಾಳ
ಯುವ ಬರಹಗಾರರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ