
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಂಚೋಳಿ ಇಕೋ ಕ್ಲಬ್ ಕಾರ್ಯಕ್ರಮದಡಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡಹಳ್ಳಿಯಲ್ಲಿ ಊರಿನ ಪ್ರಮುಖ ಓಣಿಗಳಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಘೋಷಣೆ ಕೂಗುತ್ತಾ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ರಕ್ಷಣೆಯು ಭೂಮಿಯ ಮೇಲಿನ ಜೀವಸಂಕುಲದ ಉಳಿವಿಗಾಗಿ ಪ್ರಕೃತಿ, ಅರಣ್ಯ, ನೀರು ಮತ್ತು ಗಾಳಿಯನ್ನು ಸಂರಕ್ಷಿಸುವ ಪ್ರಕ್ರಿಯೆಯಾಗಿದೆ. ಮಿತಿಮೀರಿದ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಉಂಟಾಗುವ ಹಾನಿಯನ್ನು ತಡೆಯಲು, ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಕಡಿಮೆ ಮಾಡುವುದು, ಸಂಪನ್ಮೂಲಗಳ ಮಿತಬಳಕೆ ಮತ್ತು ಮಾಲಿನ್ಯ ತಡೆಗಟ್ಟುವಿಕೆ ಅತ್ಯಗತ್ಯ. ಇದು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಒದಗಿಸಲು ನಮ್ಮ ಜವಾಬ್ದಾರಿಯಾಗಿದೆ ಈ ಸಂದರ್ಭದಲ್ಲಿ ಶ್ರೀಮಂತ ಕೆ ಗಂಜಿ ಮುಖ್ಯ ಗುರುಗಳು ಸರ್ಕಾರಿ ಹಿ. ಪ್ರಾ. ಶಾಲೆ ಕುಡ್ದಳ್ಳಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮಂತ್ ಕೆ ಗಂಜಿ ಮುಖ್ಯ ಗುರುಗಳು ಸ. ಹಿ. ಪ್ರಾ. ಶಾ. ಕುಡ್ಹಳ್ಳಿ, ಅಧ್ಯಕ್ಷರು ರಮೇಶ್ ಎಸ್ ಕುಡಹಳ್ಳಿ ಉಪ ಅಧ್ಯಕ್ಷರು ಹನುಮವ್ವ ಬಸವರಾಜ್ ಪೂಜಾರಿ ಬಾಲಾಜಿ, ಮಾರುತಿ ಹೂಗಾರ್, ಭವಾನಿ ಶಂಕರ್,ಅಂಬಿಕಾ ದೇವನ್ ಕಾರ್, ಸಂತೋಷ ಕರ್ನಕ್, ಶಿವಲೀಲಾ ಜಗಪ್ಪ ,ನಾಗಮ್ಮ ನಾಟಿಕಾರ್, ಪ್ರಭಕಾರ್ ಭಂಡಾರಿ,ಶಂಕರ್ ಕಣ್ಣಿ,ಅತಿಥಿ ಶಿಕ್ಷಕಿ ಪಲ್ಲವಿ ವೀರೇಶ್ ದೇವನಕಾರ್, ಅಡುಗೆ ಸಿಬ್ಬಂದಿಗಳು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್





















One Response
ಪರಿಸರ ಜಾಗೃತಿ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡು ಕುಡ್ದಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಮುಖ್ಯ ಗುರುಗಳು ಸಹಶಿಕ್ಷಕರು ಮತ್ತು ಚಿಂಚೋಳಿಯ ಇಕೋ ಕ್ಲಬ್ ನವರ ಸಹಕಾರದೊಂದಿಗೆ ಕುಡ್ಡಳ್ಳಿಯಲ್ಲಿ ಜನಜಾಗೃತಿ ಮೂಡಿಸಿದ ತಮ್ಮೆಲ್ಲರಿಗೂ ಅಭಿನಂದನೆಗಳು.